ಸಿಎಂ ಸಿದ್ಧರಾಮಯ್ಯ ಅವರ ಟ್ವಿಟರ್ ಹ್ಯಾಂಡಲ್‌ನಲ್ಲಿ ಗುರುವಾರ ವಿಶೇಷ ಫೋಟೋ ಪೋಸ್ಟ್‌ ಆಗಿದೆ. ಸಚಿನ್‌ ತೆಂಡುಲ್ಕರ್‌ ಅವರನ್ನು ಸಿದ್ಧರಾಮಯ್ಯ ಭೇಟಿಯಾಗಿದ್ದಾರೆ.

ಬೆಂಗಳೂರು (ಜ.4): ಕ್ರೀಡಾಭಿಮಾನಿಯಾಗಿರುವ ಸಿಎಂ ಸಿದ್ಧರಾಮಯ್ಯ ಅವರ ಸೋಶಿಯಲ್‌ ಮೀಡಿಯಾ ಪೇಜ್‌ ಗುರುವಾರ ವಿಶೇಷ ಫೋಟೋವನ್ನು ಪೋಸ್ಟ್‌ ಮಾಡಿದೆ. ಕ್ರಿಕೆಟ್‌ ಪಂದ್ಯ ನಡೆದಾಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಖುದ್ದಿ ಹಾಜರಾಗಿ ಪಂದ್ಯ ವೀಕ್ಷಿಸಲು ಅಸೆ ಪಡುವ ಸಿಎಂ ಸಿದ್ಧರಾಮಯ್ಯ, ಗುರುವಾರ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರನ್ನು ಭೇಟಿಯಾಗಿದ್ದಾರೆ. ಹಾಗೇನೂ ಸಚಿನ್‌ ತೆಂಡುಲ್ಕರ್‌ ಬೆಂಗಳೂರಿಗೆ ಬಂದಿರಲಿಲ್ಲ. ಇನ್ನು ಸಿದ್ಧರಾಮಯ್ಯ ಅವರೂ ಮುಂಬೈಗೆ ಹೋಗಿಲ್ಲ. ರಾಜಕೀಯ ಕೆಲಸದ ನಿಮಿತ್ತ ಸಿದ್ಧರಾಮಯ್ಯ ನವದೆಹಲಿಗೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ಸಚಿನ್‌ ತೆಂಡುಲ್ಕರ್‌ ಅವರು ದೆಹಲಿ ಏರ್‌ಪೋರ್ಟ್‌ನಲ್ಲಿ ಅಚಾನಕ್‌ ಆಗಿ ಸಿಕ್ಕಿದ್ದಾರೆ. ಈ ವೇಳೆ ಸಚಿನ್‌ ತೆಂಡುಲ್ಕರ್‌ ಅವರ ಕೈಕುಲುಕಿ ಸಿದ್ಧರಾಮಯ್ಯ ಮಾತನಾಡಿದ್ದಾರೆ. ಸಚಿನ್‌ ತೆಂಡುಲ್ಕರ್‌ ಕೂಡ ಅಷ್ಟೇ ವಿಶ್ವಾಸದಿಂದ ಸಿದ್ಧರಾಮಯ್ಯ ಅವರಿಗೆ ಕೈಕುಲುಕಿದ್ದಾರೆ.

'ಜಾಗತಿಕ ಕ್ರಿಕೆಟ್‌ನ ದಂತಕಥೆ, ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಇಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಎದುರಾದ ವೇಳೆ ಕುಶಲೋಪರಿ ವಿಚಾರಿಸಿ, ಪ್ರೀತಿಯಿಂದ ಬೀಳ್ಕೊಟ್ಟೆ. ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ಅವರ ಆಟವನ್ನು ಆಸ್ವಾದಿಸಿದ್ದೇನೆ' ಎಂದು ಫೋಟೋವಿನ ಜೊತೆ ಮುಖ್ಯಮಂತ್ರಿಯವರ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಎರಡು ಚಿತ್ರಗಳನ್ನು ಪೋಸ್ಟ್‌ ಮಾಡಲಾಗಿದೆ.

ಜನ್ಮದಿನದ ಸನಿಹ, ಬಿಗ್‌ ಅಪ್‌ಡೇಟ್‌ ನೀಡಿದ ರಾಕಿಂಗ್‌ ಸ್ಟಾರ್‌ ಯಶ್‌!

ರಶ್ಮಿಕಾ ಮಂದಣ್ಣ ಹ್ಯಾಂಡ್‌ಬ್ಯಾಗ್‌ನಲ್ಲಿ ಈ ವಸ್ತು ಮಿಸ್ಸೇ ಆಗೋದಿಲ್ವಂತೆ..!

Scroll to load tweet…