ಬೆಂಗಳೂರು(ಮೇ.31): ಸಂಸದ ರಾಜೀವ್ ಚಂದ್ರಶೇಖರ್‌ಗೆ ಹುಟ್ಟುಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿಡುತ್ತಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ಗೆ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

"

ಮೋದಿ 2.0: ಸಂಕಷ್ಟದಲ್ಲಿ ಸಿಕ್ಕ ಅತಿಮಾನುಷ ನಾಯಕ!

ಟ್ವೀಟ್ ಮಾಡಿರುವ ಬಿಎಸ್‌ವೈ 'ಕಠಿಣ ಪರಿಶ್ರಮಿ ಸಂಸತ್ ಸದಸ್ಯರು, ಆತ್ಮೀಯರೂ ಆಗಿರುವ ಶ್ರೀ ರಾಜೀವ್ ಚಂದ್ರಶೇಖರ್ ಅವರಿಗೆ ಜನ್ಮದಿನದ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ;' ಎಂದು ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಕರ್ನಾಟಕ ರಾಜ್ಯದ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ 56ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರಲ್ಲಿ ಗುರುತಿಸಿಕೊಳ್ಳುವ ರಾಜೀವ್ ಚಂದ್ರಶೇಖರ್ ಓರ್ವ ಉದ್ಯಮಿಯೂ ಹೌದು.