Asianet Suvarna News Asianet Suvarna News

ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆಗೆ ಚಾಲನೆ ಬಳ್ಳಾರಿ ಜಿಂದಾಲ್ ಏರ್ಪೋರ್ಟ್ ನಿಂದ ಹೊರಟ ವಿಮಾನ

ಮೋಡ ಬಿತ್ತನೆ ಮಾಡಲು ಜಿಂದಾಲ್ ಎರ್ಪೋನಿಂದ ಹೊರಟ ಬಿತ್ತನೆ ವಿಮಾನ. ಇಂದಿನಿಂದ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ..
 

Cloud seeding operation across Raichur district from today rav
Author
First Published Nov 5, 2023, 4:14 PM IST

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ರಾಯಚೂರು (ನ.5): ಒಂದು ಕಡೆ ತೀವ್ರ ಬರಗಾಲ ಮತ್ತೊಂದು ಕಡೆ ರಾಜ್ಯದ ಬಹುತೇಕ ಜಲಾಶಯಗಳು ಖಾಲಿಯಾಗುತ್ತಿವೆ. ಈ ಮಧ್ಯೆ ತಮ್ಮ ತಮ್ಮ ಜಿಲ್ಲೆ ರೈತರ ರಕ್ಷಣೆಗಿಳಿದ ಜನಪ್ರತಿನಿಧಿಗಳು ಮೋಡ ಬಿತ್ತನೆಗೆ ಮುಂದಾಗುತ್ತಿದ್ಧಾರೆ. ಸದ್ಯ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಬರಗಾಲದಿಂದ ತತ್ತರಿಸಿದ್ದು, ಸಚಿವ ಎನ್‌ಎಸ್ ಬೋಸರಾಜ್ ಅವರ ಫೌಂಡೇಷನ್ ವತಿಯಿಂದ ಇದೀಗ ರಾಯಚೂರಿನಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡುತ್ತಿದೆ.

ಮೋಡ ಬಿತ್ತನೆ ಮಾಡಲು ಬಳ್ಳಾರಿಯಿಂದ ಹೊರಟ ವಿಮಾನ

ಕಲ್ಯಾಣ ಕರ್ನಾಕಟದ ಏಳು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಿಲ್ಲದೇ ತತ್ತರಿಸಿರೋ ಅನ್ನದಾತರು. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮೋಡ ಬಿತ್ತನೆ ಮಾಡಲಾಗುತ್ತಿದ. ಭತ್ತ, ಮೆಣಸಿನಕಾಯಿ, ಹತ್ತಿ ಸೇರಿದಂತೆ ಬಹುತೇಕ ಬೆಳೆಗಳು ಒಂದು ಹಂತದವರೆಗೂ ಬೆಳೆದು ನಿಂತಿವೆ. ಈ ಬೆಳೆಗೆ ಇದೀಗ ಡಿಸೆಂಬರ್ ಅಂತ್ಯದವರೆಗೂ ನೀರು ಬೇಕು. ಹೀಗಾಗಿ ಅನ್ನದಾತ ಬೆಳೆಯನ್ನು ಉಳಿಸಿಕೊಳ್ಳಲು  ಹರಸಹಾಸ ಪಡುತ್ತಿದ್ದಾನೆ. ಒಂದು ಕಡೆ ಟ್ಯಾಂಕರ್ ನೀರು ಹಾಕಿದ್ರೇ, ಮತ್ತೊಂದು ಕಡೆ ಕಾಲುವೆ ನೀರು ಬರುತ್ತಿಲ್ಲವೆಂದು ಅನ್ನದಾತ ಪರದಾಡುತ್ತಿದ್ದಾರೆ. ಈ ಮಧ್ಯೆ ಆಕ್ಟೋಬರ್ ನವೆಂಬರ್ ನಲ್ಲಿ ಬರಬಹುದಾದ ಹಿಂಗಾರು ಮಳೆ ಕೂಡ ಬಹುತೇಕ ಕೈಕೊಡುವ ಲಕ್ಷಣ ಕಾಣುಗುತ್ತಿದೆ. ಹೀಗಾಗಿ ರಾಯಚೂರಿನ ಬೋಸರಾಜ್ ಫೌಂಡೇಷನ್ ವತಿಯಿಂದ ಶಾಸಕ ಕೋಳಿವಾಡ ಅವರ ಪಿಕೆಕೆ ಸಂಸ್ಥೆಯ ಸಹಕಾರದೊಂದಿಗೆ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. 

