ಬೆಂಗಳೂರು(ಜ.04): ಕೊನೆಗೂ ಎಚ್ಚೆತ್ತುಕೊಂಡ ಬೆಸ್ಕಾಂ ಸಂಸ್ಥೆಯು .5 ಲಕ್ಷವರೆಗಿನ ವಿದ್ಯುತ್‌ ಪೂರೈಕೆಯ ಸುಧಾರಣೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಲು ಬೆಸ್ಕಾಂನ ವಿವಿಧ ಹಂತದ ಅಧಿಕಾರಿಗಳಿಗೆ ಹಣಕಾಸು ಅಧಿಕಾರವನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ .5 ಲಕ್ಷದೊಳಗಿನ ಕಾಮಗಾರಿಗಳನ್ನು ಎಸ್‌.ಆರ್‌. ದರದಂತೆ (ಶೆಡ್ಯೂಲ್‌ ದರ) ಸ್ಥಳೀಯ ಗುತ್ತಿಗೆದಾರರಿಗೆ ನೀಡುವಂತೆ ಅ.29ರಂದು ಮುಖ್ಯಮಂತ್ರಿಗಳೇ ಆದೇಶಿಸಿದ್ದರು. ಆದೇಶದಲ್ಲಿ ಎಸ್‌.ಆರ್‌. ದರದ ಅನ್ವಯ ನೀಡುವ ಕಾಮಗಾರಿಯ ಮಿತಿಯನ್ನು .1 ಲಕ್ಷಗಳಿಂದ .5 ಲಕ್ಷಕ್ಕೆ ಹೆಚ್ಚಳ ಮಾಡಿದ್ದರು. ಈ ಆದೇಶವನ್ನು ಎಲ್ಲಾ ಎಸ್ಕಾಂಗಳು ಅನುಷ್ಠಾನಕ್ಕೆ ತಂದರೂ ಬೆಸ್ಕಾಂ ತಂದಿರಲಿಲ್ಲ. ಬದಲಾಗಿ ಬೃಹತ್‌ ಕಂpನಿಗಳಿಗೆ ದುಪ್ಪಟ್ಟು ದರಕ್ಕೆ ಟೆಂಡರ್‌ ನೀಡಲು ಸಜ್ಜಾಗಿತ್ತು.

ಕೊರಿಯನ್ ಮಾದರಿಗೆ ಕೋರಮಂಗಲ ರಾಜ ಕಾಲುವೆ ಅಭಿವೃದ್ಧಿ! ಸ್ವಚ್ಛ ನೀರು, ಸುಂದರ ಉದ್ಯಾನ

ಹೀಗಾಗಿ ‘ಮುಖ್ಯಮಂತ್ರಿಗಳ ಆದೇಶಕ್ಕೂ ಕ್ಯಾರೆ ಎನ್ನದ ಬೆಸ್ಕಾಂ’ ಎಂಬ ಶೀರ್ಷಿಕೆಯಲ್ಲಿ ನಿರ್ಲಕ್ಷ್ಯದ ಬಗ್ಗೆ ಜ.1 ರಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತು. ಇದರ ಬೆನ್ನಲ್ಲೇ ಜ.2 ರಂದು ಆದೇಶ ಹೊರಡಿಸಿರುವ ಬೆಸ್ಕಾಂ .1 ಲಕ್ಷಗಳಿಂದ .5 ಲಕ್ಷವರೆಗಿನ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಲು ಅನುವಾಗುವಂತೆ ವಿವಿಧ ಹಂತದ ಅಧಿಕಾರಿಗಳಿಗೆ ಹಣಕಾಸು ಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಎಲೆಕ್ಟ್ರಿಕಲ್‌ ಮತ್ತು ಸಿವಿಲ್‌ ಕಾಮಗಾರಿಗಳ ಎಸ್‌ಆರ್‌ ದರ (ಶೆಡ್ಯೂಲ್‌ ದರ) ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಎಸ್‌.ಆರ್‌. ದರದಂತೆ ಗುತ್ತಿಗೆ ನೀಡಿ ಕೆಲಸ ಮಾಡಿಸಬಹುದು. ಇದಕ್ಕಾಗಿ ಮುಖ್ಯ ಪ್ರಧಾನ ವ್ಯವಸ್ಥಾಪಕರು ಅಥವಾ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ .1 ಲಕ್ಷಗಳಿಂದ .5 ಲಕ್ಷ, ಪ್ರಧಾನ ವ್ಯವಸ್ಥಾಪಕರು ಅಥವಾ ಸೂಪರಿಂಡೆಂಟ್‌ ಇ.ಇ.ಗೆ .1 ಲಕ್ಷಗಳಿಂದ .4 ಲಕ್ಷ, ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ .1 ಲಕ್ಷಗಳಿಂದ .3 ಲಕ್ಷ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ .50 ಸಾವಿರವರೆಗಿನ ಕಾಮಗಾರಿಗಳನ್ನು ಮಂಜೂರು ಮಾಡುವುದು ಹಾಗೂ ಹಣ ಬಿಡುಗಡೆ ಮಾಡುವ ಅಧಿಕಾರವನ್ನು ನೀಡಲಾಗಿದೆ.