Asianet Suvarna News Asianet Suvarna News

ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅಸ್ತು: ಹೋರಾಟ ಹಾದಿ ಮೆಲುಕು ಹಾಕಿದ ಗಣ್ಯರು

ಅದು ಮೂರು ದಶಕದ‌ ಹೋರಾಟ, ನೀರಿಗಾಗಿ ರೈತರು ಲಾಠಿ-ಬೂಟಿನೇಟು ತಿಂದಿದ್ದರು, ಜನಪ್ರತಿನಿಧಿಗಳು ಬೀದಿಗಳಿದು ಹೋರಾಟ ನಡೆಸಿದ್ದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅಂದು ನಿರಂತರ ಪಾದಯಾತ್ರೆ ನಡೆಸಿ, ರಕ್ತದಲ್ಲಿ ಪತ್ರ ಬರೆದು ಹೋರಾಟಕ್ಕೆ‌ ಧುಮುಕಿದ್ದರು.

central water commission has approved much awaited dpr for kalasa banduri nala project gvd
Author
First Published Dec 29, 2022, 11:58 PM IST

ಹುಬ್ಬಳ್ಳಿ (ಡಿ.29): ಅದು ಮೂರು ದಶಕದ‌ ಹೋರಾಟ, ನೀರಿಗಾಗಿ ರೈತರು ಲಾಠಿ-ಬೂಟಿನೇಟು ತಿಂದಿದ್ದರು, ಜನಪ್ರತಿನಿಧಿಗಳು ಬೀದಿಗಳಿದು ಹೋರಾಟ ನಡೆಸಿದ್ದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅಂದು ನಿರಂತರ ಪಾದಯಾತ್ರೆ ನಡೆಸಿ, ರಕ್ತದಲ್ಲಿ ಪತ್ರ ಬರೆದು ಹೋರಾಟಕ್ಕೆ‌ ಧುಮುಕಿದ್ದರು. ಬಂಡಾಯ ನೆಲದ ನೀರಿನ ಹೋರಾಟ ಈಗ ತಾರ್ಕಿಕ ಅಂತ್ಯ ಕಂಡಿದೆ. ಕೇಂದ್ರ ಸರ್ಕಾರ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಹೌದು! ಉತ್ತರ ಕರ್ನಾಟಕ ಜನರ ಬಹು ನಿರೀಕ್ಷೆಯ ಯೋಜನೆಯಾಗಿದ್ದ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಹಸಿರು ನಿಶಾನೆ ತೋರಿದೆ. 

ಯೋಜನೆ ಕೇಂದ್ರ ಒಪ್ಪಿಗೆ ಸೂಚಿಸುತ್ತಿದ್ದಂತೆ  ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರಲ್ಲಿ ಸಂತಸ ಮನೆ ಮಾಡಿದೆ. ಖುದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ‌ ಮಾಧ್ಯಮಗಳ‌ ಮುಂದೆ ಸರ್ಕಾರ ನಿರ್ಧಾರವನ್ನು ಸ್ವಾಗತಿಸಿದ್ರು, ಅಷ್ಟೇ ಅಲ್ಲ ಸಿಹಿ‌ ತಿನಿಸಿ ಸಂಭ್ರಮಿಸಿದರು. ಕಳಸಾ ಬಂಡೂರಿ ನಾಲೆಯಿಂದ ಮಲಪ್ರಭೆಗೆ ನೀರು ಹರಿಸಬೇಕೆಂಬುದು ಮೂರು ದಶಕದ ಹೋರಾಟ. ಆದ್ರೆ ಕಳಸ ಮತ್ತು ಬಂಡೂರಿ‌‌ ನಾಲಗಳ ನೀರೆತ್ತಲು ಗೋವಾ ಮತ್ತು ಮಹಾರಾಷ್ಟ್ರ ತಗಾದೆ ತೆಗೆದಿದ್ದು. ಅದರಲ್ಲೂ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರಿಗಾಗಿ ಗೋವಾ ಹೆಜ್ಜೆ ಹೆಜ್ಜೆಗು ತಗಾದೆ ಯೋಜನೆ ಅಡ್ಡಗಾಲಿ ಹಾಕುತ್ತಲೇ ಬಂದಿದ್ದು, ಅಂತಿಮವಾಗಿ ನ್ಯಾಯಾದೀಕರಣ ರಚೆನೆಗೊಂಡು ಸುದೀರ್ಘ ಹೋರಾಟ 2018 ರಲ್ಲಿ‌‌ ನ್ಯಾಯಾದೀಕರಣ ಅಂತಿಮ ತೀರ್ಪು ಪ್ರಕಟಿಸಿತು.

