Asianet Suvarna News Asianet Suvarna News

ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ; ಪರಸ್ಪರ ಬಡಿದಾಡಿಕೊಂಡ ಎರಡು ಗುಂಪುಗಳು!

ಸಂವಿಧಾನ ಜಾಗೃತ ಜಾಥಾ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಪರಸ್ಪರ ಬಡಿದಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಳಚಾಪೂರ ಗ್ರಾಮದಲ್ಲಿ ನಡೆದಿದೆ.

Clash between two groups at Constitution Jatha event at Bidar Complaint filed rav
Author
First Published Feb 11, 2024, 1:49 PM IST

ಬೀದರ್ (ಫೆ.11): ಸಂವಿಧಾನ ಜಾಗೃತ ಜಾಥಾ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಪರಸ್ಪರ ಬಡಿದಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಳಚಾಪೂರ ಗ್ರಾಮದಲ್ಲಿ ನಡೆದಿದೆ.

ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ರಾಮ ಮಂದಿರ ಬನಾಯೆಂಗೆ ಹಾಡು ಹಾಕಿ ಎಂದು ಗ್ರಾಮದ ಕೆಲ ಕಿಡಿಗೇಡಿಗಳು ಗುಂಪು ಒತ್ತಾಯಿಸಿದೆ. ಇದು ಸಂವಿಧಾನ ಜಾಗೃತ ಜಾಥಾ ಕಾರ್ಯಕ್ರಮವಾಗಿದ್ದು, ಇಲ್ಲಿ ಬೇರೆ ಹಾಡು ಹಾಕುವುದಿಲ್ಲ ಎಂದು ನಿರಾಕರಿಸಿರುವ ಇನ್ನೊಂದು ಗುಂಪು. ಹಾಡು ಹಾಕದಿದ್ದಕ್ಕೆ ಮೊತ್ತೊಂದು ಜಾತಿಯ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಸರಿ ಶಾಲು ಹಾಕಿದ ಯುವಕರು ಜೈಶ್ರೀರಾಮ್ ಘೋಷಣೆ ಕೂಗಿದರೆಂದು ಆರೋಪಿಸಲಾಗಿದೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ.

ರಾಜ್ಯ ಸರ್ಕಾರಕ್ಕೆ ಕೇಂದ್ರ ಅನ್ಯಾಯ ಮಾಡ್ತಿದೆ ಎಂಬುದು ಎಷ್ಟು ನಿಜ? ಕಾರಣ ಬಿಚ್ಚಿಟ್ಟಿದ್ದಾರೆ ಸಂಸದ ಎ ನಾರಾಯಣಸ್ವಾಮಿ!

ಪ್ರಕರಣ ಸಂಬಂಧ ಷಣ್ಮುಖ ಎಂಬುವವರು ಧನ್ನೂರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು. ಸಂವಿಧಾನ ಜಾಥಾಗೆ ಅಡ್ಡಿಪಡಿಸಿದ್ದಾರೆನ್ನಲಾದ ವಿಶಾಲ್, ವಿಷ್ಣು, ಚಿದಾನಂದ, ಪ್ರವೀಣ್, ಶ್ರೀಕಾಂತ್, ಪರಮೇಶ್ವ ಸೇರಿದಂತೆ ಒಟ್ಟು 11 ಜನರ ಮೇಲೆ ಎಫ್ಐಆರ್‌ ದಾಖಲಾಗಿದೆ. 11 ಜನರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ 9 ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಧಾರವಾಡ: ಸತತ 18 ವರ್ಷಗಳ ದಣಿವರಿಯದೆ ಸಂಶೋಧನೆ; 89ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ವೃದ್ಧ!

Follow Us:
Download App:
  • android
  • ios