* ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಸುವಂತೆ ಕೋರ್ಟ್ ಆದೇಶ * ಶೇಖರಗೌಡ ಮಾಲಿಪಾಟೀಲ್  ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ * ಎರಡು ತಿಂಗಳ ಒಳಗೆ ನಡೆಸಬೇಕು ಆದೇಶಿಸಿದ ಧಾರವಾಡ ಹೈಕೋರ್ಟ್​ ಪೀಠ

ಧಾರವಾಡ, (ಸೆ.15): ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಎರಡು ತಿಂಗಳ ಒಳಗೆ ನಡೆಸಬೇಕು ಎಂದು ಧಾರವಾಡ ಹೈಕೋರ್ಟ್​ ಪೀಠ ಇಂದು (ಸೆ,15) ಆದೇಶ ಹೊರಡಿಸಿದೆ.

ಮೇ 9ಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಕೊರೊನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. 

ಚುನಾವಣೆ ನಡೆಸಬೇಕೆಂದು ಒಂದೂವರೆ ತಿಂಗಳ ಹಿಂದೆಯೇ ಸರ್ಕಾರಕ್ಕೆ ಶೇಖರಗೌಡ ಮಾಲಿಪಾಟೀಲ್ ಮನವಿ ಸಲ್ಲಿಸಿದ್ದರು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಶೇಖರಗೌಡ ಮಾಲಿಪಾಟೀಲ್ ಹೈಕೋರ್ಟ್​ ಮೊರೆ ಹೋಗಿದ್ದರು. 

ಕಸಾಪ ಚುನಾವಣೆಗೂ ಇನ್ನು ಸಾಮಾಜಿಕ ಜಾಲತಾಣ ಬಳಕೆ

ಇದೀಗ ಶೇಖರಗೌಡ ಮಾಲಿಪಾಟೀಲ್ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಎರಡು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ.

ರಾಜ್ಯದಲ್ಲಿ ಇತ್ತೀಚೆಗಷ್ಟೇ ನಗರ ಪಾಲಿಕೆ ಚುನಾವಣೆಗಳು ನಡೆದಿದ್ದವು. ಇತರ ಚುನಾವಣೆಗಳನ್ನು ನಡೆಸಲು ಸಾಧ್ಯವಿದ್ದರೆ ಸಾಹಿತ್ಯ ಪರಿಷತ್ ಚುನಾವಣೆ ನಡೆಸಲು ಏನು ಸಮಸ್ಯೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.