ಅನ್ಯ ರಾಜ್ಯದವರಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾತಾಡಿ ಭಾಷಾ ಅಭಿಮಾನ ಮೆರೆದ ಸಿದ್ದರಾಮಯ್ಯ

ಬೆಂಗಳೂರಿನ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಕಾರ್ಯಕ್ರಮದಲ್ಲಿ ಇಂಗ್ಲೀಷ್‌ ಮಾತನಾಡುವಂತೆ ಮನವಿ ಮಾಡಿದರೂ, ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭಾಷಾಭಿಮಾನ ಮೆರೆದರು.

 

CM Siddaramaiah gave speech in Kannada at INSIGHT IAS organization program in Bengaluru sat

ಬೆಂಗಳೂರು (ಜೂ.18): ರಾಜ್ಯದಲ್ಲಿ ಇನ್‌ಸೈಟ್ಸ್ ಐಎಎಸ್ ಕಾರ್ಯಕ್ರಮದಲ್ಲಿ ಬಹುತೇಕ ಜನರು ಹೊರರಾಜ್ಯದ ಗಣ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂಗ್ಲೀಷ್‌ನಲ್ಲಿ ಮಾತನಾಡುವಂತೆ ಕಾರ್ಯಕ್ರಮ ಆಯೋಜಕರು ಮನವಿ ಮಾಡಿದರು. ಈ ವೇಳೆ ಹೊರಗಿನವರಿಗೆ ಅರ್ಥವಾಗದೇ ಇರಬಹುದು, ಆದರೆ, ಕರ್ನಾಟಕದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ನಾನು ಕನ್ನಡದಲ್ಲೇ ಮಾತಾಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕನ್ನಡದಲ್ಲಿಯೇ ಮಾತನಾಡಿದರು.

ಬೆಂಗಳೂರಿನಲ್ಲಿ ನಡೆದ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಐಎಎಸ್‌ ಟಾಪರ್ಸ್‌ಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಸಂಸ್ಥೆಯ ವಿನಯ್ ಕುಮಾರ್ ಮನವಿ ಮಾಡಿದರು. ಆದರೆ ನಾನು ಕನ್ನಡದಲ್ಲೇ ಮಾತನಾಡ್ತೀನಿ. ಕಾರ್ಯಕ್ರಮ ನಡೆಯುತ್ತಿರುವುದು ಕರ್ನಾಟಕದಲ್ಲಿ, ಹೊರಗಿನ ಕೆಲವೊಬ್ಬರಿಗೆ ಕನ್ನಡ ಅರ್ಥ ಆಗದೆ ಇರಬಹುದು. ಆದ್ರೂ ಕೂಡ ಕನ್ನಡದಲ್ಲೆ ಮಾತನಾಡ್ತೀನಿ ಎಂದು ಕನ್ನಡದಲ್ಲೇ ಭಾಷಣ ಮುಂದುವರೆಸಿದರು.

ಮತ್ತೆ ರಾಜಕೀಯ ಸನ್ಯಾಸತ್ವದ ಬಗ್ಗೆ ಡಿ.ಕೆ. ಸುರೇಶ್ ಮಾತು: ಡಿಕೆಶಿ ತಮ್ಮನಿಗಿರುವ ಕೊರಗಾದ್ರೂ ಏನು?

ಐಎಎಸ್‌ ಓದಿಕೊಂಡ್ರೂ ಅಂಬೇಡ್ಕರ್ ಆಶಯ ತಿಳಳ್ಕೋಬೇಕು:  ಎಲ್ಲರಿಗೂ ಒಂದು ವೋಟ್ ಒಂದು ಮೌಲ್ಯ ಇದೆ. ಆದರೆ ಆದೆ ಪರಿಸ್ಥಿತಿ ಸಮಾಜಿಕವಾಗಿ ಇಲ್ಲ. ನಮ್ಮ ಮನೆಯಲ್ಲೇ ನಾನೇ ಒಬ್ಬನೇ ಓದಿರುವವನು. ನಾವು ಏನೂ ಓದಬೇಕು ಎಂದು ಯಾರು ಹೇಳುವವರು ನಮ್ಮ ಮನೆಯಲ್ಲಿ ಇರಲಿಲ್ಲ ಇಲ್ಲ ಅಂದ್ರೆ ನಾವು IAS ಓದುತ್ತಿದ್ನೆನೋ. IAS ಓದಬೇಕು ಎಂಬುದೆ ನನಗೆ ಗೊತ್ತಿರಲಿಲ್ಲ. ಅಂಬೇಡ್ಕರ್ ಆಶಯದಂತೆ ನಡೆದುಕೊಂಡ್ರೆ ಸಮಾಜ ಬದಲಾಗುತ್ತೆ. ಇಲ್ಲ ಅಂದ್ರೆ IAS ಟಾಪರ್ ಆದ್ರೂ ಅಷ್ಟೇ ಏನೂ ಪ್ರಯೋಜನ ಇರಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು ಆದ್ರೂ ಸಮಾನತೆ ಬಂದಿಲ್ಲ. ಇಂಡಿಯಾ ಗ್ರಾಮೀಣ ದೇಶವಾಗಿದೆ. ಅವರಿಗೆ IAS ಓದುವ ಅವಕಾಶ ಮಾಡಿಕೊಡಬೇಕು. ಹಸಿವು ಗೊತ್ತಿರುವವನಿಗೆ ಹಸಿವನ್ನು ನೀಗಿಸುವುದು ಗೊತ್ತಿರುತ್ತದೆ ಎಂದು ಹೇಳಿದರು.

