ಬಿಜೆಪಿಯಿಂದ ದ್ವೇಷ ಬಿತ್ತಲು ಯತ್ನ : ಬಿಎಸ್ ವೈ ವಿರುದ್ಧ ಖರ್ಗೆ ಅಸಮಾಧಾನ

ಹಳೆಯ ರಾಜಕೀಯ ವಿಚಾರಗಳನ್ನು ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪಿಸುವ ಮೂಲಕ ಧ್ವೇಷ ಬಿತ್ತುವ ಯತ್ನ ನಡೆಸಲಾಗಿದೆ ಎಂದು ಬಿ ಎಸ್ ಯಡಿಯೂರಪ್ಪ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Congress Leader Mallikarjun Kharge unHappy Over BS Yeddyurappa Over His Statement

ಕಲಬುರಗಿ :   ವೀರೇಂದ್ರ ಪಾಟೀಲ್ ಅವರನ್ನ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅನ್ಯಾಯ ಮಾಡಿತ್ತು ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕೈ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕಲಬುರಗಿಯಲ್ಲಿ ಮಾತನಾಡಿದ ಖರ್ಗೆ, ಮೂವತ್ತು ವರ್ಷದ ಹಿಂದಿನ ಮಾತು ಈಗ ಆಡಿದರೆ ಸರಿಯಾಗುವುದಿಲ್ಲ.  ಸ್ಥಾನದಿಂದ ಕೆಳಕ್ಕೆ ಇಳಿದಾಗ ಬೆಂಬಲ ನೀಡಬೇಕಿತ್ತು. ಇಂತಹ ಮಾತುಗಳನ್ನು ಆಡುವ ಮೂಲಕ ಒಂದೇ ಪಕ್ಷದ ಮುಖಂಡರ ನಡುವೆ ವೈಮನಸ್ಸು ಉಂಟು ಮಾಡಲು ಯತ್ನಿಸುತ್ತಿದ್ದಾರೆ.  ಇದೆಲ್ಲಾ ಬಿಜೆಪಿಯವರ ಪ್ಲಾನ್ ಎಂದು ಹೇಳಿದರು. 

ಇನ್ನು ಇದೇ ಕಟೀಲ್ ಅವರ ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17 ಸಾವಿರ ಎನ್ನುವ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಈ ಮಾತುಗಳ ಅವರ ಮನಸ್ಥಿತಿಯ ಬಗ್ಗೆ ತಿಳಿಸುತ್ತವೆ. ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ಐಕ್ಯತೆಗಾಗಿ ತಮ್ಮ ಪ್ರಾಣ ಕೊಟ್ಟಿದ್ದಾರೆ. ನಳಿನ್ ಕುಮಾರ್ ಕಟಿಲ್ ಅವರಂತ ಜನರ ಸಂಖ್ಯೆ ಹಾಗೂ ವಿಚಾರಧಾರೆ ಹೆಚ್ಟಾಗುತ್ತಿರುವುದರಿಂದ ದೇಶಕ್ಕೆ ತೊಂದರೆ  ಆಗುತ್ತಿದೆ. ಇನ್ನು ಮುಂದಾದರೂ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಖರ್ಗೆ ಹೇಳಿದರು. 

ಗಾಂಧೀಜಿ  ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಅಂತವರನ್ನ ಕೊಂದವರನ್ನ ಬಿಜೆಪಿಯವರು ದೇವರಂತೆ ಪೂಜೆ ಮಾಡುತ್ತಾರೆ. ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಪ್ರಧಾನಿ ಮೋದಿ ಅವರ ಸಮಾಧಿ ಮುಂದೆ ತಲೆಬಾಗುತ್ತಾರೆ. ಇನ್ನೊಂದು ಕಡೆ ಈ ರೀತಿಯಾಗಿ ಬಿಜೆಪಿಯವರು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios