ಚಿತ್ರದುರ್ಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ರಘು ಆಚಾರ್
ಜಿಲ್ಲಾ ಕೇಂದ್ರದಲ್ಲಿ 350 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಚಿಂತನೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಹೇಳಿದರು.
ಮೊಳಕಾಲ್ಮುರು (ಫೆ.07): ಜಿಲ್ಲಾ ಕೇಂದ್ರದಲ್ಲಿ 350 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಚಿಂತನೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಹೇಳಿದರು. ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಬೇಕೆನ್ನುವುದು ಜಿಲ್ಲೆಯ ಜನತೆಯ ಬಹುದಿನದ ಕನಸಾಗಿದೆ. ನನ್ನ ಅವಧಿಯಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದೆ. ಈವರೆಗೂ ಫಲಕಾರಿಯಾಗಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳು ಇಲ್ಲದೆ ರೋಗಿಗಳು ಬೆಂಗಳೂರು ಅಥವಾ ಇನ್ಯಾವುದೋ ದೊಡ್ಡ ಆಸ್ಪತ್ರೆಗಳ ಕಡೆ ಮುಖ ಮಾಡುವಂತಾಗಿದೆ. ಇದರಿಂದಾಗಿ ಕ್ಯಾದಿಗೆರೆ ಸಮೀಪ 350 ಕೋಟಿ ವೆಚ್ಚದಲ್ಲಿ 650 ಬೆಡ್‌ಗಳಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದರು.
ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ: ಸಿದ್ದರಾಮಯ್ಯ
ಜಿಲ್ಲೆಯ ಜನ ಎರಡು ಬಾರಿ ಗೆಲ್ಲಲು ನನಗೆ ಅವಕಾಶ ಮಾಡಿಕೊಟ್ಟಿದ್ದರು. ನಾನು ಚಿತ್ರದುರ್ಗದಲ್ಲಿಯೇ ವಾಸ ಮಾಡುತ್ತಿದ್ದೇನೆ. ಸ್ವಂತ ಮನೆಯನ್ನು ನಿರ್ಮಿಸಿದ್ದೇನೆ. ಜಿಲ್ಲೆಯ ಜನತೆಯ ಸಂಪರ್ಕದಲ್ಲಿದ್ದೇನೆ. ಗುರುತರವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಎಲ್ಲರ ವಿಶ್ವಾಸದಿಂದ ಚಿತ್ರದುರ್ಗ ಕ್ಷೇತ್ರದಿಂದಲೇ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಟಿಕೆಟ್ ಸಿಗುವ ಭರವಸೆ ಇದೆ. ರಾಜಕೀಯ ಇಲ್ಲೇ ಪ್ರಾರಂಭಿಸಿದ್ದೇನೆ. ಜೀವ ಇರೋವರೆಗೂ ಜಿಲ್ಲೆಯಲ್ಲಿಯೇ ಇದ್ದು, ಇಲ್ಲಿಯೇ ಮುಕ್ತಾಯಗೊಳಿಸುತ್ತೇನೆ ಎಂದರು.
ಅದ್ಧೂರಿಯಿಂದ ನಡೆದ ಉಳವಿ ಚನ್ನಬಸವೇಶ್ವರನ ಜಾತ್ರೆ: ಮುಗಿಲು ಮುಟ್ಟಿದ ಸಾವಿರಾರು ಭಕ್ತರ ಜಯಘೋಷ
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಮೊಳಕಾಲ್ಮುರು ಮತ್ತು ಜಗಳೂರು ಕ್ಷೇತ್ರದ ಮತದಾರರು ಅತಿ ಹೆಚ್ಚು ಮತ ನೀಡಿ ಆರ್ಶೀರ್ವದಿಸಿದ್ದರು. ಕ್ಷೇತ್ರ ದೊಡ್ಡದಿರುವ ಪರಿಣಾಮ ಎಲ್ಲರನ್ನು ಭೇಟಿ ಮಾಡಲು ಆಗದೇ ಇದ್ದರೂ ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಕ್ಯಾದಿಗೆರೆ ಸಮೀಪದಲ್ಲಿ ಸ್ವಂತ ಮನೆ ನಿರ್ಮಿಸಿದ್ದು, ಎಲ್ಲರಿಗೂ ಆಮಂತ್ರಣ ನೀಡಲು ಆಗಮಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸುತ್ತೇನೆ. ಕೆಲ ಮಹಾ ನಾಯಕರು ಅಡ್ಡಿಯಾಗುತ್ತಿರುವ ಪರಿಣಾಮ ಅನುಮತಿ ಪಡೆಯಲು ಸ್ವಲ್ಪ ತಡವಾಗಿದೆ ಎಂದರು.