ವಂಡರ್ ಲಾ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಗಳು ಮತ್ತು ಆಚರಣೆಗಳನ್ನು ಘೋಷಿಸಿದೆ. ಕಪಲ್‌ಗಳಿಗೆ ಸ್ಕೈ ವೀಲ್ ಡಿನ್ನರ್ ಮತ್ತು ವೇವ್ ಪೂಲ್ ಡಿನ್ನರ್‌ನಂತಹ ರೋಮ್ಯಾಂಟಿಕ್ ಅನುಭವಗಳನ್ನು ಒದಗಿಸಲಾಗುತ್ತಿದೆ. ಸಿಂಗಲ್ಸ್‌ಗಳಿಗಾಗಿ ಫೆಬ್ರವರಿ 15 ಮತ್ತು 16 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಾಮನಗರ (ಫೆ.14) : ವಂಡರ್ ಲಾ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಗಳು ಹಾಗೂ ಆಚರಣೆಗಳನ್ನು ಘೋಷಿಸಿದೆ.

ಕಪಲ್(ಜೋಡಿ)ಗಳಿಗೆ, ವಂಡರ್ ಲಾ ಫೆಬ್ರವರಿ 14ವರೆಗೆ ಅತ್ಯಂತ ನಿರೀಕ್ಷೆಯ ಸ್ಕೈ ವೀಲ್ ಡೈನ್ ಒಳಗೊಂಡಿದ್ದು, ಸುಂದರ ದೃಶ್ಯಗಳೊಂದಿಗೆ ನಯನ ಮನೋಹರ ಡೈನಿಂಗ್ ಅನುಭವ ಒದಗಿಸಲಿದೆ. ಫೆಬ್ರವರಿ 14ರಂದು, ವೇವ್ ಪೂಲ್ ಡಿನ್ನರ್, ಪ್ರತ್ಯಕ್ಷ ಸಂಗೀತ, ಡೆಕೋರ್ ಮತ್ತು ಎಮ್‌ಸೀ-ನಡೆಸಿಕೊಡುವ ಮನರಂಜನೆಯೊಂದಿಗೆ ಸಂಗೀತಮಯ ಸಂಜೆಯನ್ನು ಸೃಷ್ಟಿಸಿ, ಜೋಡಿಗಳು ತಮ್ಮ ಪ್ರೀತಿಯನ್ನು ಆಚರಿಸಿಕೊಳ್ಳಲು ಅತಿಸೂಕ್ತ ಸೆಟ್ಟಿಂಗ್ ಒದಗಿಸಲಿದೆ.

ವ್ಯಾಲೆಂಟೈನ್ಸ್ ಡೇ ನಂತರ, ಈ ಗಮನಕೇಂದ್ರೀಕರಣವು, ಫೆಬ್ರವರಿ 15 ಮತ್ತು 16ರಂದು ನಡೆಯಲಿರುವ ಸಿಂಗಲ್ಸ್ ಡೇ ಆಚರಣೆಗಳ ಮೇಲಿರುತ್ತದೆ. ಫೆಬ್ರವರಿ 15ರಂದು ವಂಡರ್ ಲಾ ಬೆಂಡಿಜೆ ನೈಟ್ ನಡೆಸಿಕೊಡುವ ಮೂಲಕ ಸಿಂಗಲ್ಸ್‌ಗಳಿಗೆ ಸಂಗೀತವನ್ನು ಆನಂದಿಸುವ ಅವಕಾಶ ಒದಗಿಸುತ್ತಿದೆ.

ಇದನ್ನೂ ಓದಿ: Valentines Day: ಲವ್ ಪ್ರಪೋಸ್ ಮಾಡುವುದಕ್ಕೆ ಭಾರತದ ಪ್ರಸಿದ್ಧ ರೋಮ್ಯಾಂಟಿಕ್ ತಾಣಗಳು

ಕಪಲ್ ಪಾಸಸ್ ಮತ್ತು ವಿಶೇಷ ಆಹಾರ+ ಟಿಕೆಟ್ ಕಾಂಬೋಗಳ ಮೇಲೆ ಶೇ.35ರವರೆಗೆ ರಿಯಾಯಿತಿ ಘೋಷಿಸಿದೆ. ಅಲ್ಲದೆ, ಆನ್‌ಲೈನ್ ಬುಕ್ ಮಾಡಿದಾಗ ಪಾರ್ಕ್ ಟಿಕೆಟ್‌ಗಳು ಹಾಗೂ ವಿಶೇಷ ಆಹಾರ ಮತ್ತು ಟಿಕೆಟ್ ಕಾಂಬೋಗಳ ಮೇಲೆ ಶೇ.35ರವರೆಗೆ ರಿಯಾಯಿತಿ ಒದಗಿಸಲಿದೆ. ಈ ಭರ್ಜರಿ ಡೀಲ್‍ಅನ್ನು, ವಂಡರ್ ಲಾದ ಆನ್‌ಲೈನ್ ಬುಕಿಂಗ್ ವೇದಿಕೆಯ ಮೇಲೆ ವಿಶೇಷವಾಗಿ ಫೆಬ್ರವರಿ 14ರವರೆಗೆ ಪಡೆದುಕೊಳ್ಳಬಹುದಾಗಿದೆ.