ಬೆಂಗಳೂರು(ಮೇ.13): ರಾಜ್ಯದಲ್ಲಿ ಎದ್ದಿರುವ ಲಸಿಕೆ ಸಮಸ್ಯೆ, ಕೊರೋನಾ ಸೋಂಕಿತಿರ ಚಿಕಿತ್ಸೆ, ಆಕ್ಸಿಜನ್ ಸೇರಿದಂತೆ ಹಲವು ಗೊಂದಲಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಇಂದು(ಮೇ.13) ಸಂಜೆ ಸುದ್ಧಿಗೋಷ್ಠಿ ನಡೆಸಿದ ಯಡಿಯೂರಪ್ಪ, ಅಂಕಿ ಅಂಶ ಸಮೇತ ಉತ್ತರ ನೀಡಿದ್ದಾರೆ.

"

ಕೊರೋನಾ ಆತಂಕ; SSLC ಪರೀಕ್ಷೆ ಮುಂದಕ್ಕೆ ಹಾಕಿದ ಸರ್ಕಾರ  

ಪ್ರಮುಖವಾಗಿ 2ನೇ ಡೋಸ್ ಲಸಿಕೆ ಪಡೆಯುವವರಿಗೆ ಆದ್ಯತೆ ನೀಡುವ ಸಲುವಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಹೆಚ್ಚುವರಿ ಲಸಿಕೆಗೆ ಆರ್ಡರ್ ನೀಡಿರುವುದಾಗಿ ಯಡಿಯೂರಪ್ಪ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಕಠಿಣ ನಿರ್ಬಂದಗಳನ್ನೇ ಹೇರಲಾಗಿದೆ. ಪರಿಣಾಣ ಮೇ. 05 ರಂದು ಕರ್ನಾಟಕದಲ್ಲಿ 50,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇದು ನಿನ್ನೆ(ಮೇ.12) ರ ವೇಳೆಗೆ 39,900ಕ್ಕೆ ಇಳಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ  ಮೇ .5 ರಂದು 23,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇದೀಗ  ಮೇ.12ರ ವೇಳೆಗೆ ಬೆಂಗಳೂರಿನಲ್ಲಿ 16,286ಕ್ಕೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

ಆರಂಭದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ತೀವ್ರ ಏರಿಕೆಯಾಗುತ್ತಿದ್ದ, ಬೆಂಗಳೂರು ಹಾಗೂ ಕಲ್ಬುರ್ಗಿಯಲ್ಲಿ ಪ್ರಕರಣ ಸಂಖ್ಯೆ ಪಾಸಿಟೀವ್ ದರ ಕಡಿಮೆಯಾಗುತ್ತಿದೆ.   ಸದ್ಯ ಇಲಾಖೆ ವ್ಯಾಪ್ತಿಯಲ್ಲಿ 24 ಸಾವಿರ ಆಕ್ಸಿಜನ್ ಬೆಡ್, 1145 ಐಸಿಯು ಬೆಡ್, 2,019 ವೆಂಟಿಲೇಟರ್ ಸೌಲಭ್ಯಕ್ಕೆ ಹೆಚ್ಚಿಸಲಾಗಿದೆ. ಇನ್ನು ಐಸೋಲೇಟೆಡ್ ಬೆಡ್ ಸಂಖ್ಯೆ 4 ರಿಂದ 9,000  ಹೆಚ್ಚಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಬೆಂಗಳೂರಲ್ಲಿ ಸೋಂಕು 2-3 ವಾರದಲ್ಲಿ ಇಳಿಕೆ, ಇತರೆಡೆ ತೀವ್ರ ಏರಿಕೆ

