ಕಬ್ಬನ್ ಪಾರ್ಕ್ ನಲ್ಲಿ ಅರಳಿದ ಬಣ್ಣದ ಲೋಕ: ಕನ್ನಡ ಹಬ್ಬ ಆಯೋಜನೆ
ಕಬ್ಬನ್ ಪಾರ್ಕ್ ನಲ್ಲಿ ಕನ್ನಡ ಹಬ್ಬ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡಿಗೆದಾರರ ಸಂಘದಿಂದ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಅರಳಿದ ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.
ವರದಿ : ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ನ.14) : ಅಲ್ಲಿ ಬಣ್ಣಗಳ ಲೋಕವೇ ತೆರೆದುಕೊಂಡಿತ್ತು. ಎತ್ತ ಕಣ್ಣು ಹಾಯಿಸಿದರೂ ರಂಗು ರಂಗಿನ ಚಿತ್ತಾರಗಳು. ಕಣ್ಣಿಗೆ ಮುದನೀಡುವಂತಹ ಹೂವುಗಳು ಮತ್ತೊಂದೆಡೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರೂ ಉತ್ಸುಕತೆಯಿಂದ ಓಡಾಡುತ್ತಿದ್ದರು. ಈ ಎಲ್ಲಾ ಸುಂದರ ದೃಶ್ಯಗಳು ಕಂಡು ಬಂದದ್ದು ಬೇರ್‍ಯಾವ ದೇಶದಲ್ಲೂ ಅಲ್ಲ. ನಾವು ನೀವೆಲ್ಲರೂ ಪ್ರತಿನಿತ್ಯ ಸಂಚಾರ ಮಾಡುವ ರಸ್ತೆ ಪಕ್ಕದಲ್ಲಿರುವ ಕಬ್ಬನ್ ಪಾರ್ಕ್ ನಲ್ಲಿ.
ನವೆಂಬರ್ ತಿಂಗಳು ಬಂತೆಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಮಕ್ಕಳ ದಿನಾಚರಣೆಯ (Childrens Day) ಸಂಭ್ರಮ. ಆದರೆ, ಇಲ್ಲಿ ಕೇವಲ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಮಕ್ಕಳಂತೆ ಸಂಭ್ರಮಿಸುತ್ತಿದರು. ಈ ಸುಂದರವಾದ ದೃಶ್ಯ ಸೃಷ್ಟಿಯಾಗಿದ್ದು ಕಬ್ಬನ್ ಪಾರ್ಕ್ ನ ನಡಿಗೆದಾರರ ಸಂಘ (Walkers Association)ಆಯೋಜಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ. ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಹಾಗೂ ತೋಟಗಾರಿಕಾ ಇಲಾಖೆಯ (Horticulture department) ವತಿಯಿಂದ ಕಬ್ಬನ್ ಪಾರ್ಕ್ ನಲ್ಲಿ ಕನ್ನಡ ಹಬ್ಬ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು.120 ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಸಂಜೆ 6.30 ನಂತರ ಕಬ್ಬನ್ ಪಾರ್ಕ್‌ನಲ್ಲಿ ಜನರ ಪ್ರವೇಶ ನಿಷೇಧಿಸಿ ಆದೇಶ
