ಕುಣಿಯಲಾರದವ್ರು ನೆಲ ಡೊಂಕು ಅಂದ್ರಂತೆ: ಹೆಚ್‌ಡಿಕೆ ಆರೋಪಗಳಿಗೆ ಸಿಎಂ ತಿರುಗೇಟು
ಇಂದಿನಿಂದ 3 ದಿನಗಳ ಕಾಲ ಕಿತ್ತೂರು ಉತ್ಸವ ಹಿನ್ನೆಲೆ ಇಂದು ಬೆಂಗಳೂರಿನ ಟೌನ್ ಹಾಲ್ ಸಮೀಪವಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಸಚಿವ ಎಂಸಿ ಸುಧಾಕರ್, ಶಾಸಕ ವಿನಯ್ ಕುಲಕರ್ಣಿ ಹಾಗೂ ಜಯಮೃತ್ಯುಂಜಯಸ್ವಾಮಿಜಿ ಇತರರು ಉಪಸ್ಥಿತರಿದ್ದರು.

ಬೆಂಗಳೂರು ಅ.23):ಇಂದಿನಿಂದ 3 ದಿನಗಳ ಕಾಲ ಕಿತ್ತೂರು ಉತ್ಸವ ಹಿನ್ನೆಲೆ ಇಂದು ಬೆಂಗಳೂರಿನ ಟೌನ್ ಹಾಲ್ ಸಮೀಪವಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಸಚಿವ ಎಂಸಿ ಸುಧಾಕರ್, ಶಾಸಕ ವಿನಯ್ ಕುಲಕರ್ಣಿ ಹಾಗೂ ಜಯಮೃತ್ಯುಂಜಯಸ್ವಾಮಿಜಿ ಇತರರು ಉಪಸ್ಥಿತರಿದ್ದರು.
ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನರಿಗೆ ದಸರಾ ಮಹೋತ್ಸವದ ಶುಭಾಶಯಗಳು. ನಾಳೆ ವಿಜಯದಶಮಿ, ಇವತ್ತು ಆಯುಧ ಪೂಜೆ. ಮೈಸೂರಿನಲ್ಲಿ ನಾಳೆ ಜಂಬು ಸವಾರಿ ನಡೆಯುತ್ತದೆ. ಈಗಾಗಲೇ ಜಂಬುಸವಾರಿಗೆ ಎಲ್ಲಾ ಸಿದ್ದತೆ ಆಗಿದೆ. ಹೆಚ್ ಸಿ ಮಹಾದೇವಪ್ಪ ಇದರ ಜವಬ್ದಾರಿ ತಗೊಂಡು ಕೆಲಸ ಮಾಡಿದ್ದಾರೆ.ನಾನು ಉದ್ಘಾಟನೆ ಗೆ ಹೋಗಿದ್ದೇನೆ, ಇವತ್ತು ಮೈಸೂರಿಗೆ ಹೋಗ್ತಿದ್ದೇನೆ. ನಾಳೆ ವಿಜಯದಶಮಿಯಲ್ಲಿ ಭಾಗಿಯಾಗುತ್ತೇನೆ. ಚಾಮುಂಡೇಶ್ವರಿ ಮೆರವಣಿಗೆ ಆಗುತ್ತದೆ. ಅದಕ್ಕೆ ನಾವು ಪುಷ್ಪಾರ್ಚನೆ ಮಾಡುತ್ತೇವೆ. ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ಕಿತ್ತೂರು ಉತ್ಸವವ ಸಹ ನಡೆಯುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯರನ್ನು ಡೋಂಗಿ ಸಮಾಜವಾದಿ, ಫುಲ್‌ಟೈಂ ಮೀರ್‌ಸಾದಿಕ್, ಹೆಗ್ಗಣಕ್ಕೆ ಹೋಲಿಸಿದ ಎಚ್‌ಡಿಕೆ!
