ಬೆಂಗಳೂರು (ಮಾ. 29): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಇಂದು ನಿರ್ಣಾಯಕ ಘಟ್ಟ ತಲುಪುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ. ವಿಡಿಯೋದಲ್ಲಿದ್ದಾಳೆ ಎನ್ನಲಾಗಿರುವ ಯುವತಿ ಇಂದು ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ನ್ಯಾಯಮೂರ್ತಿಯವರಿಗೆ ಪತ್ರ ಕೂಡಾ ಬರೆದಿದ್ದು, ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

"

ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ಎಸ್‌ಐಟಿ ಎದುರು ಹಾಜರಾಗಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಜಾರಕಿಹೊಳಿ ಕುಟುಂಬಸ್ಥರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ವಿಚಾರಣೆ ಮುಂದುವರೆದಿದೆ. ಮತ್ತೊಂದು ಕಡೆ ಮೌರ್ಯ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.  ಮಾಜಿ ಮೇಯರ್ ಪದ್ಮಾವತಿ , ರಾಮಚಂದ್ರಪ್ಪ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಶಿವರಾಜ್ , ಕೇಶವಮೂರ್ತಿ, ಉದಯ್ ಪ್ರತಿಭಟನೆಯಲ್ಲಿ ಭಾಗಿಯಾಗಿ ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿದ್ದಾರೆ. 

ಯುವತಿಯ ಪರ ವಕೀಲ ಜಗದೀಶ್ ಮಾತನಾಡಿ, ಮ್ಯಾಜಿಸ್ಟ್ರೇಟ್ ಕೋರ್ಟ್ ನ ಡೆಪ್ಯುಟಿ ರಿಜಿಸ್ಟರ್ ನ ಭೇಟಿ ಆಗಲು ಹೊರಟಿದ್ದೇವೆ. ನ್ಯಾಯಾಲಯ ಯಾವ ರೀತಿ ಪರ್ಮಿಷನ್ ಕೊಡ್ತಾರೋ ಅದೇ ರೀತಿ ನಡೆದುಕೊಳ್ಳಬೇಕಾಗುತ್ತೆ.ಆರೋಪಿ ಕಡೆಯವರು ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷದ ನಾಯಕನಿಗೆ ಹೀಗಾದ್ರೆ ಯುವತಿಯ ಪಾಡೇನು.? ಆದಷ್ಟು ಬೇಗ ಅವರನ್ನ ಬಂಧಿಸಬೇಕು ಎಂದಿದ್ದಾರೆ. 

ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಭದ್ರತೆ ಹೆಚ್ಚಳ... ಪಶ್ಚಿಮ ವಿಭಾಗ ಡಿಸಿಪಿ  ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಎರಡು ಕೆಎಸ್ಆರ್ಪಿ, ಕಬ್ಬಡಿ ಟೀಂ ಕೂಡ ಆಗಮಿಸಿದೆ.