ಇಂದು ರಾಯಚೂರು ಜಿಲ್ಲೆಯಲ್ಲಿ ಮೋಡ ಬಿತ್ತನೆ

ಬಳ್ಳಾರಿ ಜಿಂದಾಲ್ ವಿಮಾನದಿಂದ ಹೊರಡುವ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡುತ್ತಿದೆ ಎಂದು ಸಚಿವ ಬೋಸರಾಜ್ ಮಗ ರವಿ ಬೋಸರಾಜ್ ಹೇಳುತ್ತಿದ್ದಾರೆ.

ಇನ್ನು ಈಗಾಗಲೇ ಹಾವೇರಿ ಬೆಳಗಾವಿಯಲ್ಲಿ ಮೋಡ ಬಿತ್ತನೆ ಮಾಡಿದ್ದು, ಬಹುತೇಕ ಯಶಸ್ವಿಯಾಗಿದೆ. ಹೀಗಾಗಿ ಇದೀಗ ರಾಯಚೂರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇವೆ ಇಲ್ಲಿಯೂ ಯಶಸ್ವಿಯಾಗುತ್ತದೆ ಎನ್ನುತ್ತಾರೆ ಶಾಸಕ ಪ್ರಕಾಶ ಕೋಳಿವಾಡ. ಮೋಡ ಬಿತ್ತನೆಯಿಂದ ಮಳೆಯಾಗುವ ಸಾದ್ಯೆತೆ ಇದೆಯೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಹೀಗಾಗಿ ರಾಯಚೂರು ರೈತರ ಹಿತಕ್ಕಾಗಿ ಇದೀಗ ಮೋಡ ಬಿತ್ತೆನೆ ಮಾಡಲಾಗುತ್ತಿದೆ. ಇನ್ನೂ ಮೋಡ ಬಿತ್ತನೆಗಾಗಿ ಪ್ರತ್ಯೇಕವಾದ ಟೆಕ್ನಿಕಲ್  ತಂಡವೊಂದು ಬಂದಿದೆ. ಕಳೆದೊಂದುವರೆ ತಿಂಗಳಿಂದ ವಾತವರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಆಕಾಶದಲ್ಲಿರೋ ಮೋಡಗಳ ಜೊತೆ ಕೃತಕ ಮೋಡ ಬಿತ್ತನೆ ಮಾಡೋ ಮೂಲಕ ಮಳೆ ಬರುವಂತೆ ಮಾಡುತ್ತಾರಂತೆ.

ಮೋಡ ಬಿತ್ತನೆ ಕನಸು ಈಡೇರಿಕೆ: ಸಚಿವ ಸತೀಶ ಜಾರಕಿಹೊಳಿ ಹರ್ಷ

ಮೋಡ ಬಿತ್ತನೆ ಬಳಿಕವಾದ್ರೂ ಮಳೆ ಬರುತ್ತದೆಯೇ..?

ತುಂಗಭದ್ರಾ ಜಲಾಶಯ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಹೀಗಾಗಿ ಬಳ್ಳಾರಿ, ವಿಜಯನಗರ ಕೊಪ್ಪಳವಷ್ಟೇ ಅಲ್ಲದೇ ಕೆಳ ಭಾಗದಲ್ಲಿರೋ ರಾಯಚೂರಿಗೂ ಕಾಲೂವೆಗಳ ಮೂಲಕ ನಿರೀಕ್ಷಿತ ಮಟ್ಟದಲ್ಲಿ ನೀರು ತಲುಪುತ್ತಿಲ್ಲ. ಹೀಗಾಗಿ ಅನ್ನದಾತ ಹರಸಾಹಸ ಪಡುತ್ತಿದ್ದಾರೆ. ಇದೀಗ ಮೋಡ ಬಿತ್ತೆನಯಿಂದಾದ್ರೂ ಮಳೆಯಾಗುತ್ತದೆಯೇ ಕಾದು ನೋಡಬೇಕಿದೆ.

Follow Us:
Download App:
  • android
  • ios