ಎಲ್ಲ ಸಮಸ್ಯೆಗೂ ಭಗವದ್ಗೀತೆಯಿಂದ ಮುಕ್ತಿ: ಏಷ್ಯಾದ ಅತಿದೊಡ್ಡ ಜ್ಞಾನಲೋಕ ಮ್ಯೂಸಿಯಂ ಲೋಕಾರ್ಪಣೆ

* ಭಗವದ್ಗೀತೆ ಅಧ್ಯಯನ ಇಂದಿನ ಅತ್ಯಗತ್ಯ

* ಜೀವನ ಸಾರವನ್ನು ತಿಳಿಸುವುದೇ ಭಗವದ್ಗೀತೆ

* ಮೋದಿಯಿಂದ ಜೀವನ ಮೌಲ್ಯ ಬಿತ್ತುವ ರಾಜಕಾರಣ: ಬೊಮ್ಮಾಯಿ

CM Bommai inaugurates Gita Museum in Hubballi pod

ಹುಬ್ಬಳ್ಳಿ:(ಮೇ.16): ಜೀವನದ ಸಾರವನ್ನು ತಿಳಿದುಕೊಳ್ಳಬೇಕೆಂದ್ರೆ ಭಗವದ್ಗೀತೆ ಓದಬೇಕು.ಜೀವನದಲ್ಲಿ ಸಮಸ್ಯೆ ಬಂದ್ರೆ ಭಗವದ್ಗೀತೆ ಒಂದು ಪುಟ ತೆಗೆದು ನೋಡಿ. ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತೆ, ನನಗೂ ಇದರ ಅನುಭವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತೆ, ನನಗೂ ಇದರ ಅನುಭವಾಗಿದೆ. ಹೀಗಾಗಿ ಭಗವದ್ಗೀತೆ ಜಗತ್ತಿನ ಶ್ರೆಷ್ಠ ಧರ್ಮಗ್ರಂಥ. ಈಶ್ವರಿ ಪ್ರಜಾಪಿಥ ಬ್ರಹ್ಮಕುಮಾರಿ ವಿಶ್ವವಿಧ್ಯಾಲಯದ ಕಾರ್ಯ ಅದ್ಬುತ ಎಂದರು.

ಭಗವದ್ಗೀತೆ ಎಲ್ಲರಿಗೂ ಗೊತ್ತಗಾಲಿ ಎನ್ನುವುದಕ್ಕೆ, ಈ ಜ್ಞಾನಲೋಕ ಮ್ಯುಸಿಯಂ ನಿರ್ಮಿಸಿದ್ದಾರೆ. ಧರ್ಮ ಶ್ರೆಷ್ಠವಾದ ಭಾರತ ನಮ್ಮದಾಗಬೇಕು. ಅದುವೇ ನಮ್ಮ ಪ್ರದಾನ ಮಂತ್ರಿ ಮೋದಿಯವ ಕನಸು.‌ ಅಸತ್ಯ ಸತ್ಯದ ಮೇಲೆ ಆಡಳಿತ ಮಾಡ್ತಿದೆ. ಅನ್ಯಾಯ‌ ನ್ಯಾಯದ ಮೇಲೆ ಪರಾಕ್ರಮ ಮಾಡ್ತಿದೆ. ಮೌಲ್ಯಯುತ ಸಮಾಜ ನಿರ್ಮಾಣ ಮಾಡೋಕೆ ಸಂಕಲ್ಪ‌ ಮಾಡೋಣ ಎಂದು ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.

ಏಷ್ಯಾದ ಅತಿದೊಡ್ಡ ಜ್ಞಾನಲೋಕ ಮ್ಯೂಸಿಯಂ ಲೋಕಾರ್ಪಣೆ...!

ಇನ್ನು ಇದೇ ವೇಳೆ ಹುಬ್ಬಳ್ಳಿ ಭೈರಿದೇವರಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನ ಲೋಕ ಮ್ಯೂಸಿಯಂ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆಗೊಳಿಸಿದರು.

ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣವಾಗಿರುವ ಭಗವದ್ಗೀತಾ ಜ್ಞಾನಲೋಕ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸಚಿವರಾದ ಹಾಲಪ್ಪ ಆಚಾರ, ಶಂಕರ ಪಾಟೀಲ್ ಮುನೇನಕೊಪ್ಪ, ಸಂಸದ ಬಿ.ವೈ.ರಾಘವೇಂದ್ರ  ಶಾಸಕರಾದ ಅರವಿಂದ ಬೆಲ್ಲದ, ಸೋಮಶೇಖರ ರೆಡ್ಡಿ,  ಬ್ರಹ್ಮಕುಮಾರಿಸ್ ಮೌಂಟ್ ಅಬು ಎಡಿಷನಲ್ ಜನರಲ್‌ ಸೆಕ್ರೆಟರಿ ರಾಜಯೋಗಿ ಬೃಜ್ ಕುಮಾರ, ಬ್ರಹ್ಮಕುಮಾರಿ ಸಂತೋಷ ದಿದೀಜಿ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.

