ಬೆಂಗಳೂರು (ಮಾ.29):  ರಾಜ್ಯದಲ್ಲಿ ಭಾನುವಾರ 670 ಲಸಿಕಾ ಕೇಂದ್ರದಲ್ಲಿ 3,806 ಮಂದಿಗೆ ಲಸಿಕೆ ನೀಡಲಾಗಿದ್ದು, ಯಾರಲ್ಲೂ ಅಡ್ಡ ಪರಿಣಾಮ ಕಾಣಸಿಕೊಂಡಿಲ್ಲ. 

ಈವರೆಗೆ ಒಟ್ಟು 33.83 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಲ್ಲಿ 4.10 ಲಕ್ಷ ಮಂದಿ ಎರಡನೇ ಡೋಸ್‌ ಕೂಡಾ ಪಡೆದಿದ್ದು ಇವರ ಲಸಿಕಾಕರಣ ಪ್ರಕ್ರಿಯೆ ಪೂರ್ಣಗೊಂಡಿದೆ. 

ಹಿರಿಯ ನಾಗರಿಕರು 3,806 ಮಂದಿ, ಸಹ ಅಸ್ವಸ್ಥತೆ ಹೊಂದಿರುವ 45 ರಿಂದ 60 ವರ್ಷದೊಳಗಿನ 1,123 ಮಂದಿ, ಆರೋಗ್ಯ ಕಾರ್ಯಕರ್ತರು 79 ಮಂದಿ, ಮುಂಚೂಣಿ ಕಾರ್ಯಕರ್ತರು 72 ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. 27 ಆರೋಗ್ಯ ಕಾರ್ಯಕರ್ತರು, 48 ಮುಂಚೂಣಿ ಕಾರ್ಯಕರ್ತರು ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ಕರ್ನಾಟಕಕ್ಕೆ ಕೊರೋನಾಘಾತ: ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ!

ಸೋಮವಾರದಿಂದ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟಮತ್ತು 60 ವರ್ಷದೊಳಗಿನ ಸಹ ಅಸ್ವಸ್ಥತೆ ಹೊಂದಿರುವವರು ಎರಡನೇ ಡೋಸ್‌ ಲಸಿಕೆ ಪಡೆಯಲು ಅರ್ಹರಾಗುತ್ತಾರೆ. ಮಾಚ್‌ರ್‍ 1 ರಿಂದ ಲಸಿಕೆ ಪಡೆದ ಹಿರಿಯ ನಾಗರಿಕರು ಸೋಮವಾರದಿಂದ ಎರಡನೇ ಡೋಸ್‌ ಪಡೆಯಲಿದ್ದಾರೆ.