ಚಾಮುಂಡೇಶ್ವರಿ ಗರ್ಭಗುಡಿಯಲ್ಲೇ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟ ಸಂಸದ!
ಚಾಮರಾಜನಗರ ಸಂಸದ ಸುನೀಲ್ ಬೋಸ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ವೇಳೆ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು (ಜು.28): ಚಾಮರಾಜನಗರ ಸಂಸದ ಸುನೀಲ್ ಬೋಸ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ವೇಳೆ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಷಾಡ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಸಂಸದ ಸುನೀಲ್ ಬೋಸ್ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಜೊತೆಯಾಗಿ ಬಂದಿದ್ದರು. ಪೂಜೆ ನೆರವೇರಿಸುವ ವೇಳೆ ಬೆಂಬಲಿಗರ ಸಮ್ಮುಖದಲ್ಲೇ ನಿರ್ದೇಶಕಿ ಸವಿತಾ ಹಣೆಗೆ ಕುಂಕುಮ ಇಟ್ಟಿರುವ ಸಂಸದ ಸುನೀಲ್ ಬೋಸ್. ಘಟನೆಯ ವಿಡಿಯೋ, ಫೋಟೊಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ; ಕಾಲವೇ ಉತ್ತರಿಸಲಿದೆ: ಎಂಎಲ್‌ಸಿ ಸೂರಜ್ ರೇವಣ್ಣ
ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಸುನೀಲ್ ಬೋಸ್ ಚುನಾವಣಾ ಆಯೋಗಕ್ಕೆ ಅಫಿಡೆವಿಟ್ ಸಲ್ಲಿಸುವ ವೇಳೆ ಹೆಂಡತಿ ಮಕ್ಕಳ ಹಾಗೂ ಹಿಂದೂ ಅವಿಭಕ್ತ ಕುಟುಂಬ ಬಗ್ಗೆ ನಿಖರವಾದ ಮಾಹಿತಿ ನೀಡದೆ ಮರೆಮಾಚಿದ್ದರು. ಇದಕ್ಕೆ ಪ್ರತಿಯಾಗಿ ಚಾಮರಾಜನಗರ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಸುನೀಲ್ ಬೋಸ್ ವೈವಾಹಿಕ ಮರೆಮಾಚಿದ್ದಾರೆ. ಎಂಕೆ ಸವಿತಾ ಅವರನ್ನು ಮದುವೆಯಾಗಿದ್ದು, ಭುವಿ ಹೆಸರಿನ ಆರು ವರ್ಷದ ಹೆಣ್ಣುಮಗುವಿದೆ ಫೋಟೊ ಸಹಿತ ದೂರು ನೀಡಿದ್ದರು. ಇದೀಗ ಆಷಾಡ ನಿಮಿತ್ತ ಚಾಮುಂಡಿಬೆಟ್ಟಕ್ಕೆ ನಿರ್ದೇಶಕಿ ಜೊತೆಯಾಗಿ ಆಗಮಿಸಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿರುವುದು, ಹಣೆಗೆ ಕುಂಕುಮ ಇಟ್ಟಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.