Asianet Suvarna News Asianet Suvarna News

ರಾಜಕೀಯ, ಮತಕ್ಕಾಗಿ ಸಮಾಜದ ಸೌಹಾರ್ದತೆಗೆ ಬೆಂಕಿ: ಬರಗೂರು ರಾಮಚಂದ್ರಪ್ಪ

: ರಾಜಕೀಯ ಮತ್ತು ಮತಕ್ಕಾಗಿ ಸಮಾಜದ ಸೌಹಾರ್ದತೆಯನ್ನು ಕೆಲವರು ಹಾಳು ಮಾಡುತ್ತಿದ್ದಾರೆ, ಸೌಹಾರ್ದತೆಯ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

Conflict between religions for votes, power says baraguru ramachandrappa at bengaluru rav
Author
First Published Mar 20, 2023, 11:19 AM IST

ಬೆಂಗಳೂರು (ಮಾ.20) : ರಾಜಕೀಯ ಮತ್ತು ಮತಕ್ಕಾಗಿ ಸಮಾಜದ ಸೌಹಾರ್ದತೆಯನ್ನು ಕೆಲವರು ಹಾಳು ಮಾಡುತ್ತಿದ್ದಾರೆ, ಸೌಹಾರ್ದತೆಯ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಹಮದೀಯ ಕನ್ನಡ ವೇದಿಕೆ(All Karnataka Mohammedan Kannada Forum) ಆಯೋಜಿಸಿದ್ದ ‘ರಂಜಾನ್‌ ಸಾಬ್‌’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಏರುಪೇರು

ಸೌಹಾರ್ದವನ್ನು ನಾಶ ಮಾಡುವ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡುವುದೆಂದರೆ ಅದೂ ಒಂದು ರೀತಿಯಲ್ಲಿ ಕನ್ನಡ ಪ್ರೇಮವೇ ಆಗಿದೆ. ಈಗ ರಾಜಕೀಯ ಕಾರಣ ಮತ್ತು ಚುನಾವಣೆಯಲ್ಲಿ ಮತ ಪಡೆಯುವುದಕ್ಕಾಗಿ ಜಾತಿ, ಧರ್ಮ, ಗಡಿ ಹೆಸರಿನಲ್ಲಿ ಸೌಹಾರ್ದತೆಗೆ ಭಂಗ ಉಂಟು ಮಾಡಲಾಗುತ್ತಿದೆ. 70ರ ದಶಕದಲ್ಲಿ ಸಮಾಜ ವಾದದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ಆದರೆ ಈಗ ಸೌಹಾರ್ದತೆ ಬಗ್ಗೆ ಚರ್ಚೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಇತಿಹಾಸದಲ್ಲಿ ಇರದ ವ್ಯಕ್ತಿಗಳನ್ನು ಇದ್ದರು ಎಂದು ಬಿಂಬಿಸುತ್ತಿರುವ ಇಂತಹ ಸಂದರ್ಭದಲ್ಲಿ ಕನ್ನಡ ಪ್ರೇಮಿಯಾದ ರಂಜಾನ್‌ ಸಾಬ್‌ ಅವರ ಪುತ್ಥಳಿ ಸ್ಥಾಪಿಸುವುದು ಅವಶ್ಯಕವಾಗಿದೆ. ಇವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಕೇವಲ ಅಕ್ಷರವಲ್ಲ ಅದು ನಮ್ಮ ಸಂಸ್ಕೃತಿ: ಬರಗೂರು ರಾಮಚಂದ್ರಪ್ಪ

ಪತ್ರಕರ್ತ ಬೆಲಗೂರು ಸಮೀವುಲ್ಲಾ ಅವರಿಗೆ ಇದೇ ಸಂದರ್ಭದಲ್ಲಿ ‘ರಂಜಾನ್‌ ಸಾಬ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ

ಸಿ.ಸೋಮಶೇಖರ್‌ ಹಾಜರಿದ್ದರು.

Follow Us:
Download App:
  • android
  • ios