Asianet Suvarna News Asianet Suvarna News

ನಾಳೆ ಕಾಂಗ್ರೆಸ್‌ ಸರ್ಕಾರದ 5ನೇ ಗ್ಯಾರಂಟಿಗೆ ಚಾಲನೆ

ಶಿವಮೊಗ್ಗ ನಗರದ ಫ್ರೀಡಂಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸಲಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಂದ ಪದವಿ ವಿದ್ಯಾ ರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ 

Congress Government 5th Guarantee Yuva Nidhi Scheme to Be Drive on Jan 12th in Karnataka grg
Author
First Published Jan 11, 2024, 10:53 AM IST

ಶಿವಮೊಗ್ಗ(ಜ.11):  ಶುಕ್ರವಾರ ಶಿವಮೊಗ್ಗ ನಗರದಲ್ಲಿ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆ ಮೂಲಕ ಚುನಾವಣೆ ಸಂದರ್ಭ ಘೋಷಿಸಿದ 5ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದ ಫ್ರೀಡಂಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸಲಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಂದ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು. ಬಿಜೆಪಿಯವರ ಟೀಕೆ, ಟಿಪ್ಪಣಿಗೆ ಕಾರ್ಯಕ್ರಮದ ಮೂಲಕವೇ ಉತ್ತರ ಕೊಡುತ್ತೇವೆ ಎಂದರು. ಬಿಜೆಪಿಯ ವರು ತಾವು ನೀಡಿದ್ದ ಭರವಸೆಗಳ ಪೈಕಿ ಯಾವೆಲ್ಲ ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.

ಯುವನಿಧಿ ಯೋಜನೆ: ಉದ್ಯೋಗಕ್ಕೆ ನಿರುದ್ಯೋಗ ಭತ್ಯೆ ನೆರವಾಗಲಿ, ಸಚಿವ ಮಧು ಬಂಗಾರಪ್ಪ

ಯುವನಿಧಿಗೆ 61 ಸಾವಿರ ಮಂದಿ ನೋಂದಣಿ:

ಕಾಂಗ್ರೆಸ್‌ನ ಐದನೇ ಗ್ಯಾರಂಟಿ, ಯುವನಿಧಿಗೆ ಈ ವರ್ಷ ನೋಂದಣಿಗೆ 5.29 ಲಕ್ಷ ಟಾರ್ಗೆಟ್ ಇದ್ದು, ಈವರೆಗೆ 61 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ ಎಂದು ಸಚಿವ ಶರಣ ಪ್ರಕಾಶ್‌ ಪಾಟೀಲ್ ಹೇಳಿದರು. ಯುವನಿಧಿ ಯೋಜನೆಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ನೋಂದಣಿ ಮಾಡುತ್ತಿದ್ದಾರೆ. ವಿವೇಕಾನಂದ ಜಯಂತಿ ದಿನ ಈ ಕಾಠ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಯುವ ನಿಧಿಗೆ ನೋಂದಣಿ ಮಾಡಿದವರಿಗೆ ಹೆಚ್ಚುವರಿ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಿಸಲಾಗುವುದು ಎಂದರು. ಯುವನಿಧಿ ಯೋಜನೆ ಉದ್ಘಾಟನೆಯ ದಿನವೇ ಪ್ರಿಯಾಂಕಾ ಗಾಂಧಿ ಜನ್ಮದಿನ ಎಂದು ನಮಗೆ ಗೊತ್ತಿಲ್ಲ. ನಮಗಿಂತಲೂ ಬಿಜೆಪಿಯವರೇ ಫಾಸ್ಟ್ ಇದ್ದಾರೆ. ವಿವೇಕಾನಂದರ ಜಯಂತಿ ಎಂದು "ಯ ಯುವನಿಧಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಎನ್‌ಎಸ್‌ಯುಐನಿಂದ ಯುವಜ್ಯೋತಿ ಜಾಥಾ: 

ಈ ಮಧ್ಯೆ, ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಎನ್‌ಎಸ್‌ಯುಐ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಯುವಜ್ಯೋತಿ ಜಾಥಾ ನಡೆಯಿತು. ನಗರದ ಜೈಲ್ ವೃತ್ತದಿಂದ ಟಿ.ಸೀನಪ್ಪ ಶೆಟ್ಟಿ (ಗೋಪಿ ವೃತ್ತ ) له ವೃತ್ತದವರೆಗೂ ಜಾಥಾ ನಡೆಯಿತು. ಎನ್‌ಸ್‌ಯುಐನ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಾಥಾ ದಲ್ಲಿ 'ಯುವನಿಧಿ ಯುವಕರ ಆಶಾನಿಧಿ' ಸೇರಿದಂತೆ ವಿವಿಧ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು.

Follow Us:
Download App:
  • android
  • ios