Asianet Suvarna News Asianet Suvarna News

Hanuman Birthplace: ಅಯೋಧ್ಯೆ, ರಾಮಮಂದಿರ ಬಳಿಕ ಅಂಜನಾದ್ರಿ ಅಭಿವೃದ್ಧಿ: ಸಿಎಂ ಬೊಮ್ಮಾಯಿ

*   ಬಜೆಟ್‌ ಕಲಾಪಕ್ಕೂ ಮೊದಲೇ ಕಾನೂನು
*  ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಎಂ ಘೋಷಣೆ
*  ದೇಗುಲಗಳಿಗೆ ಸ್ವಾಯತ್ತೆ ನೀಡಲು ಚಿಂತನೆ
 

CM Basavaraj Bommai Announced that Anjanadri Hill will be Develop grg
Author
Bengaluru, First Published Dec 30, 2021, 6:28 AM IST

ಹುಬ್ಬಳ್ಳಿ(ಡಿ.30): ಆಂಜನೇಯನ(Hanuman) ಜನ್ಮಸ್ಥಳ, ಕೊಪ್ಪಳ ಜಿಲ್ಲೆಯಲ್ಲಿನ ‘ಅಂಜನಾದ್ರಿ ಬೆಟ್ಟ’ವನ್ನು(Anjandri Hill) ಅಂತಾರಾಷ್ಟ್ರೀಯ ಮಟ್ಟದ ಸುಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದಾರೆ.

ಹುಬ್ಬಳ್ಳಿಯಲ್ಲಿ(Hubballi) ಬುಧವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಈ ಘೋಷಣೆ ಮಾಡಿದರು. ಹನುಮನ ಜನ್ಮಸ್ಥಳ(Hanuman Birthplace) ಅಂಜನಾದ್ರಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಅತ್ತ ಅಯೋಧ್ಯೆಯಲ್ಲಿ(Ayodhya) ಶ್ರೀರಾಮ ಮಂದಿರ(Ram Mandir) ಉದ್ಘಾಟನೆಯಾಗುತ್ತಿದ್ದಂತೆ, ಇತ್ತ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕೆಲಸಕ್ಕೆ ಪ್ರಧಾನಿ ಮೋದಿ(Narendra Modi) ಅವರಿಂದಲೇ ಚಾಲನೆ ಕೊಡಿಸುತ್ತೇವೆ. ಅಂಜನಾದ್ರಿ ಬೆಟ್ಟಯಾವ ರೀತಿ ಆಕಾಶದೆತ್ತರಕ್ಕೆ ಇದೆಯೋ, ಅದೇ ರೀತಿ ಅಲ್ಲಿನ ಅಭಿವೃದ್ಧಿಯನ್ನೂ ಆಕಾಶಕ್ಕೆ ನಿಲುಕುವಂತೆ ಮಾಡಿ ತೋರಿಸುತ್ತೇವೆ ಎಂದು ಕಾರ್ಯಕಾರಿಣಿಯಲ್ಲಿ ಬೊಮ್ಮಾಯಿ ಭರವಸೆ ನೀಡಿದರು.

ಗಂಗಾವತಿ: ಅಂಜನಾದ್ರಿ ದರ್ಶನವಾಗದೆ ನಿರಾಸೆಯಿಂದ ವಾಪಸಾಗಿದ್ದ ಪುನೀತ್

ದೇಗುಲಗಳಿಗೆ ಸ್ವಾಯತ್ತೆ ನೀಡಲು ಚಿಂತನೆ

ಗೋಹತ್ಯೆ ನಿಷೇಧ(Cow Slaughter), ಮತಾಂತರ ನಿಷೇಧ ಕಾಯ್ದೆ(Conversion Politics) ಬಳಿಕ ಇದೀಗ ಹಿಂದು ದೇಗುಲಗಳಿಗೆ ಸ್ವಾಯತ್ತೆ ನೀಡಲು ರಾಜ್ಯ ಬಿಜೆಪಿ ಸರ್ಕಾರ(BJP Government) ಮುಂದಾಗಿದೆ. ಹಿಂದು ದೇಗುಲಗಳನ್ನು(Hindu Temples) ಕಾನೂನು ಕಟ್ಟಳೆಗಳಿಂದ ಮುಕ್ತಗೊಳಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಬಜೆಟ್‌ ಅಧಿವೇಶನಕ್ಕೂ ಮೊದಲೇ ಕಾನೂನು ರೂಪಿಸುವುದಾಗಿಯೂ ತಿಳಿಸಿದೆ.

ಹುಬ್ಬಳ್ಳಿಯಲ್ಲಿ ಬುಧವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಚಾರ ತಿಳಿಸಿದರು.

