ಕೆನಡಿಯನ್‌ ಇಂಟರ್‌ನ್ಯಾಶನಲ… ಸ್ಕೂಲ್‌ನಲ್ಲಿ ಭಾನುವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು 12ನೇ ತರಗತಿ ಪೂರ್ಣಗೊಳಿಸಿದ ಮೊಮ್ಮಗ ಧವನ್‌ಗೆ ಶುಭ ಕೋರಿದರು.

ಬೆಂಗಳೂರು (ಮೇ.22) : ಕೆನಡಿಯನ್‌ ಇಂಟರ್‌ನ್ಯಾಶನಲ… ಸ್ಕೂಲ್‌ನಲ್ಲಿ ಭಾನುವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು 12ನೇ ತರಗತಿ ಪೂರ್ಣಗೊಳಿಸಿದ ಮೊಮ್ಮಗ ಧವನ್‌ಗೆ ಶುಭ ಕೋರಿದರು.

ಸಿದ್ದರಾಮಯ್ಯ(Siddaramaiah) ಅವರು ಧವನ್‌ಗೆ ತಾವೇ ಪ್ರಮಾಣಪತ್ರವನ್ನು ನೀಡಿದರು. ಈ ವೇಳೆ ಧವನ್‌ ಗೌನ್‌ ಮೇಲೆ ಕನ್ನಡ ಧ್ವಜವನ್ನು ಹಾಕಿಕೊಂಡಿದ್ದು ವಿಶೇಷವಾಗಿತ್ತು. ಬಳಿಕ ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು ಸಂತಸ ಹಂಚಿಕೊಂಡಿದ್ದಾರೆ.

ನನ್ನ ಮೊಮ್ಮಗ ’ಕೆನಡಿಯನ್‌ ಇಂಟರ್‌ನ್ಯಾಶನಲ… ಸ್ಕೂಲ್‌(Canadian International School)ನಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾನೆ. ಪದವಿ ತರಗತಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗಾಗಿ ಶಾಲೆ ಬೀಳ್ಕೊಡುಗೆ ಆಯೋಜಿಸಿತ್ತು. ಈ ಸಮಾರಂಭದ ಭಾಗವಾಗಲು ನನಗೆ ಸಂತೋಷವಾಗಿದೆ. 12 ನೇ ತರಗತಿ ಪೂರ್ಣಗೊಳಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

ದಿ.ರಾಕೇಶ್‌ ಸಿದ್ದರಾಮಯ್ಯ ಅವರ ಮಗನಾಗಿರುವ ಧವನ್‌ ಈಚೆಗೆ ವರುಣದಲ್ಲಿ ತಮ್ಮ ತಾತ ಸಿದ್ದರಾಮಯ್ಯ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು.

ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ; ತಾತಗೆ ಸಾಥ್ ನೀಡಿದ ಧವನ್ ರಾಕೇಶ್!