ಭಾರತ್ ಬಂದ್: ಕರ್ನಾಟಕ ರೈತ ಸಂಘಟನೆಗಳಿಗೆ ಸಿಎಂ ಮಹತ್ವದ ಮನವಿ
* ಸೆ.27ರಂದು ಭಾರತ್ ಬಂದ್
* ಕರ್ನಾಟಕದಲ್ಲೂ ಸಹ ರೈತ ಸಂಘಟನೆಗಳು ಬಂದ್‌ಗೆ ಬೆಂಬಲ
* ರೈತ ಸಂಘಟನೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ
ಬೆಳಗಾವಿ, (ಸೆ.26): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತಪರ ಸಂಘಟನೆಗಳು(Farmers Associations) ಮತ್ತೆ ಸಿಡಿದೆದ್ದಿದ್ದು, ನಾಳೆ ಅಂದರೆ ಸೆ.27ರಂದು ಭಾರತ್ ಬಂದ್‌ಗೆ(Bharat Bandh) ಕರೆ ನೀಡಿವೆ.
ಹೀಗಾಗಿ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯೆತೆಗಳಿವೆ. ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ, ಕರ್ನಾಟಕದಲ್ಲೂ ಸಹ ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಆ ಸಂಘಟನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಸೆ.27ಕ್ಕೆ ಭಾರತ್ ಬಂದ್ : ಯಾರ್ಯಾರ ಬೆಂಬಲ
ಈ ಬಗ್ಗೆ ಬೆಳಗಾವಿಯಲ್ಲಿ ಇಂದು (ಸೆ.26) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಯವಿಟ್ಟು ರೈತ ಸಂಘಟನೆಗಳು ಸಹಕಾರ ಮಾಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ನಾನು ಈಗಾಗಲೇ ಹೇಳಿದ್ದೇನೆ. ಈಗ ಕೋವಿಡ್ನಿಂದ ಎಲ್ಲರೂ ಹೊರಗೆ ಬಂದಿದ್ದಾರೆ. ಆರ್ಥಿಕ ಚಟುವಟಿಕೆಗಳು ಶುರುವಾಗಿವೆ. ಕೊರೋನಾ ಬಂದಾಗಿನಿಂದಾಗಿ ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗುತ್ತದೆ. ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ರೈತ ಸಂಘಟನೆಗಳು ಸಹಕಾರ ಮಾಡಬೇಕು. ಕೋವಿಡ್ನಿಂದ ಹೊರಬರಲು, ಆರ್ಥಿಕ ಸಂಕಷ್ಟದಿಂದ ಹೊರ ಬರಲು ಅನುವು ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.