ಆಸ್ಪತ್ರೆ ಮೂಲ ಸೌಕರ್ಯ ಬಲಪಡಿಸುವ ಕಾರ್ಯ ಮುಂದುವರಿದಿದೆ.  ಖಾಸಗಿ ಆಸ್ಪತ್ರೆ 200 ವೆಂಟಿಲೇಟರ್ ಬೆಡ್ ನೀಡಿದೆ. ಇದರ ಜೊತೆಗೆ  ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಸಹಾಯಧನ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಶೇಕಡಾ 70 ರಷ್ಟು ಸಹಾಯಧನ ಸರ್ಕಾರ ನೀಡಲಿದೆ. ಇನ್ನು ಕೇವಲ 30 ಶೇಕಡಾ ಖಾಸಗಿ ಆಸ್ಪತ್ರೆ ಭರಿಸಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಆಕ್ಸಿಜನ್ ಸರಿದೂಗಿಸಲು 3 ಅಂಶದ ಕಾರ್ಯಸೂತ್ರ:
ಆಕ್ಸಿಜನ್ ಸರಿದೂಗಿಸಲು 3 ಅಂಶದ ಕಾರ್ಯಸೂತ್ರ ಜಾರಿಗೆ ತಂದಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಉತ್ಪಾದನೆ ಹೆಚ್ಚಳ, ಕಾನ್ಸರೇಟರ್ಸ್ ಸಿಲಿಂಡರ್ ಖರೀದಿಯಲ್ಲಿ ಹೆಚ್ಚಳ ಮಾಡಲಾಗಿದೆ.  ಭಾರತ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಪ್ರಮಾಣವನ್ನು 965 ಮೆಟ್ರಿಕ್ ಟನ್‌ನಿಂದ 1,115 ಹೆಚ್ಚಿಸಲಾಗಿದೆ.

ಬಹ್ರೇನ್‌ನಿಂದ 40 ಮೆಟ್ರಿಕ್ ಟನ್, ಕುವೈಟ್‌ನಿಂದ 100 ಟನ್, ಜೆಮ್‌ಶೆಡ್ ಪುರದಿಂದ 120 ಟನ್ ಆಕ್ಸಿಜನ್ ರಾಜ್ಯಕ್ಕೆ ತರಿಸಲಾಗಿದೆ.  ಇದರ ಜೊತೆಗೆ ಉತ್ಪಾದನಾ ಘಟಕ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ.   ಮೆಡಿಕಲ್ ಕಾಲೇಜು,  ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ 125 ಆಮ್ಲಜನಕ ಉತ್ಪಾದನಾ ಘಚಕ ಸ್ಥಾಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಸಂಚಾರಿ ಆಕ್ಸಿಜನ್ ಬಸ್ ಚಾಲನೆ ನೀಡಲಾಗಿದ್ದು,  ತುರ್ತ ಅಗತ್ಯವಿರುವವರಿಗೆ ಇದು ನೆರವಾಗುತ್ತಿದೆ ಎಂದು ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆಕ್ಸಿಜನ್ ಒತ್ತಡ ನಿಭಾಯಿಸಲು, 10,000 ಆಕ್ಸಿಜನ್ ಸಿಲಿಂಜರ್ ಪಡೆಯಲು ತೀರ್ಮಾನ ಮಾಡಲಾಗಿದೆ. ಇನ್ನು 730 ಆಕ್ಸಿನಜನ್ ಸಿಲಿಂಡರ್ ತರಿಸಲಾಗಿದೆ. 350 ಕೇಂದ್ರ, 350 ವಿದೇಶದಿಂದ ಪಡೆಯಲಾಗಿದೆ. ಇದನ್ನು ಅಗತ್ಯ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು. ಇದುವರೆಗೆ ಜಿಲ್ಲೆಗಳಿಗೆ 3,000 ಆಕ್ಸಿಜನ್ ಕಾನ್ಸಟ್ರೇಟರ್ಸ್ ಹಂಚಿಕೆಯಾಗಿದೆ. ಇನ್ನ 7,000 ಹಂಚಿಕೆ ಮಾಡಲಾಗುವುದು ಎಂದರು.

ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ನಾಗರೀಕರು, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಪೂರೈಕೆ ಮಾಡುತ್ತಿದೆ. 1.10 ಕೋಟಿ ಪೂರೆೈಕೆ ಮಾಡಲಾಗಿದೆ, ರಾಜ್ಯ 18 ರಿಂದ 44 ವರ್ಷದವರಿಗೆ ಲಸಿಕೆ ಅಭಿಯಾನಕ್ಕೆ 3 ಕೋಟಿ ಲಿಸಿಕೆ ಆರ್ಡರ್ ಮಾಡಲಾಗಿದೆ. ಹೆಚ್ಚುವರಿಗೆಯಾಗಿ2 ಕೋಟಿ ಲಸಿಕೆಗೆ ಟೆಂಡರ್ ಕರೆಯಲಾಗಿದೆ  2ನೇ ಡೋಸ್ ಪಡೆಯುವವರಿಗೆ ಹೆಚ್ಚಿನ ಆದ್ಯತೆ ನೀಡಿರುವ ಕಾರಣ 18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಓಲಾ ಮತ್ತು ಊಬರ್1 ಸಾವಿರ ಆಕ್ಸಿಜನ್ ಕಾನ್ಸಟ್ರಟರ್ಸ್ ನೀಡುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.  ಇನ್ನು 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲು 3 ಕೋಟಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 2 ಕೋಟಿ ಕೋವಿಶೀಲ್ಡ್ ಹಾಗೂ 1 ಕೋಟಿ ಕೊವಾಕ್ಸಿನ್ ಲಸಿಕೆ ನೀಡಲಾಗುವುದು. 3.5 ಲಕ್ಷ ಕೋವಿಶೀಲ್ಡ್, 1.4 ಲಕ್ಷ ಕೊವಾಕ್ಸಿನ್ ಸೇರಿದಂತೆ ಒಟ್ಟು 8.4 ಲಕ್ಷ ಲಸಿಕೆ ಲಭ್ಯವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

14 ಲಕ್ಷ ಫಲಾನುಭವಿಗಳು ಕೋವಿಶೀಲ್ಡ್ ಎರಡನೇ ಲಸಿಕೆಗೆ ಅರ್ಹರಾಗಿದ್ದಾರೆ.  ಇದರಲ್ಲಿ  4 ಲಕ್ಷ ಫಲಾನುಭವಿಗಳು ಕೋವಾಕ್ಸಿನ್ ಲಸಿಕೆಗೆ ಅರ್ಹರಾಗಿದ್ದೂರೆ. ಒಟ್ಟು 19.97 ಲಕ್ಷ ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆಯಲು ಸಜ್ಜಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.  ಮೊದಲ  ಡೋಸ್ ಪಡೆದವರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ.  

ಏ. 20 ರಿಂದ ಮೇ 9 ರವರೆಗೆ 3.01 ಲಕ್ಷ ರೆಮಿಡಿಸಿವಿಯರ್ ಔಷದವನ್ನು ಕೇಂದ್ರ ಸರ್ಕಾರ ಸರಬರಾಜು ಮಾಡಿದೆ. ರಾಜ್ಯದಲ್ಲಿ ರೆಮಿಡಿಸಿವಿಯರ್ ಬೇಡಿಕೆ ಹೆಚ್ಚಿರುವ ಕಾರಣ ಕೇಂದ್ರಕ್ಕೆ ವಿಶೇಷ ಮನವಿ ಮಾಡಲಾಗಿದೆ. ಹೆಚ್ಚುವರಿ ಲಸಿಕೆ ಪೂರೈಸುವಂತೆ ಹಾಗೂ ಸಮಾನವಾಗಿ ಹಂಚಿಕೆ ಮಾಡಲು ಮನವಿ ಮಾಡಲಾಗಿದೆ. ಕಠಿಣ ಕ್ರಮ ಕೈಗೊಂಡ ನಂತರ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಜನತೆ ಎಲ್ಲ ನಿರ್ಬಂಧಗಳನ್ನು ಕೊರೋನಾ ನಿಯಂತ್ರಣಕ್ಕೆ ಅಗತ್ಯ. ಹೀಗಾಗಿ ಜನರು ಸಹಕರಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಸದ್ಯಕಿಲ್ಲ:
ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಶ್ರಮಿಕ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಕುರಿತು ಮಾತನಾಡಿದ ಯಡಿಯೂರಪ್ಪ, ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಸದ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನು 5 ಕೆಜಿ ಅಕ್ಕಿ ವ್ಯವಸ್ಥೆ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.