ನಮ್ಮ ಮೆಟ್ರೋದಲ್ಲಿ ಸಂಚರಿಸಿದ ನಿಮ್ಮ ಅನುಭವ ಹೇಗಿದೆ? ಬಿಎಂಆರ್‌ಸಿಎಲ್‌ನಿಂದ ಮೇ 6ರವರೆಗೆ ಸರ್ವೆ
ಬೆಂಗಳೂರು ಮೆಟ್ರೋ ರೈಲು ನಿಗಮವು ‘ಮೆಟ್ರೋ ಪ್ರಯಾಣಿಕರ ತೃಪ್ತಿ ಸಮೀಕ್ಷೆ’ ಯನ್ನು ಏ.8ರಿಂದ ಮೇ 6ರವರೆಗೆ ಕೈಗೊಂಡಿದೆ.
ಬೆಂಗಳೂರು (ಏ.08): ಬೆಂಗಳೂರು ಮೆಟ್ರೋ ರೈಲು ನಿಗಮವು ‘ಮೆಟ್ರೋ ಪ್ರಯಾಣಿಕರ ತೃಪ್ತಿ ಸಮೀಕ್ಷೆ’ ಯನ್ನು ಏ.8ರಿಂದ ಮೇ 6ರವರೆಗೆ ಕೈಗೊಂಡಿದೆ. ಮೆಟ್ರೋ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಅಗತ್ಯವಾಗಿ ಆಗಬೇಕಾದ ಬದಲಾವಣೆ ಮಾಡಿಕೊಳ್ಳಲು ಈ ಸಮೀಕ್ಷೆ ನಡೆಸಲಾಗುವುದು. ಜೊತೆಗೆ ಲಂಡನ್‌ನ ಇಂಪೀರಿಯಲ್ ಕಾಲೇಜ್ ಮೆಟ್ರೋಗಾಗಿ ನಡೆಸಲಿರುವ ಕಾರ್ಯಸೂಚಿ ಅಧ್ಯಯನಕ್ಕೂ ನೆರವಾಗಲಿದೆ. ಕನ್ನಡ, ಇಂಗ್ಲಿಷ್‌ನಲ್ಲಿ ಸಮೀಕ್ಷೆ ನಡೆಯಲಿದ್ದು, ಪ್ರಯಾಣಿಕರು www.bmrc.co.in ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಸಮೀಕ್ಷೆಯ ಕ್ಯೂಆರ್ ಕೋಡ್‌ನ್ನು ರೈಲ್ವೇ ನಿಲ್ದಾಣದಲ್ಲಿ ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗೆ 1800-425-12345ಗೆ ಸಂಪರ್ಕಿಸಬಹುದು.
ಬೆಂಗಳೂರು: ಮೆಟ್ರೋಗೆ ವರ್ಷಾಂತ್ಯಕ್ಕೆ ಹೆಚ್ಚುವರಿ ರೈಲು ಸೇರ್ಪಡೆ
BMRCL ಪ್ರಕಾರ, Namma Metro ಗಾಗಿ ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಈ ಸಮೀಕ್ಷೆಯು ಲಂಡನ್‌ನ ಇಂಪೀರಿಯಲ್ ಕಾಲೇಜ್‌ಗೆ ಪ್ರಮುಖ ಅಧ್ಯಯನವಾಗಿಯೂ ಕಾರ್ಯನಿರ್ವಹಿಸುತ್ತದೆ.
ಬೆಂಗಳೂರು: ಜೆ.ಪಿ.ನಗರ-ಕಡಬಗೆರೆ ಮೆಟ್ರೋ ಕಾಮಗಾರಿ ವರ್ಷಾಂತ್ಯಕ್ಕೆ ಶುರು?
ನಮ್ಮ ಮೆಟ್ರೋದಲ್ಲಿ ಜನವರಿಯಿಂದ ಮಾರ್ಚ್ ವರೆಗೆ 21 ಲಕ್ಷ ಜನ ಸಂಚರಿಸಿದ್ದು, ಹೀಗಾಗಿ ದಟ್ಟಣೆ ತಪ್ಪಿಸಲು ಭೋಗಿಗಳ ಸಂಖ್ಯೆ ಹೆಚ್ಚಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮಾರ್ಚ್ 7 ಲಕ್ಷ, ಫೆಬ್ರವರಿ 7.5 ಲಕ್ಷ, ಜನವರಿ 6.72 ಲಕ್ಷ ಜನ ಮೆಟ್ರೋದಲ್ಲಿ ಓಡಾಡಿದ್ದಾರೆ.