ಭಾರತಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ನೆಹರು; ಬಿಜೆಪಿಯವ್ರು ಬಂದು ಮೂಲೆಗುಂಪು ಮಾಡಿದ್ರು: ಸಿಎಂ
ಜವಾಹರ ಲಾಲ್ ನೆಹರು ಅವರು ಮಕ್ಕಳನ್ನ ಬಹಳ ಪ್ರೀತಿಯಿಂದ ಕಾಣ್ತಿದ್ರು. ಅದಕ್ಕಾಗಿ ಅವರನ್ನು ಮಕ್ಕಳು ಚಾಚಾ ಎಂದು ಕರೆಯುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಬೆಂಗಳೂರು (ನ.14): ಜವಾಹರ ಲಾಲ್ ನೆಹರು ಅವರು ಮಕ್ಕಳನ್ನ ಬಹಳ ಪ್ರೀತಿಯಿಂದ ಕಾಣ್ತಿದ್ರು. ಅದಕ್ಕಾಗಿ ಅವರನ್ನು ಮಕ್ಕಳು ಚಾಚಾ ಎಂದು ಕರೆಯುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಜವಾಹರಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಇಂದು ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜವಾಹರ ಲಾಲ್ ನೆಹರು ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಮೋತಿಲಾಲ್ ನೆಹರು ಖ್ಯಾತ ವಕೀಲರಾಗಿದ್ದರು. ನೆಹರು ಬಹಳ ಮೇಧಾವಿಗಳು, ಜನಪರ ಕಾಳಜಿ ಇರುವ ನಾಯಕರಾಗಿದ್ದರು. ಅವರು ದೇಶಕಂಡ ಮೇಧಾವಿ ನಾಯಕ ಎಂಬುದನ್ನು ಮರೆಯಲು ಸಾಧ್ಯವಿಲ್ಲ. 1900 ಇಸವಿಯಲ್ಲಿ ಅವರು ಹುಟ್ಟಿದರು. ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರು ಹುಟ್ಟಿದ್ದು ಕೂಡ ಅದೇ ವರ್ಷ ಎಂಬುದು ವಿಶೇಷ ಎಂದರು.
'ಪಂಚಮಸಾಲಿಗೆ ಈ ಲಫಂಗ ಮೀಸಲಾತಿ ನೀಡೊಲ್ಲ': ಸಿಎಂ ವಿರುದ್ಡ ಮನಗೂಳಿ ಹಿರೇಮಠ ಸ್ವಾಮೀಜಿ ವಾಗ್ದಾಳಿ!
ನಮ್ಮ ದೇಶವನ್ನ 200 ವರ್ಷ ಬ್ರಿಟೀಷರು ಆಳಿದ್ರು. 600 ವರ್ಷ ಮೊಘಲರು ಆಳಿದ್ರು. ಸ್ವಾತಂತ್ರ್ಯ ಬಂದಾಗ ನಮ್ಮ ದೇಶ ಸಂಪದ್ಭರಿತವಾಗಿರಲಿಲ್ಲ ನೆಹರು 17 ವರ್ಷ ಭಾರತದ ಪ್ರಧಾನಿ ಆಗಿದ್ರು. ಈ ಹದಿನೇಳು ವರ್ಷದಲ್ಲಿ ಭಾರತಕ್ಕೆ ಆಧುನಿಕ ಸ್ಪರ್ಶ ನೀಡಿದರು. ಹೀಗಾಗಿ ಅವರನ್ನು ಆಧುನಿಕ ಭಾರತದ ಶಿಲ್ಪಿ ಎಂದೇ ಕರೆಯುತ್ತಾರೆ. ಮಿಶ್ರ ಎಕಾನಮಿ ಶುರುವಾಗಿದ್ದು ನೆಹರು ಕಾಲದಲ್ಲೇ. ದೇಶದಲ್ಲಿ ಅನೇಕ ಡ್ಯಾಮ್‌ಗಳು, ಕಾರ್ಖಾನೆ ಕೂಡ ನೆಹರು ಕಾಲದಲ್ಲೇ ಆಗಿದ್ದು. ಬಿಜೆಪಿ ಅವರು ಬಂದಮೇಲೆ ನೆಹರು ಅವರನ್ನ ಮೂಲೆ ಗುಂಪು ಮಾಡಿದ್ರು. ನೆಹರು ಕಾಲದಲ್ಲಿ ಪಂಚವಾರ್ಷಿಕ ಮೂಲಕ ಹಲವು ಯೋಜನೆ ತರಲಾಗಿತ್ತು. ಅದನ್ನೀಗ ನೀತಿ ಆಯೋಗ ಮಾಡಿದ್ದಾರೆ. ಪಂಚವಾರ್ಷಿಕ ಯೋಜನೆ ಇದ್ದಾಗ ನಮಗೆ ಹೆಚ್ಚು ಅನುಕೂಲ ಆಗಿದೆ. ಈಗ ನೀತಿ ಆಯೋಗ ಮಾಡಿ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿಗೆ, ಬಿಜೆಪಿಗೆ ಸಮಾನತೆ ಬರುವುದು ಬೇಕಿಲ್ಲ. ಅದಕ್ಕೆ ಸಂವಿಧಾನ ಬದಲಾವಣೆ ಮಾಡಬೇಕು ಅಂತ ಹೊರಟವರು