ಜೆಡಿಎಸ್‌, ಬಿಜೆಪಿ 123 ಸ್ಥಾನ ಗೆದ್ದಿರುವ ಇತಿಹಾಸವಿಲ್ಲ: ಎಚ್‌ಡಿಕೆಗೆ ಚಲುವರಾಯಸ್ವಾಮಿ ತಿರುಗೇಟು

ಆದರೂ ಗೋವಾ ಮತ್ತೆ ತಗಾದೆ ತಗೆದಿತ್ತು. ಆದ್ರೇ ಇದೀಗಾ ಎಲ್ಲ ಅಡ್ಡಿ ಆತಂಕಗಳನ್ನು ದೂರವಾದ ಬಳಿಕ, ಜಲಾಶಯದ ಎತ್ತರಗಳನ್ನು ಕಡಿಮೆ ಮಾಡಿ ನಮಗೆ ನಿಗದಿಯಾಗಿರುವ ಕಳಸಾದಲ್ಲಿ 1.72 ಟಿಎಂಸಿ, ಬಂಡೂರಿಯಲ್ಲಿ 2.18 ಟಿಎಂಸಿ ಸೇರಿ ಒಟ್ಟು 3.9 ಟಿಎಂಸಿ ನೀರನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಪರಿಷ್ಕೃತ ಡಿಪಿಆರ್‌ ಕಳಿಸಿದ್ದರು. ಇದೀಗ ಕೇಂದ್ರ ಕಳಸ ಬಂಡೂರಿ ಯೋಜನೆ ಡಿಪಿಆರ್‌ಗೆ ಗ್ರಿನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸವಿರತ ಶ್ರಮ, ಪ್ರಹ್ಲಾದ್ ಜೋಶಿಯವರ ನಿರಂತರ ಪ್ರಯತ್ನ ಫಲ‌ ನೀಡಿದೆ  ಸ್ವತಃ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಯೋಜನೆಗೆ ಒಪ್ಪಿಗೆ ನೀಡಿದ್ದಾರೆ.

ಕಾಂಗ್ರೆಸ್ ಹೋರಾಟ ಟೂಸ್ ಪಟಾಕಿ: ಮಹಾದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಚುನಾವಣಾ ಅಸ್ತ್ರ ಮಾಡಿಕೊಳ್ಳಲು ಹೊರಟ್ಟಿದ್ದ, ಕಾಂಗ್ರೆಸ್‌ಗೆ ಲೆಕ್ಕಾಚಾರ ಟೂಸ್ ಪಟಾಕಿಯಾಗಿದೆ. ಅಧಿಕಾರಲ್ಲಿ‌‌ ಇಲ್ಲದಿದ್ದಾಗ ಬಸವರಾಜ ಬೊಮ್ಮಾಯಿ ರಕ್ತದಲ್ಲಿ ಪತ್ರದಲ್ಲಿ ಬರೆದು ಹೋರಾಟ ಮಾಡಿದ್ರು, ಈಗ ಮುಖ್ಯಮಂತ್ರಿ ಹುದ್ದೆಗೆ ಅಲಂಕರಿಸಿದ್ದಾರೆ. ಆದರೂ ಯೋಜನೆ ಅನುಷ್ಠಾನ ಗೊಳಿಸುತ್ತಿಲ್ಲ ಅಂತ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿತ್ತು. ಇದೇ ಜನವರಿ 2ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲು‌ ಸಿದ್ದತೆ ಮಾಡಿಕೊಂಡಿತ್ತು. ಆದರೆ ಕೇಂದ್ರ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಕಾಂಗ್ರೆಸ್ ಹೋರಾಟ ಟೂಸ್ ಪಟಾಕಿಯಾಗಿದೆ.

ಮೀಸಲಾತಿ ಪ್ರಮಾಣ ತಿಳಿದ ಬಳಿಕ ಮುಂದಿನ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಗಣ್ಯರಿಂದ ಅಭಿನಂದನೆಯ ಮಹಾಪುರ: ಯೋಜನೆ ಗ್ರಿನ್ ಸಿಗ್ನಲ್ ಸಿಗುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಅಭಿನಂದನೆ ಸಲ್ಲಿಸಿದ್ದಾರೆ.ಈ ಭಾಗದ ಜನರ ಜೀವನಾಡಿಯಾಗಿದ್ದ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರಸಿಂಗ ಶೇಖಾವತ ಅವರ ಮುತುವರ್ಜಿಯಿಂದ ಈ ಕಾರ್ಯ ಕೈಗೂಡಿದೆ. ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ತೆಗೆದುಕೊಂಡಿರುವ ನಿರ್ಧಾರ ಮೆಚ್ಚುಗೆಗೆ ಪಾತ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ  ಸಫಲವಾಗಿರುತ್ತದೆ. ಒಟ್ಟಿನಲ್ಲಿ ಈ ಭಾಗದ ಜನರ ಬಹು ವರ್ಷಗಳ ಕನಸು ನನಸಾಗಲಿದೆ. ಯೋಜನೆಗಾಗಿ ಸತತ ಹೋರಾಟ ಮಾಡಿದ ಕಳಸಾ ಬಂಡೂರಿ  ಹೋರಾಟಗಾರರು, ರೈತರಿಗೂ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Follow Us:
Download App:
  • android
  • ios