ರಂಗೋಲಿಗೆ ಫಿದಾ ಆಗೋದು ಗ್ಯಾರಂಟಿ:
ಉದ್ಯಾನದಲ್ಲಿ ಮಕ್ಕಳು ಮತ್ತು ಮಹಿಳೆಯರು ಬಿಡಿಸಿದ್ದ ಚುಕ್ಕಿ ರಂಗೋಲಿ, ಹೂವಿನ (Flowers) ರಂಗೋಲಿ, ಧಾನ್ಯ (Millets)ಗಳಲ್ಲಿ ಬಿಡಿಸಿದ ರಂಗೋಲಿ ಸೇರಿದಂತೆ ಅನೇಕ ರೀತಿಯ ರಂಗೋಲಿಗಳು ನೋಡುಗರ ಕಣ್ಮನ ಸೆಳೆಯುತಿತ್ತು. ಹಾಗೆಯೇ ನೃತ್ಯ (Dance) ಕಾರ್ಯಕ್ರಮ, ಹಾಡು, ಗಾಯನ, ಮ್ಯಾಜಿಕ್ ಶೋ (Magoc Show)ನಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸ್ಪರ್ಧಿಸಿ ವಿಜೇತರಾದ ಮಕ್ಕಳು, ಮಹಿಳೆಯರು ಮತ್ತು ಇತರೆ ವರ್ಗದವರಿಗೆ ಪ್ರಥಮ ವಿಜೇತರಿಗೆ ಚಿನ್ನ (Gold), ದ್ವಿತೀಯ ಬೆಳ್ಳಿ ನಾಣ್ಯಗಳು (Silver Coins)ಹಾಗೂ ಇತರೆ ಬಹುಮಾನಗಳನ್ನು ನೀಡಲಾಯಿತು. ಒಟ್ಟಾರೆ ಹಸಿರು ಗಿಡಗಳ ಮಧ್ಯೆ , ತಂಪಾದ ಗಾಳಿಯ ನಡುವೆ ಅಲ್ಲೊಂದು ಕಲಾ ಲೋಕವೇ (Art World)ಸೃಷ್ಟಿ ಯಾಗಿತ್ತು. ಬಗೆ ಬಗೆಯ ಚಿತ್ತಾರ ಗಳಿಂದ ಪ್ರೇಕ್ಷಕರು ಫಿದಾ ಆಗಿದ್ದರು.
ಅಂತರಾಷ್ಟ್ರೀಯ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
ವರ್ಷಪೂರ್ತಿ ವಿವಿಧ ಕಾರ್ಯಕ್ರಮ:
ನಗರದ ಮಧ್ಯ ಭಾಗದಲ್ಲಿರುವ ಕಬ್ಬನ್ ಉದ್ಯಾನ (Cubbon Park)ದಲ್ಲಿ ಬೆಳಗ್ಗೆ ವಾಯು ವಿಹಾರ ಮಾಡುವುದೇ ಒಂದು ಸಂತಸ. ಇಲ್ಲಿ ವಿಹಾರಕ್ಕಾಗಿ ನಗರದ ವಿವಿಧೆಡೆಯಿಂದ ಬಂದು ಹೋಗುತ್ತಾರೆ. ಇವೆರೆಲ್ಲರೂ ಸೇರಿಕೊಂಡು ಒಂದು ಸಂಘವನ್ನು ಮಾಡಿಕೊಂಡಿದ್ದು, ಈಗ ಸಂಘದಿಂದ ವಿವಿಧ ಸಾಮಾಜಿಕ (Social) ಮತ್ತು ಸಾಂಸ್ಕೃತಿಕ (Cultural) ಕಾರ್ಯಕ್ರಮಗಳ ಆಚರಣೆ ಮಾಡಲಾಗುತ್ತಿದೆ. ಜತೆಗೆ, ರಾಷ್ಟ್ರೀಯ (National) ಮತ್ತು ನಾಡಹಬ್ಬಗಳ ಆಚರಣೆ ಜೊತೆಗೆ, ಮಕ್ಕಳು, ಮಹಿಳೆಯರು ಮತ್ತಿ ಇತರೆ ವ್ಯಕ್ತಿ ವಿಶೇಷಣ ಕಾರ್ಯಕ್ರಮ ಆಯೋಜನೆ ಮಾಡುವುದನ್ನು ಸಂಪ್ರದಾಯುವಾಗಿ ಮುಂದುವರೆಸುತ್ತಿದೆ. ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಾಯು ವಿಹಾರಿಗಳಿಗೆ, ಮಕ್ಕಳಿಗೆ (Children's) ಮತ್ತು ಇತರೆ ಸಾರ್ವಜನಿಕರಿಗೆ ಮನೋರಂಜನೆ ನೀಡುತ್ತಿದೆ.