ಸಂವಿಧಾನ ಇದ್ದಿದ್ದಕ್ಕೆ ನಾನು ಸಿಎಂ ಆಗೋಕೆ ಸಾಧ್ಯವಾಗಿದ್ದು: ಸಿದ್ದರಾಮಯ್ಯ ಮಾತು

ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುವಜನರಿಗೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಸ್ಮರಿಸಿ ಗುರಿ ಮುಟ್ಟುವವರೆಗೂ ಶ್ರಮಿಸಲು ಕರೆ ನೀಡಿದರು. ಯುವನಿಧಿ ಲಾಭ ಪಡೆದ ಯುವಕರು ಎರಡು ವರ್ಷದೊಳಗೆ ಉದ್ಯೋಗ ಪಡೆಯಬೇಕೆಂದು ಸೂಚಿಸಿದರು.

CM Siddaramaiah launched the state-level youth festival in Davangere rav

ದಾವಣಗೆರೆ (ಜ.5): ರಾಜ್ಯಮಟ್ಟದ ಯುವಜನೋತ್ಸವ ನಡೆಯುತ್ತಿದೆ. ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ ಈಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸವರ್ಷದ ಶುಭಾಶಯ ತಿಳಿಸಿದರು.

ಇಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2024ನೇ ವರ್ಷದಲ್ಲಿ ಏನ್ ಮಾಡಿದ್ದೇವೆ ಎಂಬುದನ್ನು ಮೆಲುಕು ಹಾಕಿದರು. ಅದೇ ರೀತಿ ಈ ಹೊಸ ವರ್ಷವು ವಿಶೇಷವಾಗಿ ರೈತರಿಗೆ ಹೆಚ್ಚು ಈ ವರ್ಷದಲ್ಲಿ ಸಮೃದ್ಧಿ ಸಿಗಲಿ , ಮಳೆ ಬೆಳೆ ಆಗಲಿ ಎಂದು ಬಯಸುತ್ತೇನೆ. ಶೇ 35 ರಷ್ಟು ಯುವಜನರಿದ್ದಾರೆ ಅವರೇ ನಮ್ಮ ದೇಶದ ಆಸ್ತಿ. ಅವರು ಆಸ್ತಿಆಗುವುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಎಂದರು.

ಡಿಕೆ ಓಟಕ್ಕೆ ಬ್ರೇಕ್: ಬಂಡೆ ಸುತ್ತಲೂ ಬಲೆ ಹೆಣೆದಿದ್ಯಾ ಸಿದ್ದರಾಮಯ್ಯ ಪಡೆ?

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ:

'ಏಳಿ ಏದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ' ಎಂದು ಸ್ವಾಮಿ ವಿವೇಕಾನಂದ ಹೇಳಿಕೆ ಉಲ್ಲೇಖಿಸಿದ ಸಿ ಎಂ ಸಿದ್ದರಾಮಯ್ಯ ಅವರು,  ಸ್ವಾಮಿ ವಿವೇಕಾನಂದ ಹೇಳಿಕೆ ಪ್ರಕಾರ ಪರಿಶ್ರಮ ಪಡಬೇಕು. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ನ್ಯಾಯ ಸಿಗಬೇಕು. ನಮ್ಮ ಸಂವಿಧಾನದವೇ ನಮಗೆ ಶ್ರೀರಕ್ಷೆ . ಸಂವಿಧಾನ ಇದ್ದುದರಿಂದಲ್ರೆ ನಾನು   ಸಿ ಎಂ ಆಗಿದ್ದು. ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು ಧರ್ಮ ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಿಕೃತರಿಂದ ಯುವ ಜನತೆ ದೂರ ಇರಬೇಕು ಎಂದರು.

 

ಸಿದ್ದರಾಮಯ್ಯ ನೇತೃತ್ವದಲ್ಲಿ ತಾಲಿಬಾನ್‌ ಸರ್ಕಾರ ಆಡಳಿತ: ಮಾಜಿ ಸಂಸದ ಪ್ರತಾಪ ಸಿಂಹ

ಸಂವಿಧಾನದಲ್ಲಿ ಧರ್ಮಕ್ಕೆ ಯಾವುದೇ  ಅವಕಾಶ ಇಲ್ಲ. ಈ ದೇಶದಲ್ಲಿ ಸ್ವಾತಂತ್ರ್ಯ ಬಂದಿದೆ, ಆರ್ಥಿಕ, ಸಾಮಾಜಿಕ, ರಾಜಕೀಯ  ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗುತ್ತದೆ. 1ಲಕ್ಷ 62 ಯುವಕ ಯುವತಿಯರಿಗೆ ಯುವನಿಧಿ ಹಣವನ್ನು ಅವರ ಅಕೌಂಟ್ ಗೆ ವರ್ಗಾಯಿಸಿದ್ದೇವೆ. ಅವರು ಎರಡು ವರ್ಷದ ಅವಧಿಯಲ್ಲಿ ಕೆಲಸ ತೆಗೆದುಕೊಳ್ಳಬೇಕು. ಯುವಕರಿಗೆ ಸ್ಕಿಲ್ ಡವಲಪ್ಮೆಂಟ್  ಕಾರ್ಯಕ್ರಮ ಆಯೋಜಿಸಿದ್ದೇವೆ. 5802 ನಿರುದ್ಯೋಗ ಪದವೀಧರರಿಗೆ ನೆರವು ಕೊಟ್ಟಿದ್ದೇವೆ. ಯುವ ಸಮೂಹಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತೇವೆ ಎಂದರು.

Latest Videos
Follow Us:
Download App:
  • android
  • ios