ಕಿತ್ತೂರು ಉತ್ಸವಕ್ಕೆ ಅನುದಾನ ಕೊರತೆ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಏನೂ ಚರ್ಚೆ ಆಗುತ್ತಿಲ್ಲ. ಎಲ್ಲ ನೀವೇ ಮಾಡ್ತಿದ್ದೀರಿ ಅಷ್ಟೆ ಎಂದರು. ಇನ್ನು ರಾಜ್ಯದಲ್ಲಿ ಬರಗಾಲ ಇದ್ದರೂ ಸಿಎಂ ಡಿಸಿಎಂ ಕ್ರಿಕೆಟ್ ನೋಡಲು ಹೋಗುತ್ತಾರೆ ಎಂಬ ಎಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಕ್ರಿಕೆಟ್ ಮ್ಯಾಚ್ ನೋಡೋಕೆ ಹೋಗಿದ್ದು ಕ್ರೀಡೆಯನ್ನ ಬೆಂಬಲಿಸಲು. ಎರಡು ತಂಡಗಳನ್ನು ಬೆಂಬಲಿಸಲು ಕ್ರಿಕೆಟ್ ನೋಡಲು ಹೋಗಿದ್ವಿ ಎಂದರು.
ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ ಎಂದು ಕೇಳಿದ್ದಾರೆ. ಕಾವೇರಿ ನಿವಾಸ ಬಿಟ್ಟುಕೊಡಿ ಎಂದು ಕೇಳಿದ್ರೆ ಬಿಟ್ಟುಕೊಡ್ತಿದ್ದೆ.ಕೊನೆವರೆಗೂ ಯಡಿಯೂರಪ್ಪ ಒಂದು ವರ್ಷ 10 ತಿಂಗಳ , ೨ ವರ್ಷ ಇದ್ರಲ್ಲ? ಅದಕ್ಕೆ ಏನು ಹೇಳ್ತಾರೆ? ಕಾವೇರಿ ನಿವಾಸದಲ್ಲಿ ಯಾರ ಬೇಕಾದ್ರೂ ಇರಬಹುದು. ಅದು delegated ಕ್ವಾಟರ್ಸ್ ಅಲ್ಲ. ಕಾವೇರಿ ನಿವಾಸ ಜಾರ್ಜ್ ಗೆ ಆ ಮನೆ ಅಲರ್ಟ್ ಆಗಿತ್ತು, ಜಾರ್ಜ್ ನನಗೆ ಕೊಟ್ಟಿದ್ದರು ಅಷ್ಟೇ. ಆದರೆ ಈ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇವರು ಇದ್ದಿದ್ದು ಎಲ್ಲಿ? ಎಲ್ಲಿದ್ರು ಅಂತಾ ನಿಮಗೇ ಗೊತ್ತಿದೆಯಲ್ಲ ತಾಜ್ ವೆಸ್ಟ್ ಎಂಡ್ ಐಷಾರಾಮಿ ಹೋಟೆಲ್‌ನಲ್ಲಿ ಯಾತಕ್ಕೋಸ್ಕರ್ ಇದ್ರು? ಎಂದು ಪ್ರಶ್ನಿಸಿದರು.
ಕಾವೇರಿ ನಿವಾಸದಲ್ಲೇ ಕೂತು ಸರ್ಕಾರ ಬಿಳಿಸಲು ಸ್ಕೆಚ್ ಹಾಕಿದ್ರು ಅಂತಾ ಹೇಳ್ತಿದ್ದಾರೆ. ಇವತ್ತಿನವರೆಗೂ ಡಿ ಕೆ ಶಿವಕುಮಾರ್ ಸರ್ಕಾರ ಬಿಳಿಸಿದ್ರು ಅಂತಾ ಹೇಳ್ತಿದ್ರು. ಈಗ ನಾನು ಬೀಳಿಸಿದ್ದೇನೆ ಅಂತಿದ್ದಾರೆ. ಕುಣಿಯಲಾರದವರು ನೆಲ ಡೊಂಕು ಅಂದರಂತೆ ಹಾಗಾಯಿತು ಇವರದು. ಇವರ ಕೈಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಏನೇನೋ ಬಡಬಡಾಯಿಸ್ತಾರೆ ಎಂದು ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದರು. ಇದೇ ವೇಳೆ 2.5 ವರ್ಷಗಳ ಬಳಿಕ ಸಚಿವ ಸಂಪುಟ ಪುನಾರಚನೆ ಶಾಸಕರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಡದೇ ಹೊರಟು ಹೋದ ಸಿಎಂ ಸಿದ್ದರಾಮಯ್ಯ.