ಏನೇನಿದೆ?:

ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. 700 ಶ್ಲೋಕಗಳಿವೆ. ಪ್ರತಿ ಶ್ಲೋಕ ಏನನ್ನು ಹೇಳುತ್ತದೆ. ಅದರ ಅರ್ಥವೇನು? ಮನುಷ್ಯನಿಗೆ ಹೇಗೆ ಅರ್ಥೈಸಿಕೊಳ್ಳಬೇಕು? ಯಾವ ಕಾರಣಕ್ಕಾಗಿ ಯಾವ್ಯಾವ ಶ್ಲೋಕ ಮಹತ್ವ ಪಡೆದಿವೆ? ಭಗವದ್ಗೀತೆ ಬರೀ ಒಂದೇ ಸಮುದಾಯಕ್ಕೆ ಸೀಮಿತವೋ? ಇಡೀ ಜಗತ್ತಿಗೆ ಅದರ ಅಗತ್ಯವಿದೆಯೋ ಎಂಬುದನ್ನು ವಿವರಿಸುವುದು ಇಲ್ಲಿನ ವಿಶೇಷ. 5 ಎಕರೆ ಪ್ರದೇಶದಲ್ಲಿ ಭವ್ಯ ಕಟ್ಟಡದೊಳಗೆ ಸ್ಥಾಪಿಸಲಾಗಿರುವ ಈ ಮ್ಯೂಸಿಯಂನಲ್ಲಿ 114 ಪ್ರತ್ಯೇಕ ಕೊಠಡಿಗಳಿವೆ. ಪ್ರತಿ ಕೊಠಡಿಗಳಲ್ಲೂ ಭಗವದ್ಗೀತೆಯ ಬೇರೆ ಬೇರೆ ಶ್ಲೋಕಗಳನ್ನು ವಿವಿಧ ಬಗೆಯಲ್ಲಿ ವಿವರಿಸುವ ವ್ಯವಸ್ಥೆ ಮಾಡಲಾಗಿದೆ. ಕೆಲವು ಶ್ಲೋಕಗಳನ್ನು ಚಿತ್ರಗಳ ಮೂಲಕ ವಿವರಿಸಿದರೆ, ಕೆಲವೊಂದನ್ನು ವಿಡಿಯೋ, ಅಡಿಯೋಗಳ ಮೂಲಕ ವಿವರಿಸುವ, ವಿಶ್ಲೇಷಿಸುವ ವ್ಯವಸ್ಥೆ ಇಲ್ಲಿದೆ.

ದೇಶದಲ್ಲಿ ಹತ್ತಾರು ಮ್ಯೂಸಿಯಂಗಳಿವೆ. ಆಧ್ಯಾತ್ಮಿಕ ವಿಷಯಗಳಿಗೂ ಸಂಬಂಧಪಟ್ಟಂತೆ ಸಾಕಷ್ಟುಮ್ಯೂಸಿಯಂಗಳಿವೆ. ಆದರೆ ಭಗವದ್ಗೀತೆಗೆ ಸಂಬಂಧಪಟ್ಟಂತೆ ಇಷ್ಟೊಂದು ದೊಡ್ಡ ಮ್ಯೂಸಿಯಂ ಮಾಡಿರುವುದು ಇದೇ ಮೊಟ್ಟಮೊದಲು ಎಂದು ಧಾರವಾಡ ವಲಯದ ಮುಖ್ಯಸ್ಥೆ ಬಿ.ಕೆ. ಜಯಂತಿ ತಿಳಿಸುತ್ತಾರೆ.

ಯೋಗ, ಧ್ಯಾನ ತರಬೇತಿ:

ಬರೀ ಭಗವದ್ಗೀತೆ ಸಾರ ಹೇಳಲು ಮಾತ್ರ ಸೀಮಿತವಾಗಿಲ್ಲ ಈ ಮ್ಯೂಸಿಯಂ, ಯೋಗ, ಧ್ಯಾನದ ತರಬೇತಿ ನೀಡುವ ಕೇಂದ್ರವೂ ಇದಾಗಲಿದೆ. ಬರೋಬ್ಬರಿ 1500 ಜನ ಏಕಕಾಲಕ್ಕೆ ಕುಳಿತು ತರಬೇತಿ ಪಡೆಯುವ ವ್ಯವಸ್ಥೆ ಇಲ್ಲಿದೆ. ಒಟ್ಟಾಗಿ ಕುಳಿತು ಸಾಮೂಹಿಕ ಧ್ಯಾನ ಮಾಡಲು ಧ್ಯಾನಮಂದಿರ ನಿರ್ಮಿಸಲಾಗಿದೆ. ದೇವಲೋಕ, ಧ್ಯಾನಲೋಕ ಎಂದು ವಿವಿಧ ವಿಭಾಗಗಳಿಗೆ ಹೆಸರಿಡಲಾಗಿದೆ.

ಒಟ್ಟಿನಲ್ಲಿ ಭಗವದ್ಗೀತೆ ಸಾರ ಹೇಳುವ ಭಗವದ್ಗೀತಾ ಜ್ಞಾನಲೋಕ ಹುಬ್ಬಳ್ಳಿಯಲ್ಲಿ ಆಧ್ಯಾತ್ಮಿಕ ಲೋಕವನ್ನು ಸೃಷ್ಟಿಸಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Latest Videos
Follow Us:
Download App:
  • android
  • ios