Sankey Road: ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ನಾಗರಿಕರು ತೀವ್ರ ವಿರೋಧ
ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿ ನಿರ್ಧಾರದ ವಿರುದ್ಧ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಂಥ ಅವೈಜ್ಞಾನಿಕ ಯೋಜನೆಗಳಿಂದ ನಗರಕ್ಕೆ ಸಾಕಷ್ಟು ಹಾನಿಯಾಗಿದ್ದು ಈಗ ಇನ್ನಷ್ಟು ಹಾನಿಗೊಳಿಸಲು ಬಿಡುವುದಿಲ್ಲ ಎಂದು ನಾಗರಿಕರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು (ಫೆ.19) : ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ನಾಗರಿಕರು ಪ್ರತಿಭಟಿಸಿದರು. ಪರಿಸರ ಉಳಿಸಿ, ಪ್ರಕೃತಿ ಬೆಳೆಸಿ ಎಂದು ನಾಗರಿಕರು ಘೋಷಣೆ ಕೂಗಿದರು.
ಈ ಫ್ಲೈಓವರ್(Flyover) ಯೋಜನೆಯೇ ನಿಷ್ಪ್ರಯೋಜಕ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಈಗಾಗಲೇ ಇಂಥ ಯೋಜನೆಗಳಿಂದ ನಗರಕ್ಕೆ ಸಾಕಷ್ಟು ಹಾನಿಯಾಗಿದೆ. ಈಗ ಸ್ಯಾಂಕಿ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಿ ನಗರದ ಪರಿಸರವನ್ನು ಇನ್ನಷ್ಟು ಹಾಳುಗೆಡುವುತ್ತೀರಾ? ಎಂದು ನಿವಾಸಿಗಳು ಬಿಬಿಎಂಪಿ(BBMP) ವಿರುದ್ಧ ಕಿಡಿಕಾರಿದರು.
ಇಂಥ ಅವೈಜ್ಞಾನಿಕ ಯೋಜನೆಗಳಿಂದ ಸ್ಥಳಿಯ ನಿವಾಸಿಗಳಿಗೆ ಸಮಸ್ಯೆ ತಂದೊಡ್ಡುತ್ತಿರುವ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೂ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದರು.
Bengaluru news: ಸ್ಯಾಂಕಿ ಕೆರೆ ಫ್ಲೈಓವರ್‌ನ ಭವಿಷ್ಯ ಭೂ ಸಾರಿಗೆ ಪ್ರಾಧಿಕಾರ ಅಂಗಳಕ್ಕೆ