Asianet Suvarna News Asianet Suvarna News

ತೀವ್ರ ಬರಗಾಲದ ನಡುವೆಯೂ ತಮಿಳನಾಡಿಗೆ ಮತ್ತೆ ಕಾವೇರಿ ನೀರು? ರಾಜ್ಯಸರ್ಕಾರದ ವಿರುದ್ಧ ಮಂಡ್ಯ ರೈತರು ಆಕ್ರೋಶ

ರಾಜ್ಯದಲ್ಲಿ ತೀವ್ರ ಬರಗಾಲ, ಕುಡಿಯಲು ನೀರಿಲ್ಲ ತೀವ್ರ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸಿದ ಸರ್ಕಾರ? ಏಕಾಏಕಿ ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ರೈತರು ಆಕ್ರೋಶ

Cauvery water released to Tamil Nadu despite the drought mandya formers outraged rav
Author
First Published Mar 9, 2024, 10:29 PM IST

ಮಂಡ್ಯ (ಮಾ.9): ಕರ್ನಾಟಕದಲ್ಲಿ ಈ ತೀವ್ರ ಬರಗಾಲದಿಂದ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನ ಪರಿಸ್ಥಿತಿಯಂತೂ ಕೇಳುವುದೇ ಬೇಡ. ದಿನಬಳಕೆಗೆ ನೀರಿಲ್ಲ, ಕುಡಿಯಲು ನೀರಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಿವಾಸದಲ್ಲೇ ನೀರಿಗೆ ಬರ. ಟ್ಯಾಂಕರ್ ಮೂಲಕ ತರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ಇಂಥ ಪರಿಸ್ಥಿತಿಯಲ್ಲೂ ಏಕಾಏಕಿ ರಾಜ್ಯಸರ್ಕಾರ ತಮಿಳನಾಡಿಗೆ ನೀರು ಬಿಟ್ಟಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಡ್ಯಾಂನಿಂದ ತಮಿಳನಾಡಿಗೆ 4 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಬಿಡುಗಡೆ ಮಾಡಿರುವ ಸರ್ಕಾರ. ಬೆಂಗಳೂರಲ್ಲೇ ಕುಡಿಯಲು ನೀರು ಸಿಗ್ತಿಲ್ಲ. ಬಟ್ಟೆ, ಕಾರು ತೊಳೆದರೂ ಸರ್ಕಾರದಿಂದ ದಂಡದ ಬೆದರಿಕೆ. ಇಂಥ ಪರಿಸ್ಥಿತಿ ಇರುವಾಗ  ತಮಿಳನಾಡುಗೆ ನೀರು ಬಿಟ್ಟಿದ್ದು ಯಾಕೆ? ನಮಗೆ ನೀರಿಲ್ಲ ಪಕ್ಕದ ರಾಜ್ಯಕ್ಕೆ ನೀರು ಬಿಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ, ದರಿದ್ರ ಸರ್ಕಾರ ಇದು: ಬಿವೈ ವಿಜಯೇಂದ್ರ

