Asianet Suvarna News Asianet Suvarna News

ನಮ್ಮಂಥವರಿಗೆ ಬುದ್ಧಿ ಹೇಳುವ ನೀವೇ ಹೀಗಾದ್ರೆ ಹೇಗೆ? ವಿಚಾರಾಣಾಧೀನ ಖೈದಿಗಳ ಪ್ರಶ್ನೆಗೆ ಶ್ರೀಗಳ ಉತ್ತರವಿದು

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಶರಣರು ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಶ್ರೀಗಳಿಗೆ ಇತರೆ ಖೈದಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದು, ಅದಕ್ಕೆ ಸ್ವಾಮೀಜಿ ಉತ್ತರಿಸಿದ್ದು ಹೀಗೆ...

Chitradurga Murugha Sharana Answer To Prisoners Questions In Jail rbj
Author
First Published Sep 6, 2022, 1:14 PM IST

ಚಿತ್ರದುರ್ಗ, (ಸೆಪ್ಟೆಂಬರ್.06):  ಬಾಲಕಿಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿಲಾಗಿದೆ. 

ಚಿತ್ರದುರ್ಗ ನ್ಯಾಯಾಲಯ ಶ್ರೀಗಳಿಗೆ 9 ದಿನಗಳ ವೆರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀಗಳನ್ನು ಹಳೇ ಬೆಂಗಳೂರು ರಸ್ತೆಯಲ್ಲಿರುವ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದು, ಅವರಿಗೆ ಜೈಲಾಧಿಕಾರಿಗಳು ವಿಚಾರಣಾಧೀನ ಖೈದಿ  ನಂಬರ್ 2261 ನೀಡಿದ್ದಾರೆ. 

ಜೈಲಿನಲ್ಲಿ ಶ್ರೀಗಳಿಗೆ ಸಹ ಖೈದಿಗಳ ಪ್ರಶ್ನೆ
ಜೈಲಿನಲ್ಲಿ ಶ್ರೀಗಳಿಗೆ ಯಾವುದೇ ವಿಐಪಿ ಸೌಲಭ್ಯ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರು ಸಾಮಾನ್ಯ ವಿಚಾರಣಾಧೀನ ಖೈದಿಗಳ ಜೊತೆಯಲ್ಲಿದ್ದಾರೆ. ಈ ವೇಳೆ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಗಳು ಶ್ರೀಗಳಿಗೆ ಕೆಲ ಪ್ರಶ್ನೆಗಳು ಕೇಳಿದ್ದಾರೆ.

POCSO Case ಚಿತ್ರದುರ್ಗ ಮುರುಘಾ ಶ್ರೀಗಳಿಗೆ ಶಾಕ್ ಕೊಟ್ಟ ಕೋರ್ಟ್, ಶರಣರಿಗೆ ಜೈಲೇ ಗತಿ..!

ನಮ್ಮಂಥವರಿಗೆ ಬುದ್ಧಿ ಹೇಳುವ ನೀವೇ ಹೀಗಾದ್ರೆ ಹೇಗೆ ಸ್ವಾಮಿ‌? ಇದೇ ಕಾರಾಗೃಹಕ್ಕೆ ಬಂದು ಮನಪರಿವರ್ತನೆ ಶಿಬಿರ ನಡೆಸಿದ್ದೀರಿ. ಈಗ ನೀವೇ ಶಿಕ್ಷೆ ಅನುಭವಿಸುವಂತ ಸ್ಥಿತಿ ಬಂತು ಎಂದು ಖೈದಿಗಳು ಪ್ರಶ್ನಿಸಿದ್ದಾರೆ.

ಇದಕ್ಕೆ ಶ್ರೀಗಳು ಪ್ರತಿಕ್ರಿಯಿಸಿ, ನನ್ನನ್ನು ಜೈಲಿಗೆ ಕಳುಹಿಸುವ ದೊಡ್ಡ ಷಡ್ಯಂತ್ರ ನಡೆದಿದೆ.ನಾನು ಬಲಿಪಶು ಆಗಿದ್ದೇನೆ ಎಂದು ಉತ್ತರಿಸಿದ್ದಾರಂತೆ. ಇಷ್ಟು ಹೇಳಿ ಬಳಿ ಯಾರ ಪ್ರಶ್ನೆಗೂ ಹೆಚ್ಚು ಪ್ರತಿಕ್ರಿಯಿಸದೆ ಮುರುಘಾ ಶ್ರೀಗಳು ಮೌನಕ್ಕೆ ಜಾರಿದ್ದಾರಂತೆ.

ಚಿತ್ರದುರ್ಗದಲ್ಲಿರುವ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ಕರ್ನಾಟಕದ ಸಾಮಾಜಿಕ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಜನಪ್ರಿಯ ಶ್ರದ್ಧಾಕೇಂದ್ರ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಠಕ್ಕೆ ಭಕ್ತರಿದ್ದಾರೆ. ಲಿಂಗಾಯತ ಪರಂಪರೆಯ ಮಠವಾದರೂ ವಿವಿಧ ಜಾತಿ ಮತ್ತು ಧರ್ಮಗಳಲ್ಲಿಯೂ ಪ್ರಭಾವ ಹೊಂದಿದೆ. ಸಮಾಜ ಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹುಕಾಲದಿಂದ ಸಕ್ರಿಯವಾಗಿದೆ. ಮುರುಘಾ ಶ್ರೀಗಳು ಸಾಮಾಜಿ ಕ್ಷೇತ್ರದಲ್ಲಿ ಅರಿವು ಮೂಡಿಸುವಂತ ಕಾರ್ಯಕ್ರಮ, ಅಭಿಯಾನಗಳನ್ನು ನಡೆಸಿಕೊಟ್ಟಿದ್ದಾರೆ. ಆದ್ರೆ, ಇದೀಗ ಬುದ್ಧಿವಾದ ಮಾತುಗಳನ್ನ ಹೇಳುತ್ತಿದ್ದ ಸ್ವಾಮೀಜಿಗಳೇ ಜೈಲು ಸೇರಿರುವುದು ದುರಂತ.

Murugha Shri: ಮುರುಘಾ ಶ್ರೀ ವಿಚಾರಣಾಧೀನ ಖೈದಿ ನಂಬರ್ 2261

ಏನಿದು ಪ್ರಕರಣ?: ಮುರುಘಾಮಠದ ಆವರಣದಲ್ಲಿದ್ದ ಅಕ್ಕಮಹಾದೇವಿ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ಮೇಲೆ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಒಡನಾಡಿ ಸಂಸ್ಥೆಯ ನೆರವಿನಿಂದ ಮೈಸೂರಿನ ನಜರ್‌ಬಾದ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಶ್ರೀಗಳು, ಅಕ್ಕಮಹಾದೇವಿ ಹಾಸ್ಟೆಲ್‌ನ ವಾರ್ಡನ್‌, ಕಿರಿಯ ಶ್ರೀಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೃತ್ಯ ನಡೆದ ಸ್ಥಳ, ಆರೋಪಿಗಳು ಮತ್ತು ಬಾಲಕಿಯರು ಚಿತ್ರದುರ್ಗ ಜಿಲ್ಲೆಗೆ ಸೇರಿದವರಾಗಿದ್ದರಿಂದ ಈ ಪ್ರಕರಣವನ್ನು ಚಿತ್ರದುರ್ಗ ಜಿಲ್ಲೆಗೆ ವರ್ಗಾಯಿಸಲಾಗಿತ್ತು.

Follow Us:
Download App:
  • android
  • ios