ಬಿಜೆಪಿ ಉಳಿದಿರುವುದೇ ಹಿಂದುತ್ವದ ಹೆಸರು ಹೇಳಿಕೊಂಡು. ಅವರಿಗಿಂತ ದೊಡ್ಡ ಹಿಂದುತ್ವ ನಮಗಿದೆ. ಆದರೆ ನಮ್ಮಲ್ಲಿ ಎಲ್ಲ ಜಾತಿ, ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಸೂಚಿಯಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ: ಇದು ಹುಡುಗಾಟದ ಚುನಾವಣೆಯಲ್ಲ. ಈ ಚುನಾವಣೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಇದು ಯಾವುದೋ ವ್ಯಕ್ತಿಯ ವಿರುದ್ಧದ ಚುನಾವಣೆಯಲ್ಲ. ಅಭಿವೃದ್ಧಿಯ ಪರ ಚುನಾವಣೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಉಳಿದಿರುವುದೇ ಹಿಂದುತ್ವದ ಹೆಸರು ಹೇಳಿಕೊಂಡು. ಅವರಿಗಿಂತ ದೊಡ್ಡ ಹಿಂದುತ್ವ ನಮಗಿದೆ. ಆದರೆ ನಮ್ಮಲ್ಲಿ ಎಲ್ಲ ಜಾತಿ, ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಸೂಚಿಯಿದೆ. ಈ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರ ಹೆಸರನ್ನು ಕಾಗೋಡು ತಿಮ್ಮಪ್ಪ ಸೇರಿದಂತೆ ಕಾಂಗ್ರೆಸ್‌ನ ನಾಯಕರೇ ಸೂಚಿಸಿದರು. ಚುನಾವಣೆ ವ್ಯಕ್ತಿಗತ ಚುನಾವಣೆಯಲ್ಲ. ಅಭಿವೃದ್ಧಿಪರ, ಹೊಸ ಬದಲಾವಣೆಯ ಪರವಾದ ಚುನಾವಣೆ ಇದಾಗಿದೆ ಎಂದರು.
ಈ ಮೈತ್ರಿ ಸರ್ಕಾರದಿಂದ ಯಾವ ರಾಜ್ಯದಲ್ಲೂ ಈವರೆಗೆ ಮಾಡದಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಿದ್ದೇವೆ ಎಂದರು. ಶಿವಮೊಗ್ಗ ಚುನಾವಣೆ ಮೂಲಕ ಹೊಸ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಹುಡುಗಾಟಕ್ಕಾಗಿ ಮಧು ಬಂಗಾರಪ್ಪರನ್ನು ಅಭ್ಯರ್ಥಿಯಾಗಿ ಮಾಡಿಲ್ಲ. ಇದು ವ್ಯಕ್ತಿಗತ ಚುನಾವಣೆಯೂ ಅಲ್ಲ. ಈ ಚುನಾವಣೆ ದೇವರ ಆಟ, ಕಾಗೋಡು ತಿಮ್ಮಪ್ಪ ಭೀಷ್ಮಚಾರ್ಯರಂತೆ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