ಇಂದು ಮಧ್ಯಾಹ್ನದಿಂದ ಕೆಆರ್‌ಎಸ್ ಡ್ಯಾಂನಿಂದ ತಮಿಳನಾಡಿಗೆ ನೀರು ಹರಿಸುತ್ತಿರುವ ಅಧಿಕಾರಿಗಳು. ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ. ಸದ್ಯ ನೀರಿಲ್ಲದೆ ಒಣಗುತ್ತಿರುವ ಮಂಡ್ಯ ರೈತರ ಬೆಳೆಗಳು. ಮತ್ತೊಂದು ಕಡೆ ಬೆಂಗಳೂರು ಕುಡಿಯುವ ನೀರಿಗೆ ಕಾವೇರಿ ಅವಲಂಬಿಸಿರುವ ಜಿಲ್ಲೆಗಳಲ್ಲಿ ಜೀವ ಜಲಕ್ಕೆ ಹಾಹಾಕಾರ ಶುರುವಾಗಿದೆ. ತೀವ್ರ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ನೀರು ಹರಿಯುತ್ತಿದೆ ಸರ್ಕಾರ. ಸರ್ಕಾರದ ಈ ನಿರ್ಧಾರ ವಿರುದ್ಧ ರೈತರ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ KRS ಡ್ಯಾಂ. ಆದರೆ ಸದ್ಯ ಅಣೆಕಟ್ಟೆಯಲ್ಲಿ ಕೇವಲ 88 ಅಡಿ ಮಾತ್ರ ನೀರು ಲಭ್ಯವಿದೆ. ಇದರಲ್ಲಿ ತಮಿಳುನಾಡಿಗೆ ನೀರು ಬಿಟ್ರೆ ಎರಡುಮೂರು ದಿನದಲ್ಲೇ 70 ಅಡಿಗೆ ಕುಸಿಯಲಿರುವ ನೀರಿನ ಮಟ್ಟ. 70 ಅಡಿಗೆ ನೀರು ಕುಸಿದ್ರೆ ಮತ್ತಷ್ಟು  ಜಲಕ್ಷಾಮ ಉಲ್ಬಣಿಸಲಿರುವ ಸಾಧ್ಯತೆಯಿದೆ.

ಕೆಆರ್‌ಎಸ್ ಡ್ಯಾಂನಿಂದ ನೀರು ಬಿಟ್ಟಿಲ್ಲ: ಇಂಜಿನಿಯರ್ ಸ್ಪಷ್ಟನೆ

ಕೆಆರ್‌ಎಸ್ ಡ್ಯಾಂನಿಂದ ತಮಿಳನಾಡಿಗೆ ನೀರು ಬಿಟ್ಟಿಲ್ಲ. ನೀರಿನ ಸಮಸ್ಯೆ ಸರಿಪಡಿಸಲು ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಕಾವೇರಿ ನೀರಾವರಿಕ ನಿಗಮದ ಸುಪರಿಡೆಂಟ್ ಇಂಜಿನಿಯರ್ ರಘುರಾಮ್ ಸ್ಷಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಹುಮತ ಬಂದ್ರೆ ಸಂವಿಧಾನ ತಿದ್ದುಪಡಿ ಆಗುತ್ತಾ? ಏನಂದ್ರು ಸಂಸದ ಅನಂತಕುಮಾರ ಹೆಗ್ಡೆ?

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಶಿವ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿದೆ. ಮೈನಸ್ 34 ಇಂಚಿಗೆ ನೀರು ಕುಸಿತವಾಗಿದೆ. ಇದ್ರಿಂದ ಬೆಂಗಳೂರಿಗೆ ಸಮರ್ಥವಾಗಿ ನೀರು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನೀರಿನ ಸಮಸ್ಯೆ ಉಂಟಾಗಿದೆ. ಸಮಸ್ಯೆ ಸರಿಪಡಿಸಲು KRS ಡ್ಯಾಂನಿಂದ ನೀರು ಬಿಡಲಾಗಿದೆ.  ಬೆಳಗ್ಗೆ ಒಂದೂವರೆ ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಶಿವ ಅಣೆಕಟ್ಟೆಗೆ ನೀರು ರೀಚ್ ಆಗದ ಹಿನ್ನೆಲೆಯಲ್ಲಿ 4 ಸಾವಿರ ಕ್ಯೂಸೆಕ್ ಏರಿಕೆ ಮಾಡಲಾಗಿದೆ. ಭಾನುವಾರ ಸಂಜೆ ಅಥವಾ ಸೋಮವಾರ ಬೆಳಿಗ್ಗೆ ವೇಳೆಗೆ ಶಿವ ಅಣೆಕಟ್ಟೆ ಸಂಪೂರ್ಣ ತುಂಬಲಿದೆ. ಬಳಿಕ KRS ಡ್ಯಾಂನಿಂದ ಬಿಡುತ್ತಿರುವ ಹೊರ ಹರಿವು ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios