Asianet Suvarna News Asianet Suvarna News

ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

 ರಾಪಿಡೋ ಬೈಕ್‌ ಟ್ಯಾಕ್ಸಿಯಿಂದ ಆಗುತ್ತಿರುವ ತೊಂದರೆ ಕುರಿತು ವಿಶೇಷ ಅಡ್ವೊಕೇಟ್‌ ಜನರಲ್‌ ಅವರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

CM Siddaramaiah action against rapido bike taxis at bengaluru rav
Author
First Published Aug 22, 2023, 11:46 AM IST

ಬೆಂಗಳೂರು (ಆ.22) :  ರಾಪಿಡೋ ಬೈಕ್‌ ಟ್ಯಾಕ್ಸಿಯಿಂದ ಆಗುತ್ತಿರುವ ತೊಂದರೆ ಕುರಿತು ವಿಶೇಷ ಅಡ್ವೊಕೇಟ್‌ ಜನರಲ್‌ ಅವರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯಲ್ಲಿ ರಾಪಿಡಡೋ ಬೈಕ್‌ ಟ್ಯಾಕ್ಸಿ(Rapido bike taxi), ಚಾಲಕರ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ವಿಷಯಗಳ ಕುರಿತು ನಡೆದ ಚರ್ಚೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Karnataka transport minister ramalingareddy), ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಆಟೋ, ಟ್ಯಾಕ್ಸಿ, ಲಾರಿ ಮತ್ತು ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ರ‍್ಯಾಪಿಡೋ ಬುಕ್ ಮಾಡಿದ್ರೆ ಬಂತು ರಾಯಲ್‌ ಎನ್‌ಫೀಲ್ಡ್, ರೈಡರ್ ಜಾಬ್‌ ಬಗ್ಗೆ ತಿಳಿದು ವ್ಯಕ್ತಿ ಶಾಕ್‌!

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿಯವರು ಚರ್ಚಿಸಿದ್ದಾರೆ. ಆಟೋ, ಕ್ಯಾಬ್‌ಗಳಿಗೆ ಪ್ರತ್ಯೇಕ ಆ್ಯಪ್‌ ಮಾಡುವ ವಿಚಾರ ಸೇರಿದಂತೆ ಮುಖ್ಯವಾಗಿ ತೆರಿಗೆ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಖಾಸಗಿ ಬಸ್‌ಗಳನ್ನು ಶಕ್ತಿ ಯೋಜನೆಗೆ ಸೇರಿಸಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದರು.

ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ರಾರ‍ಯಪಿಡೋ ಬೈಕ್‌ ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ವಿಶೇಷ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. ಹಾಗೆಯೇ ಚಾಲಕರ ಅಭಿವೃದ್ಧಿ ನಿಗಮ ಕುರಿತು ಆಗಸ್ಟ್‌ 30ರೊಳಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಸಾರಥಿ ಸೂರು ಯೋಜನೆಯಡಿ ಆಟೋ ಚಾಲಕರಿಗೆ ಕ್ವಾಟ್ರರ್ಸ್‌ ಕಟ್ಟಿಕೊಡುವ ಕುರಿತು ವಸತಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಆಟೋ ಚಾಲಕರಿಗೆ ಜಾತಿವಾರು ನಿಗಮಗಳಿಂದ ಹೊಸ ಆಟೋ ಕೊಡುವ ಬಗ್ಗೆ ಮತ್ತು ನಿಗಮಗಳಿಂದ ಸಾಲ ಸೌಲಭ್ಯ ಒದಗಿಸುವ ಕುರಿತು ಹಣಕಾಸು ಇಲಾಖೆಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ: ಮನವಿ

ಖಾಸಗಿ ಬಸ್‌ ಮಾಲಿಕರ ಸಂಘದ ಸುರೇಶ್‌ ಮಾತನಾಡಿ, ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಿಸಲು ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಇಲ್ಲಿಯೂ ತಮಿಳುನಾಡು ಮಾದರಿ ಅನುಸರಿಸಲು ಕೋರಿದ್ದೇವೆ. ಸ್ಮಾರ್ಚ್‌ ಕಾರ್ಡ್‌ ಮೂಲಕ ಖಾಸಗಿ ಬಸ್‌ಗಳಿಗೆ ಶಕ್ತಿ ಯೋಜನೆ ಸೇರಿಸುವಂತೆ ಮನವಿ ಮಾಡಿದ್ದು ಆಗಸ್ಟ್‌ 30ರೊಳಗೆ ಈ ಬಗ್ಗೆ ತಿಳಿಯಲಿದೆ ಎಂದರು.

 

Bengaluru: ನಿಮ್ಮ ಬೈಕ್‌ ಕದಿಯೋಕೆ ರ್ಯಾಪಿಡೋ ಬೈಕ್‌ನಲ್ಲಿ ಖದೀಮರು ಬರ್ತಾರೆ ಎಚ್ಚರ..

ಲಾರಿ ಮಾಲಿಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಅವರು, ತೆರಿಗೆ ಹೆಚ್ಚಿಸಲಾಗಿದ್ದು ಸ್ಕ್ರಾಪ್‌ ಪಾಲಿಸಿ ಮಾಡಿರುವುದರಿಂದ ಹಳೆ ಗಾಡಿಗೂ ತೆರಿಗೆ ಕಟ್ಟಬೇಕಿದೆ. ಈ ಕುರಿತು ತೆರಿಗೆ ಕಡಿಮೆ ಮಾಡುವ ಬಗ್ಗೆ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios