ಶಾಸಕ ಯತ್ನಾಳ್ ಅಲ್ಪಸಂಖ್ಯಾತರ ವಿರೋದಿ: ಸಿಎಂ ಸಿದ್ದು ಕಿಡಿ

ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ ರೆಡ್ಡಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗಲು ಹೊರಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

CM Siddaramaia reaction about moulvi Tanvir hasmi at samba airport at belagavi rav

ಬೆಳಗಾವಿ (ಡಿ.7) : ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ ರೆಡ್ಡಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗಲು ಹೊರಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದರು. ಈ ವೇಳೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ವಿಸ್ತರಣೆ ಆಗ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಸ್ತರಣೆ ಅಲ್ಲ ದಕ್ಷಿಣ ಭಾರತದಲ್ಲಿ ಬಿಜೆಪಿಯೇ ಇಲ್ಲ ಎಂದರು. ನೀವೇ ಹೇಳಿ ದಕ್ಷಿಣ ‌ಭಾರತದಲ್ಲಿ ಬಿಜೆಪಿ ಎಲ್ಲಿದೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಎಸ್ಇಪಿಟಿಎಸ್ಪಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸ್ತಿರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಿಂದ ಕಾರಜೋಳ ಅವರ ಕಾಲದಲ್ಲಿ ಎಸ್ಇಪಿಟಿಎಸ್ಪಿ ಹಣ ಯಾಕೆ ಕಡಿಮೆ ಇತ್ತು ಅವರು ಹೇಳಬೇಕು. ನಾನು ಲಾಸ್ಟ್ ಬಜೆಟ್ ಮಂಡಿಸಿದಾಗ 30 ಸಾವಿರ ಕೋಟಿ ಇತ್ತು. ಇವರ ಕಾಲದಲ್ಲಿ 25 ಸಾವಿರ ಕೋಟಿ ಆಯ್ತು. ಅದ್ಯಾಕಾಯ್ತು ಎಂದು ಬಿಜೆಪಿಯವರು ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.

ಸಾರೇ ಜಹಾಸೇ ಅಚ್ಚಾ... ದೇಶಭಕ್ತಿ ಗೀತೆ ಮೂಲಕ ಯತ್ನಾಳ್‌ಗೆ ಟಾಂಗ್ ಕೊಟ್ಟ ಮೌಲ್ವಿ ತನ್ವೀರ್ ಹಾಶ್ಮಿ! ವೈರಲ್ ವಿಡಿಯೋ

7ಡಿ ಕಲಂ ನೀವು ಹಿಂದೆ ಸಿಎಂ ಆಗಿದ್ದಾಗ ರದ್ದು ಮಾಡ್ತಿವಿ ಎಂದಿದ್ರಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಲಮ ರದ್ದು ಮಾಡ್ತೀವಿ. ಆದೇಶವನ್ನು ಶೀಘ್ರವೇ ಹೊರಡಿಸ್ತಿವಿ ಎಂದರು. ಇದೇ ವೇಳೆ ಭಾರೀ ವೈರಲ್ ಆಗುತ್ತಿರುವ ಪೀರಾ ಮೌಲಿ ಜೊತೆಗೆ ಐಸಿಸ್ ನಂಟಿದೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅವರ ಜತೆಗಿನ ನನ್ನ ಸಂಬಂಧ ಇತ್ತೀಚಿನದಲ್ಲಿ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಯತ್ನಾಳ ದ್ವೇಷದ ರಾಜಕಾರಣಿ, ಅಲ್ಪಸಂಖ್ಯಾತರ ವಿರೋಧಿ ರಾಜಕಾರಣ ಮಾಡ್ತಾರೆ. ಅವರು ಚುಣಾವಣೆ ಗೆಲ್ಲಲು ಈ ರೀತಿ ಮಾತನಾಡಬಾರದು. ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ಹಸ್ಮಿಯವರು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ. ಕೇಂದ್ರದಲ್ಲಿ ಅವರದ್ದೆ ಸರ್ಕಾರ ಇದೆ ಅದನ್ನ ಫ್ರೂವ್ ಮಾಡಲಿ. ಬರೀ ಆರೋಪ ಮಾಡೋದಲ್ಲ ಅವರದ್ದೇ ಸರ್ಕಾರ ಇದೆ ತಿರುಗೇಟು ನೀಡಿದರು.

ಐಸಿಸ್‌ ನಂಟು ಸಾಬೀತುಪಡಿಸಿದರೆ ದೇಶ ತೊರೆಯುವೆ; ಯತ್ನಾಳ್‌ಗೆ ತನ್ವೀರ್‌ ಹಾಶ್ಮಿ ಸವಾಲು!

ಯತ್ನಾಳ್ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ ವಿರೋಧಪಕ್ಷದ ನಾಯಕ ಸ್ಥಾನದ ಮೇಲೂ ಪ್ರಯತ್ನ ನಡೆಸಿದರು. ಆದ್ರೆ ಎರಡೂ ಸಿಗಲಿಲ್ಲ. ಅದಕ್ಕೆ ಹತಾಶೆಯಿಂದ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಅವನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.

Latest Videos
Follow Us:
Download App:
  • android
  • ios