ರೇಪ್ ಕೇಸ್‌: ಮುರುಘಾ ಮಠದ ಆಡಳಿತಾಧಿಕಾರಿಗೆ ಜಾಮೀನು

ಹಾಸ್ಟೆಲ್ ವಾರ್ಡನ್ ನೀಡಿದ್ದ ರೇಪ್‌ ಕೇಸ್‌ ಪ್ರಕರಣದಲ್ಲಿ ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್‌ಗೆ ಜಾಮೀನು ಸಿಕ್ಕಿದೆ.

Chitradurga Court Grants bail to Muruga Mutt administrator sk basavarajan couple rbj

ಬೆಂಗಳೂರು, (ಸೆಪ್ಟೆಂಬರ್.1): ರೇಪ್ ಕೇಸ್‌ ಪ್ರಕರಣದಲ್ಲಿ (Rape Case)  ಚಿತ್ರದುರ್ಗ ಮುರುಘಾ ಮಠದ (Chitradurga Muruga Mutt) ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಜಾಮೀನು ಸಿಕ್ಕಿದೆ. 

 ಹಾಸ್ಟೆಲ್​​ ಮಹಿಳಾ ವಾರ್ಡನ್, ಎಸ್.ಕೆ.ಬಸವರಾಜನ್ ವಿರುದ್ಧ ​​ಅತ್ಯಾಚಾರಕ್ಕೆ ಯತ್ನ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಆ. 26 ರಂದು ಎಸ್.ಕೆ.ಬಸವರಾಜನ್  ಹಾಗೂ ಪತ್ನಿ ಸೌಭಾಗ್ಯ ವಿರುದ್ಧ IPC ಸೆಕ್ಷನ್​​​ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಕೆ.ಬಸವರಾಜನ್​, ಪತ್ನಿ ಸೌಭಾಗ್ಯ ಅವರಿಗೆ ಚಿತ್ರದುರ್ಗ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ನೀಡಿದೆ.

ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್, ಆಡಳಿತಾಧಿಕಾರಿ ವಿರುದ್ಧ ರೇಪ್ ಕೇಸ್

ಮುರುಘಾ ಮಠದ ಶರಣ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌ ದಾಖಲಾಗುತ್ತಿದ್ದಂತೆಯೇ ಇತ್ತ ಮಠದ ಹಾಸ್ಟೆಲ್‌ ವಾರ್ಡನ್ ರಶ್ಮೀ ಎನ್ನುವರು ಲೈಂಗಿಕ ಕಿರುಕುಳ ದೂರು ನೀಡಿದ್ದರು. ಹಾಸ್ಟೆಲ್ ತಪಾಸಣೆ ಮಾಡುವ ನೆಪದಲ್ಲಿ ಬಂದು ನನ್ನ ದೇಹದ ಅಂಗಾಂಗಗಳನ್ನ ಮುಟ್ಟಿದ್ದಾರೆ. ಅಲ್ಲದೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ರಶ್ಮೀ ಅವರು ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಮಠದ ಆಡಳಿತಾಧಿಕಾರಿ ಜಾಮೀನು ಅರ್ಜಿ ಸಲ್ಲಿಸಿದ್ರು. ಇಂದು(ಗುರುವಾರ) ಆ ಅರ್ಜಿ ವಿಚಾರಣೆ ನಡೆಸಿದ ಚಿತ್ರದುರ್ಗ ಕೋರ್ಟ್, ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಮುರುಘಾ ಮಠದ ಶ್ರೀಗಳ ಲೈಂಗಿಕ ದೌರ್ಜುನ್ಯ ಕೇಸ್‌ನಲ್ಲಿ ಮಠದ ಹಾಸ್ಟೆಲ್ ವಾರ್ಡನ್ ರಶ್ಮೀ ಎ2 ಆರೋಪಿಯಾಗಿದ್ದಾರೆ.

ದೂರು ನೀಡಿದ್ದ ಹಾಸ್ಟೆಲ್ ವಾರ್ಡನ್ ಪೊಲೀಸ್ ವಶಕ್ಕೆ
ಹೌದು... ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದ ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುರುಘಾ ಮಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜುನ್ಯ ಕೇಸ್‌ನಲ್ಲಿ ಈ ಹಾಸ್ಟೆಲ್ ವಾರ್ಡನ್‌  ಎ2 ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ವಾರ್ಡನ್‌ ನನ್ನು ಇಂದು(ಗುರುವಾರ) ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಹಾಸ್ಟೆಲ್ ವಾರ್ಡನ್‌ ದೂರಿನಲ್ಲಿ ಹೇಳಿದ್ದೇನು?
ಎಸ್.ಕೆ.ಬಸವರಾಜನ್ ವಿದ್ಯಾರ್ಥಿ ನಿಲಯದ ತಪಾಸಣೆ ನೆಪದಲ್ಲಿ ಮಹಿಳಾ ನಿಲಯ ಪಾಲಕರಾದ ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ  ದಿನಾಂಕ:27.07.2022 ರಂದು ಸಂಜೆ 6.00 ಗಂಟೆ ವೇಳೆಗೆ ವಿದ್ಯಾರ್ಥಿ ನಿಲಯದಲ್ಲಿ ಯಾರು ಇಲ್ಲದ ಸಮಯದಲ್ಲಿ  ತನ್ನ ದೇಹದ ಅಂಗಾಂಗಳನ್ನು ಮುಟ್ಟಿ, ಎಳೆದಾಡಿ ತಬ್ಬಿಕೊಂಡು ಬಲಾತ್ಕರಿಸಲು ಪ್ರಯತ್ನಿಸಿದ್ದರು. ತಾನು ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ವಾರ್ಡನ್ ರಶ್ಮೀ  ದೂರಿನಲ್ಲಿ ಉಲ್ಲೇಖಿಸಿದ್ದರು.

Latest Videos
Follow Us:
Download App:
  • android
  • ios