ಲೋಕ ಸಮರಕ್ಕೆ ಕಾಂಗ್ರೆಸ್ ಯೂಥ್ ಘಟಕದ ಹೊಸ ಸ್ಟ್ರ್ಯಾಟಜಿ!

ಲೋಕಸಭಾ ಸಮರಕ್ಕೆ  ಸಿದ್ದರಾಮಯ್ಯ ಸ್ವಕ್ಷೇತ್ರದ ಜಿಲ್ಲೆಯಲ್ಲಿ ಯುವಕರನ್ನು ಸೆಳೆಯಲು ಕೈ ಯೂಥ್ ಘಟಕ ಪ್ಲ್ಯಾನ್! ಬಾಗಲಕೋಟೆ ಜಿಲ್ಲೆಯಲ್ಲಿ ಲೋಕಸಭಾ ಸಮರಕ್ಕೆ ಸಜ್ಜಾಗುತ್ತಿರುವ ಕಾಂಗ್ರೆಸ್! ಮೋದಿ ವಿಫಲತೆಯೇ ಈಗ ಕೈಗೆ  ಅಸ್ತ್ರ! ಯುವಕರಿಗೆ ಕೊಟ್ಟಿದ್ದ ಮೋದಿ ಭರವಸೆಗಳೇ ಕಾಂಗ್ರೆಸ್ ಗೆ ದಾಳ! ಬೈ ಎಲೆಕ್ಷನ್ ಬೆನ್ನಲ್ಲೇ ಲೋಕ ಸಮರ ಸ್ಟ್ರ್ಯಾಟಜಿ! ರಾಜ್ಯಾದ್ಯಂತ ಯುವ ಸಂವಾದ ನೆಪದಲ್ಲಿ ಮೋದಿಗೆ ಟಾಂಗ್

Congress Youth Wing Strategy for General Election

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ನ.23): ದೇಶದಲ್ಲಿ  ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಈ ಬಾರಿ ಹೆಚ್ಚು ಲೋಕಸಭಾ ಕ್ಷೇತ್ರ ಗೆಲ್ಲಲು ಕೈ ಪಾಳಯ ಇನ್ನಿಲ್ಲದ ಕಸರತ್ತು ಶುರು ಮಾಡಿದೆ.  ಕಳೆದ ಬಾರಿ ಲೋಕ ಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೂಥ್ ಐಕಾನ್ ಮೋಡಿ ಮಾಡಿ, ಯುವಕರಿಗೆ ಹಲವು ಭರವಸನ್ನೇ ಕೊಟ್ಟಿದ್ದರು. 

ಆದ್ರೆ ಭರವಸೆ ಈಡೇರಿದ್ದು ಅಷ್ಟಕ್ಕಷ್ಟೆ ಎಂಬುದನ್ನೇ ಪ್ಲ್ಯಾನ್ ಮಾಡಿಕೊಂಡಿರುವ ಯೂಥ್ ಕಾಂಗ್ರೆಸ್ ಯುವಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ. ಇದೀಗ ರಾಜ್ಯಾದ್ಯಂತ ಯೂಥ್ ಕಾಂಗ್ರೆಸ್ ಕಾರ್ಯಪ್ರವೃತ್ತರಾಗಿದ್ದು, ಈ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಲು ಕೈ ಪಡೆ ಮುಂದಾಗಿದೆ. 

ಅದರಲ್ಲೂ ಸಿದ್ದರಾಮಯ್ಯ ಸ್ವಕ್ಷೇತ್ರದ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಯುವಕರ ಪಡೆಯೊಂದಿಗೆ ಬಿಜೆಪಿಗೆ ಶೆಡ್ಡು ಹೊಡೆಯಲು ಮುಂದಾಗಿದೆ.

ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್:

ಹೌದು, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಸಂವಾದದಲ್ಲಿ ಚರ್ಚೆ ನಡೆಸಿದ್ದು, ಯುವಕರನ್ನು ಸೆಳೆಯಲು ಯೂಥ್ ಕಾಂಗ್ರೆಸ್ ಹೊಸ ಯೋಜನೆ ಸಿದ್ದಪಡಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರಾಜ್ಯ ಯೂಥ್ ಕಾಂಗ್ರೆಸ್ ಘಟಕ ‘ವಿಭಿನ್ನ ವಿಚಾರಗಳ ಮುಖಾಮುಖಿ’ ಎಂಬ ಕಾರ್ಯಕ್ರಮ ಆಯೋಜಿಸಿತ್ತು.

"

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಕಾಲೇಜು ವಿದ್ಯಾರ್ಥಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೋಟ್ ಬ್ಯಾನ್, ವಿದೇಶದಿಂದ ಕಪ್ಪು  ಹಣ ತರದ ವಿಚಾರ,ರಫೇಲ್ ಹಗರಣ, ಯುವಕರಿಗೆ ಉದ್ಯೋಗ ಕಲ್ಪಿಸದಿರುವ ಬಗ್ಗೆ ಸಂವಾದ ನಡೆಸಿದರು.

ಕೈಗೆ ಯುವಕರ ಸಲಹೆ ಏನು?:

ಕಾಂಗ್ರೆಸ್ ವೈಪಲ್ಯ, ಸುಧಾರಣಾ ಕ್ರಮದ ಬಗ್ಗೆ ಯುವಕರು  ಈ ವೇಳೆ ಹಲವು ಸಲಹೆ ನೀಡಿದರು. ಇನ್ನು  ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡು ಯುವಕರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ಜಿಲ್ಲಾ  ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಿಮ್ಮಾಪೂರ್ ಈ ವೇಳೆ ಅಭಿಪ್ರಾಯಪಟ್ಟರು.

ಒಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವಾಗಲೇ ಪಕ್ಷಗಳು ಸಮರಕ್ಕೆ ಸಜ್ಜಾಗಿದ್ದು, ಈ ಬಾರಿ ವಿವಿಧ ಪಕ್ಷಗಳು ತಮ್ಮ ತಮ್ಮ ಪ್ಲ್ಯಾನ್ ಮಾಡಿ ಕಸರತ್ತು ನಡೆಸಿ ಯುವಕರನ್ನು ಯಾವ ಪಕ್ಷದತ್ತ  ಸೆಳೆಯುವಂತೆ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios