Asianet Suvarna News Asianet Suvarna News

ನೇಕಾರರಿಗೆ 5,000 ರು. ನೀಡುವ ಯೋಜನೆಗಿಂದು ಸಿಎಂ ಚಾಲನೆ

ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್‌ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಮತ್ತು ಕಾರ್ಮಿಕರಿಗೆ 2022-23ನೇ ಸಾಲಿನ ನೇಕಾರ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವು. 

CM Basavaraj Bommai Drive to 5000 Financial Aid for Weavers Plan grg
Author
First Published Jan 11, 2023, 8:00 AM IST

ಬೆಂಗಳೂರು(ಜ.11):  ವಿದ್ಯುತ್‌ ಮಗ್ಗ ನೇಕಾರರಿಗೆ/ಕಾರ್ಮಿಕರಿಗೆ ನೇಕಾರ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವಿನ ನೇರ ನಗದು ವರ್ಗಾವಣೆಗೆ (ಡಿಬಿಟಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು(ಬುಧವಾರ) ಚಾಲನೆ ನೀಡಲಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್‌ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಮತ್ತು ಕಾರ್ಮಿಕರಿಗೆ 2022-23ನೇ ಸಾಲಿನ ನೇಕಾರ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. 

ಸಂಕ್ರಾಂತಿಗೆ ವಿದ್ಯುತ್‌ ಮಗ್ಗ ನೇಕಾರರಿಗೂ 5000 ರು.: ಸಿಎಂ ಬೊಮ್ಮಾಯಿ

ಐದು ಸಾವಿರ ರು. ವಾರ್ಷಿಕ ಆರ್ಥಿಕ ನೆರವನ್ನು ಡಿಬಿಟಿ ಮೂಲಕ ಒದಗಿಸಲಾಗುವುದು. ಗಣತಿಯಲ್ಲಿ ಈವರೆಗೆ ನೋಂದಾಯಿತರಾದ 1,02,980 ನೇಕಾರರು/ಕಾರ್ಮಿಕರು ತಲಾ ಐದು ಸಾವಿರ ರು. ನೆರವನ್ನು ಪಡೆಯಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಕಾರರಿಗೆ ಬಂಪರ್‌ ಕೊಡುಗೆ ಘೋಷಣೆ ಮಾಡಿದ್ದರು. ಹೀಗಾಗಿ ಆರ್ಥಿಕ ನೆರವು ಒದಗಿಸಲು ಚಾಲನೆ ನೀಡಲಿದ್ದಾರೆ.

Follow Us:
Download App:
  • android
  • ios