ಇತರೆ ಸಮುದಾಯಗಳ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಿದರೆ ಹಿಂದು ದೇಗುಲಗಳಿಗೆ ಕಾನೂನು ಕಟ್ಟಳೆಗಳು ಸಾಕಷ್ಟಿವೆ. ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಗಳು ಸ್ವತಂತ್ರ ಹಾಗೂ ಸುರಕ್ಷಿತವಾಗಿವೆ. ಆದರೆ ಹಿಂದು ದೇಗುಲಗಳ ಪರಿಸ್ಥಿತಿ ಹಾಗಿಲ್ಲ. ಅವು ತಮ್ಮ ಆದಾಯದಲ್ಲೇ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದರೆ ಸರ್ಕಾರದ ಕಾನೂನು ಕಟ್ಟಳೆಗಳು ಅಡ್ಡಿಯಾಗುತ್ತಿವೆ. ಈ ಕಾನೂನು ಕಟ್ಟುಪಾಡುಗಳಿಂದ ಹಿಂದು ದೇವಾಲಯಗಳನ್ನು ಮುಕ್ತ ಮಾಡುತ್ತೇವೆ. ಈ ಬಜೆಟ್‌ ಅಧಿವೇಶನದೊಳಗೆ(Budget Session) ಕಾನೂನು ರೂಪಿಸುತ್ತೇವೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಕೆಲಸ ಶುರು ಮಾಡುತ್ತೇವೆ. ದೇವಾಲಯಗಳು ಸರ್ವ ಸ್ವತಂತ್ರವಾಗಿರಬೇಕು. ಅಭಿವೃದ್ಧಿ ಕೆಲಸ ಕೈಗೊಳ್ಳಲು ಯಾವುದೇ ಕಟ್ಟುಪಾಡು ಅಡ್ಡಿಯಾಗಬಾರದು. ಈ ಬಗ್ಗೆ ಹಲವು ಹಿರಿಯರು ನನ್ನೊಂದಿಗೆ ಮಾತನಾಡಿದ್ದಾರೆ. ಅವರ ಆಶಯದಂತೆ ಈ ಕೆಲಸ ಮಾಡಿ ತೋರಿಸುವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Karnataka Economy: ರಾಜ್ಯದ ಆರ್ಥಿಕತೆ 500 ಶತಕೋಟಿ ಡಾಲರ್‌ಗೆ ಏರಿಸಲು ಸಿಎಂ ಪ್ಲಾನ್‌

ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು

ರಾಮ ಜನ್ಮಭೂಮಿ (Ram Janma bhoomi ) ಅಯೋಧ್ಯೆಯಲ್ಲಿನ (Ayodhye) ವಿವಾದ ಇತ್ಯರ್ಥವಾಗಿ ಶ್ರೀರಾಮ ಮಂದಿರ (Shri Ramam mandir) ನಿರ್ಮಾಣ ಕಾರ್ಯ ಭರದಿಂದ ಸಾಗಿರುವ ಬೆನ್ನಲ್ಲೇ ಶ್ರೀರಾಮನ ಭಕ್ತ ಆಂಜನೇಯ ಜನ್ಮಸ್ಥಳ ಅಂಜನಾದ್ರಿಯ (Anjandri) ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಈ ನಡುವೆ ಅಂಜನಾದ್ರಿಯ ಕಿಷ್ಕಿಂಧೆಯಿಂದ ಅಯೋಧ್ಯೆಗೆ ನೇರ ರೈಲು ಕಲ್ಪಿಸುವ ಮೂಲಕ ಶ್ರೀರಾಮ ಮತ್ತು ಹನುಮಂತನ ಭಕ್ತರ ಅನುಕೂಲಕ್ಕೆ ದಾರಿ ಮಾಡಿಕೊಡಬೇಕು ಎಂದು ಸಂಸದರು ಪತ್ರದಲ್ಲಿ ಕೋರಿಕೊಂಡಿದ್ದು ರೈಲ್ವೆ ಇಲಾಖೆಯಿಂದ ಇದೀಗ ಸಕಾರಾತ್ಮಕ ಸ್ಪಂದನೆ ದೊರಕಿದೆ.

ಡಿ.7ರಂದೇ ನೈಋುತ್ಯ ರೈಲ್ವೆ (train) ವಲಯ ಪ್ರಧಾನ ವ್ಯವಸ್ಥಾಪಕರು ಇದರ ಅಗತ್ಯತೆ ಮನವರಿಕೆ ಮಾಡಿಕೊಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಇಲ್ಲಿ ಹೊಸ ರೈಲು ಮಾರ್ಗವಾಗಿದ್ದರೆ ಸಮಸ್ಯೆಯಾಗುತ್ತಿತ್ತು. ಆದರೆ ಈಗಾಗಲೇ ಇರುವ ಮಾರ್ಗದಲ್ಲಿಯೇ ನೇರವಾಗಿ ಕೇವಲ ರೈಲು ಪ್ರಾರಂಭವಾಗಬೇಕಾಗಿರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೇ ಹೇಳಲಾಗುತ್ತದೆ. ಇದರಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
 

Follow Us:
Download App:
  • android
  • ios