ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಬಳಸಿಕೊಂಡ ಕಿರಾತಕ!
ಅಮೆರಿಕಾದಲ್ಲಿ ಇರುವ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ, ಕೋಟಿಗಟ್ಟಲೇ ವಂಚನೆ ಮಾಡಿದ್ದಲ್ಲದೇ, ಕಳೆದ ನಾಲ್ಕು ವರ್ಷಗಳಿಂದ ಯುವತಿಗೆ ಪ್ರೀತಿಸಿ ಯುವಕನೋರ್ವ ಮೋಸ ಮಾಡಿರೋ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ (ನ.3): ಅಮೆರಿಕಾದಲ್ಲಿ ಇರುವ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ, ಕೋಟಿಗಟ್ಟಲೇ ವಂಚನೆ ಮಾಡಿದ್ದಲ್ಲದೇ, ಕಳೆದ ನಾಲ್ಕು ವರ್ಷಗಳಿಂದ ಯುವತಿಗೆ ಪ್ರೀತಿಸಿ ಯುವಕನೋರ್ವ ಮೋಸ ಮಾಡಿರೋ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಹೀಗೆ ಯುವಕನಿಂದ ಮೋಸ ಹೋಗಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿರುವ ಯುವತಿ ಪಲ್ಲವಿ, ಚಿತ್ರದುರ್ಗ ಮೂಲದವರು. 2019 ರಲ್ಲಿ ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ಸೌರಭ್ ಗೆ ಪರಿಚಯವಾಗಿ, ಇಬ್ಬರೂ ಪರಸ್ಪರ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಆರೋಪಿ ಸೌರಭ್, ನಿನಗೆ ಅಮೆರಿಕಾ ಮತ್ತಿತ್ತರ ವಿದೇಶಗಳಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಕೊಡಿಸ್ತೀನಿ ಎಂದು ಯುವತಿಗೆ ಕೋಟಿಗಟ್ಟಲೇ ವಂಚನೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಸಾಕಷ್ಟು ಬಾರಿ ಆಕೆಯನ್ನು ಹೊರ ದೇಶಕ್ಕೆ ಹೋಗಬೇಕು ರೆಡಿ ಇರು ಎಂದು ಹೇಳಿ, ಬೇರೊಂದು ಕಡೆ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವನ್ನು ಎಸಗಿದ್ದಾನೆ. ಅಲ್ಲದೇ ನನ್ನನ್ನು ಅವನಿಗೆ ಬೇಕಾದ ರೀತಿ ಬಳಸಿಕೊಂಡು ಇಂದು ಬೀದಿಯಲ್ಲಿ ಬಿಟ್ಟಿದ್ದಾನೆ. ನನ್ನ ಕುಟುಂಬ ಕಷ್ಟ ಪಟ್ಟು ಅವನಿಗೆ ಹಣ ಹೊಂದಿಸಿ ಕೊಟ್ಟಿದ್ದೀವಿ, ಆದರೂ ಕರುಣೆ ಇಲ್ಲದೇ, ನನಗೂ ಮದುವೆ ಆಗುವುದಾಗಿ ಮೋಸ ಮಾಡಿದ್ದಾನೆ. ಅಲ್ಲದೇ, ನಿನಗೆ ಬೇರೆ ದೇಶದ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಕೊಡಿಸ್ತೀನಿ ಎಂದು ಎರಡೂವರೆ ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾನ. ತೆಗೆದುಕೊಂಡಿರುವ ಕೋಟಿಗಟ್ಟಲೇ ಹಣವನ್ನು ಕೊಡು ಎಂದು ಬೇಡಿದರೂ ದಿನೇ ದಿನೇ ನಮಗೆ ಕೊಲೆ ಬೆದರಿಕೆ ಹಾಕ್ತಿದ್ದಾನೆ. ನಮಗೆ ಪೊಲೀಸರೇ ನ್ಯಾಯ ಕೊಡಿಸಿ ಎಂದು ಮೋಸ ಹೋಗಿರೋ ಯುವತಿ ಕಣ್ಣೀರು ಹಾಕಿದರು.
ತುಲಾಭಾರದ ವೇಳೆ ಕುಸಿದು ಬಿದ್ದ ತಕ್ಕಡಿ, ಪೇಜಾವರ ಶ್ರೀಗಳಿಗೆ ಗಾಯ!
ಇನ್ನೂ ಜಾಬ್ ಫ್ರಾಡ್ ಗೆ ಸಂಬಂಧಿಸಿದಂತೆ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ. ಅಲ್ಲದೇ ಎರಡು ತಿಂಗಳ ಹಿಂದೆ, ನೊಂದ ಯುವತಿ ತಂದೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಕೂಡ ಕೇಸ್ ದಾಖಲಾಗಿದೆ. ನನ್ನ ಮಗಳಿಗೆ ಸೌರಭ್ ಎನ್ನುವ ಯುವಕ, ಅತ್ಯಾಚಾರ ಮಾಡಿ ಮೋಸ ಮಾಡಿರುವುದಲ್ಲದೇ, ಎರಡೂವರೆ ಕೋಟಿಗೂ ಅಧಿಕ ಹಣವನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಈಗಾಗಲೇ ನಮ್ಮ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು, ತನಿಖೆ ಆರಂಭಿಸಿದ್ದಾರೆ. ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪಾರದರ್ಶಕವಾಗಿ ಸಾಗುತ್ತಿದೆ. ತಪ್ಪಿತಸ್ಥ ಯುವಕನಿಗೆ ಶಿಕ್ಷೆ ನೀಡಿ, ನೊಂದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.
ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್: ಚೈತ್ರಾ ಮಾದರಿಯಲ್ಲೇ ನಿವೃತ್ತ ಇಂಜಿನಿಯರ್‌ಗೆ ಬಹುಕೋಟಿ ವಂಚನೆ!
ಒಟ್ಟಾರೆ ಕೆಲಸ ಸಿಗುವ ಆಸೆಯಲ್ಲಿ ಕಿರಾತಕರು ತೋಡುವ ಖೆಡ್ಡಾಕ್ಕೆ ಬೀಳುವ ಯುವತಿಯರೇ ಸ್ವಲ್ಪ ಎಚ್ಚರವಹಿಸಿ. ಇನ್ನಾದ್ರು ಇಂತಹ ಕಿರಾತಕರ ಮಾತು ಕೇಳಿ ಮೋಸ ಹೋಗದಿರಿ ಎಂಬುದು ಜನರ ಬಯಕೆ.
ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್