ಸರ್ಕಾರ ಮತ್ತು ಜನರಿಗೆ ಅಧಿಕಾರಿಗಳೇ ಸೇತುವೆ:  ಬ್ರಿಟಿಷ್ ಕಾಲದಲ್ಲಿ ICS ಇತ್ತು. ಆದ್ರೆ ಸ್ವತಂತ್ರ ನಂತರ IAS, IPS ಎಂದು ಬದಲಾಯ್ತು. ಪ್ರಜಾಪ್ರಭುತ್ವ ಅಂದ್ರೆ ಜನರಿಗಾಗಿ ಇರುವ ಸರ್ಕಾರ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸುಪ್ರೀಂ. ಜನರಿಗಾಗಿ ಪ್ರಜಾಪ್ರಭುತ್ವ ಇರೋದು. ಜನರ ಸೇವೆಗಾಗಿ ಉದ್ಯೋಗಕ್ಕೆ ಹೋಗುತ್ತಿದ್ದೇವೆ. ಜನರಿಯಿಂದ ಸರ್ಕಾರ ಆಯ್ಕೆ ಆಗುತ್ತದೆ. ಬದಲಾವಣೆ ತರಲು ಸರ್ಕಾರ ನೀತಿ ನಿಯಮ ತರುತ್ತದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ IAS ನವರು ಮಾಡುತ್ತಾರೆ. ಸರ್ಕಾರ ಮತ್ತು ಜನರ ಮಧ್ಯೆ IAS ಅಧಿಕಾರಗಳು ಸೇತುವೆ ಆಗಿರುತ್ತಾರೆ. ಚುನಾವಣೆಯಲ್ಲಿ ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಜವಾಬ್ದಾರಿ. ನಾವು ಜನರಿಗೆ ಉತ್ತರದಾಯಿತ್ವ ಆಗಿರಬೇಕು. ಇಲ್ಲ ಅಂದ್ರೆ ನಾವು ರಾಜಕಾರಣಿ ಆಗಿರಲು ಲಾಯಕ್ಕಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. 

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಆರಂಭದಲ್ಲೇ ವಿಘ್ನ: ಕೆಲಸಕ್ಕೆ ಬಾರದ ಸಿಬ್ಬಂದಿ, ಕೆಲಸ ಮಾಡದ ಸರ್ವರ್

ಕಾರ್ಯಕ್ರಮ ಆಯೋಜನಕರೇ ಹೆಸರು ಮರೆತ ಸಿಎಂ:  ಬೆಂಗಳೂರಿನಲ್ಲಿ ನಡೆಯುತ್ತಿದ್ದ ಇನ್‌ಸೈಟ್‌ ಸಂಸ್ಥೆಯ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹಾಜರಾಗಿದ್ದರೂ. ಇನ್‌ಸೈಟ್ಸ್ ಐಎಎಸ್ ನಿರ್ದೇಶಕ ಮಧುಕರ್ ಹೆಸರು ಮರೆತಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಲೇ ನಿಮ್ಮ ಹೆಸರೇನು ಎಂದು ಕೇಳಿದರು. ಆಗ ಸಭಿಕರು ಮಧುಕರ್ ಎಂದು ನೆನಪಿಸಿದರು. ಇವರ ಅಪ್ಪನ ಹೆಸರು ನೆನಪಿದೆ. ನಾಗಣ್ಣ ಅಂತ ಇವನು ಹೆಸರು ಯಾವಾಗಲೂ ಮರೆತು ಹೋಗುತ್ತೆ ಎಂದು ಹೇಳಿದರು. ಸಿಎಂ ಮಾತಿನ ಶೈಲಿಗೆ ಸಭಿಕರು ನಗೆಗಡಲಲ್ಲಿ ತೇಲಿದರು. 

Latest Videos
Follow Us:
Download App:
  • android
  • ios