Asianet Suvarna News Asianet Suvarna News

ಮರುಘಾ ಶ್ರೀಗಳು ನಾಪತ್ತೆಯಾಗಿಲ್ಲ, ಬಂಧನವೂ ಆಗಿಲ್ಲ: ಮಠ

ಲೈಂಗಿಂಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಗಳು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಮಠದ ಸಿಬ್ಬಂದಿ, ಸ್ವಾಮೀಜಿ ಎಲ್ಲಿಗೂ ಹೋಗಿಲ್ಲ. ಧಾರವಾಡಕ್ಕೆ ಹೋಗಿದ್ದು, ಮಠಕ್ಕೆ ವಾಪಸ್‌ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
 

chitradurga murugha mutt seer Not Arrested will apply Bail by Afternoon says lawyer san
Author
First Published Aug 29, 2022, 12:40 PM IST

ಚಿತ್ರದುರ್ಗ (ಆ. 29): ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮುರುಘಾ ಮಠದ ಶ್ರೀಗಳು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಮಠದ ಸಿಬ್ಬಂದಿ, ಸ್ವಾಮೀಜಿ ಎಲ್ಲಿಯೂ ಹೋಗಿಲ್ಲ. ಅವರು ಧಾರವಾಡಕ್ಕೆ ವಕೀಲರನ್ನು ಭೇಟಿಯಾಗಲು ತೆರಳಿದ್ದರು. ಧಾರವಾಡದಿಂದ ಅವರು ಮಠಕ್ಕೆ ವಾಪಸಾಗುತ್ತಿದ್ದಾರೆ ಎಂದು ಮಠದ ಭಕ್ತ ಆನಂದಪ್ಪ ತಿಳಿಸಿದ್ದಾರೆ. ಸ್ವಾಮೀಜಿ ಅವರ ಬಂಧನವೂ ಆಗಿಲ್ಲ. ಅವರು ಎಲ್ಲಿಯೂ ನಾಪತ್ತೆಯೂ ಆಗಿಲ್ಲ ಎಂದು ಈ ವೇಳೆ ಹೇಳಿದ್ದಾರೆ.  ಧಾರವಾಡಕ್ಕೆ ಅವರು ತೆರಳಿದ್ದ ವೇಳೆ ಅವರ ಭದ್ರತೆಗಾಗಿ ಅವರ ಹಿಂದೆ ಪೊಲೀಸ್‌ ಬಂದಿದ್ದಾರೆ. ಟೋಲ್‌ನಲ್ಲಿ ಅವರ ಕಾರು ನಿಂತಿದ್ದಾಗ, ಅವರ ಹಿಂದೆ ಪೊಲೀಸ್‌ ವಾಹನ ನಿಂತಿತ್ತು. ಮಾಧ್ಯಮಗಳಲ್ಲಿ ವರದಿ ಆಗಿರುವಂತೆ, ಸ್ವಾಮೀಜಿ ಅವರ ಬಂಧನವಾಗಿಲ್ಲ. ಅವರು ಅಜ್ಞಾತ ಸ್ಥಳಕ್ಕೆ ಹೋಗುವ ಪ್ರಯತ್ನವೂ ಮಾಡುತ್ತಿಲ್ಲ.

ಇಂದು ಮಧ್ಯಾಹ್ನದ ವೇಳೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿರುವುದಾಗಿ ವಕೀಲರು ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಕೆಲ ಮಾಧ್ಯಮಗಳಲ್ಲಿ ಬಂಧನ ಭೀತಿ ಹಿನ್ನಲೆಯಲ್ಲಿ ಮುರಘಾ ಮಠದ ಶ್ರೀಗಳು ನಿರೀಕ್ಷಣಾ ಜಾಮೀನು ಸಿಗುವವರೆಗೆ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದನ್ನು ಮಠ ಸಂಪೂರ್ಣವಾಗಿ ನಿರಾಕರಿಸಿದೆ.ಇದಕ್ಕೂ ಮುನ್ನ ಕೆಲ ಮಾಧ್ಯಮಗಳಲ್ಲಿ ಬಂಧನ ಭೀತಿ ಹಿನ್ನಲೆಯಲ್ಲಿ ಮುರಘಾ ಮಠದ ಶ್ರೀಗಳು ನಿರೀಕ್ಷಣಾ ಜಾಮೀನು ಸಿಗುವವರೆಗೆ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದನ್ನು ಮಠ ಸಂಪೂರ್ಣವಾಗಿ ನಿರಾಕರಿಸಿದೆ.

ಬಂಧನ ವದಂತಿ:  ಹಾವೇರಿ ಬಳಿಯ ಬಂಕಾಪುರ ಬಳಿಯ ಹೆದ್ದಾರಿಯಲ್ಲಿ ಶ್ರೀಗಳ ಬಂಧನವಾಗಿದೆ ಎಂದು ಬೆಳಗ್ಗೆ ವರದಿಯಾಗಿತ್ತು. ನಿರಂತರವಾಗಿ ಶ್ರೀಗಳ ಫೋನ್ಅನ್ನು ಪೊಲೀಸರು ಟ್ರೇಸ್‌ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಚಿತ್ರದುರ್ಗದಿಂದ ಮಹಾರಾಷ್ಟ್ರ ಅಥವಾ ಗೋವಾ  (Goa) ರಾಜ್ಯಕ್ಕೆ ತೆರಳಲು ಮುರುಘಾ ಶ್ರೀಗಳು ಪ್ರಯತ್ನ ಮಾಡುತ್ತಿದ್ದರು. ಮುರುಘಾ ಶ್ರೀಗಳೊಂದಿಗೆ ಅವರ ಕಾರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಮುರುಘಾ ಶರಣರ ಕಾರಿನ ಸಮೇತ ಅವರನ್ನು ಚಿತ್ರದುರ್ಗಕ್ಕೆ ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಪ್ರಕಟವಾಗಿತ್ತು. ಬಂಧನದ ವೇಳೆ ಶ್ರೀಗಳು ಖಾವಿ ಧರಿಸಿರಲಿಲ್ಲ.

