ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಧ್ರುವನಾರಾಯಣ ಅವರ ಕಾರ್ಯ ಇತಿಹಾಸ. ಒಂದು ವೋಟ್‌ ಅಂತ ನಿನ್ನೆ ನಾವು ಮಾತಾಡ್ತಿದ್ವಿ. ಅದು ಶಾಶ್ವತವಾಗಿ ಉಳಿಲಿಲ್ಲ ಎಂದು ಆರ್.ಧ್ರುವನಾರಾಯಣ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು (ಮಾ.11): ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಧ್ರುವನಾರಾಯಣ ಅವರ ಕಾರ್ಯ ಇತಿಹಾಸ. ಒಂದು ವೋಟ್‌ ಅಂತ ನಿನ್ನೆ ನಾವು ಮಾತಾಡ್ತಿದ್ವಿ. ಅದು ಶಾಶ್ವತವಾಗಿ ಉಳಿಲಿಲ್ಲ ಎಂದು ಆರ್.ಧ್ರುವನಾರಾಯಣ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ನಾನು ಮಲಗಿದ್ದೆ, ನಮ್ಮ ಮನೆಗೆ ಫೋನ್ ಮಾಡಿ ತಿಳಿಸಿದ್ದಾರೆ. ಬ್ಲಡ್ ವಾಮಿಟ್ ಆಗಿ ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದಾರೆ ಅಂದ್ರು. ಸಾವಿಗೂ ಹುಟ್ಟಿಗೂ‌ ನಡುವೆ ಒಂದು ಪುಟ್ಟ‌ ಜೀವನವನ್ನ ಭಗವಂತ ಇಟ್ಟಿದ್ದ. ಇಡೀ ನಮ್ಮ ಕಾಂಗ್ರೆಸ್ ಪರಿವಾರಕ್ಕೆ ಯಾವೆಲ್ಲ ಜವಬ್ದಾರಿ ತೆಗೆದುಕೊಂಡಿದ್ರೋ ಅತಿ ಹೆಚ್ಚು ಮೆರಿದ್ದ ಸಂಭಾವ್ಯ ವ್ಯಕ್ತಿ. ಯಾರನ್ನು ಕೂಡ ನೋಯಿಸಬಾರದು ಎಂಬ ವಿಶೇಷ ಗುಣ ಹೊಂದಿದ್ದ ನಾಯಕ ಎಂದು ಧ್ರುವನಾರಾಯಣ ಸ್ಮರಿಸಿದರು.

ಎಲ್ಲ ಸಮಾಜದವರು ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದ ವ್ಯಕ್ತಿ. ನನಗೂ ಕೂಡಾ ಹತ್ತಾರು ಬಾರಿ ಸಮಾಧಾನ ಹೇಳಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ರು. ನನ್ನ ಕುಟುಂಬ ಹಾಗೂ ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಆಸ್ತಿಯಾಗಿದ್ದರು. ಅವರ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ಸಾಕ್ಷಿಯಾಗಿ ಉಳಿದುಕೊಂಡಿದೆ. ಇಂದು ಅವರು ನಮ್ಮ ಜೊತೆ ಇಲ್ಲ. ಎಐಸಿಸಿ ಅಧ್ಯಕ್ಷರು, ಸೋನಿಯಾಗಾಂಧಿಯವರು ಎಲ್ಲ ಕರೆ ಮಾಡಿದ್ರು. ಯಾರಿಗೂ ನಂಬೋದಕ್ಕೆ ಆಗ್ತಿಲ್ಲ. ಅವ್ರು ಅಷ್ಟು ಎಲ್ರ ಹೃದಯವನ್ನು ಗೆದ್ದಿದ್ದವರು. ರಾಮನಗರದ ಕಾರ್ಯಕ್ರಮ ರದ್ದು ಮಾಡಿದ್ದೇನೆ ಎಂದು ಡಿಕೆಶಿ ಹೇಳಿದರು.

Scroll to load tweet…


ಪೊಲೀಸ್ ಗೌರವದೊಂದಿಗೆ ಆರ್‌.ಧ್ರುವನಾರಾಯಣ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಇಂದು ಮತ್ತು ನಾಳಿನ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಲಾಗಿದ್ದು, ಸಿದ್ದರಾಮಯ್ಯ ಅವರು ಇಂದು ದಾವಣಗೆರೆಯಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.



ಅವರ ಅಗಲಿಕೆ ಪಕ್ಷಕ್ಕೆ, ರಾಜ್ಯಕ್ಕೆ ತುಂಬಲಾರದ ನಷ್ಟ: ಧೃವ ನಾರಾಯಣ್ ಅಗಲಿಕೆ ನಂಬಲು ಆಗುತ್ತಿಲ್ಲ. 40 ವರ್ಷಗಳಿಂದ ಜೊತೆಯಲ್ಲಿ ಕೆಲಸ ಮಾಡಿದ್ದೆವು. ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಬೆಳಿಗ್ಗೆ ಇಬ್ಬರು ಮಾತನಾಡಿದ್ದೆವು.24 ಗಂಟೆಯಲ್ಲಿ ಅವರು ನಮ್ಮನ್ನು ಅಗಲಿದ್ದು ನಂಬಲಾಗುತ್ತಿಲ್ಲ. ಸುದ್ದಿ ತಿಳಿದ ತಕ್ಷಣ 10 ನಿಮಿಷ ಹೊರಬರಲು ಆಗಲಿಲ್ಲ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದರು. ಅವರ ಅಗಲಿಕೆ ಪಕ್ಷಕ್ಕೆ, ರಾಜ್ಯಕ್ಕೆ ತುಂಬಲಾರದ ನಷ್ಟ. ಅವರಿಗೆ ಸಂತಾಪ ಸೂಚಕವಾಗಿ ಇಂದಿನ ಎಲ್ಲಾ ಕಾಂಗ್ರೆಸ್ ಕಾರ್ಯಕ್ರಮ ರದ್ದು ಪಡಿಸಲಾಗಿದೆ ಎಂದು ದಾವಣಗೆರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್ ತಿಳಿಸಿದ್ದಾರೆ.

ಹೃದಯಾಘಾತದಿಂದ ಆರ್.ಧ್ರುವನಾರಾಯಣ ನಿಧನ: ಹುಟ್ಟೂರಿನಲ್ಲಿ ಇಂದೇ ಅಂತ್ಯ ಸಂಸ್ಕಾರ

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ: ಕಾಂಗ್ರೆಸ್ ನಾಯಕ ಧೃವನಾರಾಯಣ್ ರವರು ಸಜ್ಜನ ರಾಜಕಾರಣಿ. ನಾನು ಅವರನ್ನ ಬಿಜೆಪಿ ಗೆ ಆಹ್ವಾನ ಮಾಡಲು ಬಯಸಿದ್ದೆ. ನಾನು ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ನನ್ನ ಜೊತೆಗೆ ಶಾಸಕರಾಗಿದ್ದರು. ಪಕ್ಷ ಯಾವುದೇ ಇದ್ದರೂ ವೈಯಕ್ತಿಕ ಸಂಬಂಧಕ್ಕೆ ಮತ್ಸರ ಇಲ್ಲ. ಇವತ್ತು ಅವರು ನಮ್ಮ ಜೊತೆಯಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಂತಾಪ ಸೂಚಿಸಿದ್ದಾರೆ.