ಭತ್ತ, ಅಡಕೆ ಇತ್ಯಾದಿ ಬೆಳೆಗಾರರಿಗೆ ನೀಡಿದ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ಪೂರ್ಣ ಪ್ರಮಾಣದ ಉಚಿತ ವಿದ್ಯುತ್‌ ನೀಡಲು ಹಾಗೂ ವಿದ್ಯುತ್‌ ಬಿಲ್‌ ಬಾಕಿ ಮನ್ನಾ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ್‌ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ (ಫೆ.21): ಭತ್ತ, ಅಡಕೆ ಇತ್ಯಾದಿ ಬೆಳೆಗಾರರಿಗೆ ನೀಡಿದ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ಪೂರ್ಣ ಪ್ರಮಾಣದ ಉಚಿತ ವಿದ್ಯುತ್‌ ನೀಡಲು ಹಾಗೂ ವಿದ್ಯುತ್‌ ಬಿಲ್‌ ಬಾಕಿ ಮನ್ನಾ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ್‌(BC Nagesh) ಭರವಸೆ ನೀಡಿದ್ದಾರೆ.

ಪ್ರಸ್ತುತ 10 ಎಚ್‌ಪಿವರೆಗಿನ ಎಲ್ಲ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರ(Coffee farmers)ರಿಗೆ ಉಚಿತ ವಿದ್ಯುತ್‌(Free electricity) ನೀಡಲಾಗುತ್ತಿದೆ. ಆದರೆ ಅವರು ತಮ್ಮ ವಿದ್ಯುತ್‌ ಸ್ಥಾವರದ ಮಾಸಿಕ ವಿದ್ಯುತ್‌ ಬಿಲ್‌ ಅನ್ನು ಸಂಪೂರ್ಣವಾಗಿ ನಿಗದಿತ ಸಮಯದಲ್ಲಿ ಪಾವತಿಸಬೇಕಾಗುತ್ತದೆ. ಮಾಸಿಕ ಬಿಲ್ಲಿನಲ್ಲಿನ ವಿದ್ಯುತ್‌ ತೆರಿಗೆ ಮೊತ್ತ ಹೊರತುಪಡಿಸಿ ಉಳಿದ ಬಿಲ್ಲಿನ ಮೊತ್ತವನ್ನು ಡಿಬಿಟಿ ವ್ಯವಸ್ಥೆಯಡಿ ನೇರವಾಗಿ ಗ್ರಾಹಕರ ಖಾತೆಗೆ ಜಮೆ ಮಾಡಲಾಗುವುದು. ಆದರೆ ಎಲ್ಲ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್‌ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಕಾಫಿ ಬೆಳೆಗಾರರ ವಿದ್ಯುತ್‌ ಬಿಲ್‌ ಬಾಕಿ ಸುಮಾರು 42 ಕೋಟಿ ರು. ಇದ್ದು ಇದರ ಮನ್ನಾ ಬಗ್ಗೆ ಚರ್ಚಿಸಲಾಗುವುದು ಎಂದರು.

ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆ ಶುಲ್ಕ ಹೆಚ್ಚಿಸಿಲ್ಲ: ಸಚಿವ ಬಿ.ಸಿ.ನಾಗೇಶ್‌

ಇದಕ್ಕೂ ಮುನ್ನ ಮಾತನಾಡಿದ ಕುಶಾಲಪ್ಪ ಅವರು, ಅತಿವೃಷ್ಟಿಯಿಂದ ಕಾಫಿ ಬೆಳೆ ಇಳುವರಿ ಕುಸಿದಿದೆ. ಕಾಫಿ ತೋಟ ನಿರ್ವಹಣೆಗೆ ಎಕರೆಗೆ ಸುಮಾರು 50 ಸಾವಿರ ರು. ವೆಚ್ಚವಾಗುತ್ತಿದೆ. ಹೀಗಾಗಿ ಬೆಳೆಗಾರರು ಸಂಕಷ್ಟದಲ್ಲಿರುವುದರಿಂದ ಕಬ್ಬು, ಅಡಕೆ ಬೆಳೆಗಾರರಿಗೆ ನೀಡಿರುವಂತೆ ಸಂಪೂರ್ಣವಾಗಿ ಉಚಿತ ವಿದ್ಯುತ್‌ ನೀಡಬೇಕು, ವಿದ್ಯುತ್‌ ಬಾಕಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.