ಬೇರೆ ಬಟ್ಟೆ ತೊಟ್ಟಿದ್ದರು ಎನ್ನುವ ಮಾಹಿತಿಯೂ ಬಂದಿತ್ತು. ಅವರನ್ನು ಬಂಧಿಸಲು ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಪೊಲೀಸರು ಕಾದು ಕುಳಿತಿದ್ದರು ಎನ್ನಲಾಗಿತ್ತು. ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ 4ರಲ್ಲಿರುವ ಟೋಲ್ ಗೇಟ್ ಇದಾಗಿದ್ದು, ಪ್ರತಿ ವಾಹನವನ್ನೂ ಅವರು ಪರಿಶೀಲನೆ ಮಾಡುತ್ತಿದ್ದರು. ಟೋಲ್‌ಗೇಟ್ ಬಳಿ 50ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು ಎಂದು ವರದಿಯಾಗಿತ್ತು. ಆದರೆ, ಮುರುಘಾ ಶರಣರು ಬೆಳಗಾವಿ ಜಿಲ್ಲೆ ಪ್ರವೇಶ ಮಾಡುವರ ಬಗ್ಗೆ ಪೊಲೀಸರು ಖಚಿತಪಡಿಸಲು ನಿರಾಕರಿಸಿದ್ದರು.

ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಮುರುಘಾ ಮಠಕ್ಕೆ ಭಕ್ತರ ದಾಂಗುಡಿ: ಇನ್ನು ಮುರುಘಾ ಮಠದ (murugha mutt) ಶ್ರೀಗಳ ಬಂಧನವಾಗಿದೆ ಎನ್ನುವ ಸುಳ್ಳು ಸುದ್ದಿ ಹಬ್ಬುತ್ತಿದ್ದಂತೆ, ಮಠಕ್ಕೆ ಭಕ್ತರು ಆಗಮಿಸಲು ಆರಂಭಿಸಿದ್ದರು. ಆದರೆ, ಮಠ ಇದನ್ನು ನಿರಾಕರಿಸಿತ್ತು. ಅವರು ವಕೀಲರನ್ನು ಭೇಟಿಯಾಗಲು ಧಾರವಾಡಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿ ಕಳಿಸಿದ್ದಾರೆ. ಈ ನಡುವೆ ಮಠದ ರಾಜಾಂಗಣದಲ್ಲಿ ಭಕ್ತರ ಸಭೆ ನಡೆಸಲಾಗುತ್ತಿದ್ದು, ಶಿವಮೂರ್ತಿ ಮುರುಘಾ ಶರಣರ (Shivamurthy Sharanaru) ನಿರೀಕ್ಷೆಯಲ್ಲಿ ಭಕ್ತರಿದ್ದಾರೆ.

ಮುರುಘಾ ಮಠ ಶ್ರೀ ಪೋಕ್ಸೋ ಕೇಸ್, ಭಾನುವಾರ ಏನೆಲ್ಲಾ ಬೆಳವಣಿಗೆಗಳು ನಡೆದವು, ಇಲ್ಲಿದೆ ಮಾಹಿತಿ

ಮುರುಘಾ ಶರಣರ ಮೇಲಿನ ಆರೋಪವೇನು: ಹಣ್ಣುಹಂಪಲು ನೀಡುವ ನೆಪದಲ್ಲಿ ಬಾಲಕಿಯರನ್ನು ಮುರುಘಾ ಶರಣರ ಕೋಣೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿ, ಶರಣರು, ಬಾಲಕಿಯರು ಇದೆಲ್ಲಾ ತಮಗೆ ಇಷ್ಟವಿಲ್ಲ ಎಂದು ಹೇಳಿದರೂ ಅವರ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದರು. ಅದಾದ ನಂತರ ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಸ್ನಾದ ಕೋಣೆಗೆ ಹೋಗಿ ಸ್ನಾನ ಮಾಡುವಂತೆ ವಿದ್ಯಾರ್ಥಿನಿಯರಿಗೆ ಮುರುಘಾ ಶ್ರೀಗಳು ಹೇಳುತ್ತಿದ್ದರು ಎಂದು ದೂರಲಾಗಿದೆ. ಪ್ರತಿದಿನವೂ ಒಂದು ಬಾಲಕಿಯನ್ನು ಆಪ್ತ ಸಹಾಯಕರು ಮುರುಘಾ ಶರಣರ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು. ಹಲವಾರು ಬಾರಿ ಈ ರೀತಿ ಆಗಿದ್ದರಿಂದ ಅರ ವಿಡಿಯೋಗಳನ್ನು ಕೂಡ ಮಾಡಲಾಗಿದೆ ಎಂದು ಹೇಳಲಾಗಿದೆ. ಶ್ರೀಗಳ ವಿರುದ್ಧ ಪೋಕ್ಸೋ (Pocso) ಪ್ರಕರಣವನ್ನು ದಾಖಲಿಸಲಾಗಿದೆ.

Follow Us:
Download App:
  • android
  • ios