ಹಾವೇರಿಯಲ್ಲಿ ನಡೆದ ಭೂ ಗ್ಯಾರಂಟಿ ಸಮಾವೇಶದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ 6.5 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕಾಂಗ್ರೆಸ್ ಸರ್ಕಾರದ 1000 ದಿನಗಳ ಪೂರೈಕೆ ಹಿನ್ನೆಲೆ ಗೊಟಗೋಡಿಯ ರಾಕ್ ಗಾರ್ಡನ್‌ನವರು ತಯಾರಿಸಿದ ಈ ಪ್ರತಿಮೆಯನ್ನು ಕಂಡು ಸಂತಸ

ಹಾವೇರಿ (ಫೆ.15): ಇಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ವಿಧಾನಸೌಧದ ಮುಂದೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅನಾವರಣಗೊಳಿಸಿದರು. ವೇದಿಕೆಯ ಬಲಭಾಗದಲ್ಲಿ ಇಡಲಾಗಿದ್ದ ಸಿದ್ದರಾಮಯ್ಯ ಅವರ 6.5 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ ಡಿಕೆಶಿ, ಬಳಿಕ, ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.ತಮ್ಮ ಮೂರ್ತಿಯನ್ನು ನೋಡಿದ ಸಿದ್ದರಾಮಯ್ಯ ಸಂತಸಗೊಂಡು, ಬಹಳ ಉತ್ತಮವಾಗಿ ಮೂರ್ತಿ ರಚಿಸಿದ್ದಾರೆ ಎಂದು ಖುಷಿ ಹಂಚಿಕೊಂಡರು. ನಾನೇ ನಿಂತಂತೆ ಕಾಣುತ್ತದೆ ಎಂದು ವೇದಿಕೆಯಲ್ಲೇ ಸಂತಸ ಹಂಚಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯ ಕೆಳಗಿಳಿದು ಬಂದು ತಮ್ಮ ಮೂರ್ತಿಯನ್ನು ಕಣ್ತುಂಬಿಕೊಂಡರು. ಎದುರು ನಿಂತು ಫೋಟೋಗೆ ಪೋಸ್‌ ನೀಡಿದರು. ಬಳಿಕ ರಾಕ್‌ ಗಾರ್ಡನ್‌ನ ವೇದಾರಣಿ ಪ್ರಕಾಶ ದಾಸನೂರ ಅವರನ್ನು ಅಭಿನಂದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 1 ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಸಮೀಪದ ಗೊಟಗೋಡಿಯ ಉತ್ಸವ ರಾಕ್‌ ಗಾರ್ಡನ್‌ನವರು ಈ ಮೂರ್ತಿ ತಯಾರಿಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ನಿಂತಂತೆ ಮೂರ್ತಿ ರಚನೆಯಾಗಿದೆ. ಗೊಟಗೋಡಿ ರಾಕ್ ಗಾರ್ಡನ್ ಮುಖ್ಯಸ್ಥ ದಾಸನೂರ್ ಅವರು ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂರ್ತಿಯನ್ನು ರಾಕ್‌ ಗಾರ್ಡನ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.