Asianet Suvarna News Asianet Suvarna News

ರಾಕ್ಷಸಿ ಹಳ್ಳದಲ್ಲಿ ಈಜುಕೊಳ, ಉದ್ಯಾನ ಆಟದ ಮೈದಾನ ನಿರ್ಮಾಣ: ಮುನಿರತ್ನ

ಲಗ್ಗೆರೆ ವಾರ್ಡ್‌ ವ್ಯಾಪ್ತಿಯ ರಾಕ್ಷಸಿ ಹಳ್ಳ ಎಂಬಲ್ಲಿ ಡಾ ಅಂಬರೀಶ್‌ ಈಜುಕೊಳ, ಡಾ ರಾಜಕುಮಾರ್‌ ಉದ್ಯಾನವನ, ಸಾಹಸ ಸಿಂಹ ಡಾ ವಿಷ್ಣುವರ್ಧನ್‌ ಆಟದ ಮೈದಾನ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

Construction of swimming pool garden playground at Rakshasi Halla says Muniratna rav
Author
First Published Oct 17, 2022, 10:53 AM IST

ಬೆಂಗಳೂರು (ಅ.17) : ಲಗ್ಗೆರೆ ವಾರ್ಡ್‌ ವ್ಯಾಪ್ತಿಯ ರಾಕ್ಷಸಿ ಹಳ್ಳ ಎಂಬಲ್ಲಿ ಡಾ ಅಂಬರೀಶ್‌ ಈಜುಕೊಳ, ಡಾ ರಾಜಕುಮಾರ್‌ ಉದ್ಯಾನವನ, ಸಾಹಸ ಸಿಂಹ ಡಾ ವಿಷ್ಣುವರ್ಧನ್‌ ಆಟದ ಮೈದಾನ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಅವರು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕೆರೆ ವಾರ್ಡ್‌ ವ್ಯಾಪ್ತಿಯ ರಾಕ್ಷಸಿ ಹಳ್ಳದಲ್ಲಿ ಶಾಲಾ ಕಟ್ಟಡ ಕಾಮಗಾರಿ ಹಾಗೂ ಲವಕುಶ ನಗರದಲ್ಲಿ ಮಳೆ ನೀರು ಕಾಲುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಕಮಿಷನ್ ಆರೋಪ: ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ ಮುನಿರತ್ನ ಕೇಸ್‌!

ಹಾಗೆಯೇ ಬಡ ಕುಟುಂಬಗಳ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರಿ ಶಾಲೆಯನ್ನು ನಿರ್ಮಿಸುತ್ತಿದ್ದೇವೆ. ಕೊರೋನಾ ಮಹಾಮಾರಿಯಿಂದ ರಾಜ್ಯದ ಜನ ತತ್ತರಿಸಿದ ಸಂದರ್ಭದಲ್ಲಿ ಪೋಷಕರು ಖಾಸಗಿ ಶಾಲೆಯ ಹಣ ಕಟ್ಟಲಾಗದೆ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿತ್ತು. ಇಂತಹ ಸಂದರ್ಭದಲ್ಲಿ ಬಡ, ಮಧ್ಯಮ ಕುಟುಂಬದವರಿಗೆ ಸಹಾಯವಾಗಲೆಂದು ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಬಿಬಿಎಂಪಿ ಮಾಜಿ ಸದಸ್ಯ ಸಿದ್ದೇಗೌಡ ಮಾತನಾಡಿ, ಮುನಿರತ್ನ ಅವರು ಶಾಸಕರಾಗಿ, ಈಗ ಸಚಿವರಾಗಿ ಕ್ಷೇತ್ರದಲ್ಲಿ ಹಿಂದೆಂದೂ ನಡೆಯದಂತಹ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಗೊಂಡಿರುವುದರಿಂದ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು. ಪಾಲಿಕೆಯ ಮಾಜಿ ಸದಸ್ಯರಾದ ಲಕ್ಷ್ಮೇಕಾಂತ ರೆಡ್ಡಿ, ಮುಖಂಡರಾದ ರವೀಂದ್ರ, ವೇಲು ನಾಯಕ್‌, ತಿಮ್ಮರಾಜು, ಗೋವಿಂದರಾಜು ಮತ್ತು ರಾಜು ಉಪಸ್ಥಿತರಿದ್ದರು

Bengaluru Heavy rains: ರಾಜಧಾನಿಯಲ್ಲಿ ಸರ್ವಕಾಲಿಕ ದಾಖಲೆ ಮಳೆ

Follow Us:
Download App:
  • android
  • ios