Asianet Suvarna News Asianet Suvarna News

ದೆಹಲಿಯಲ್ಲಿ ಕುಳಿತು ಆದೇಶ ಮಾಡೋದು ಅಲ್ಲ, ಇಲ್ಲಿಗೆ ಬಂದು ಪರಿಸ್ಥಿತಿ ತಿಳಿಯಲಿ : CWMA ಆದೇಶಕ್ಕೆ ದರ್ಶನ ಪುಟ್ಟಣ್ಣಯ್ಯ ಗರಂ

ಮೊದಲು ನೀರು ನಿಲ್ಲಿಸಿ, ಪರಿಶೀಲಿಸಿದ ನಂತರವೇ ಆದೇಶ ಮಾಡಿ' ಎಂದು ಕಾವೇರಿ ಜಲವಿವಾದ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಶಾಸಕ ದರ್ಶನ ಪುಟ್ಟಣ್ಣಯ್ಯ ಕಿಡಿಕಾರಿದ್ದಾರೆ.

Cauvery water dispute MLA darshan puttannaiah outraged against CWMA at mandya rav
Author
First Published Sep 19, 2023, 11:02 AM IST | Last Updated Sep 19, 2023, 11:02 AM IST

ಮಂಡ್ಯ (ಸೆ.19): 'ಮೊದಲು ನೀರು ನಿಲ್ಲಿಸಿ, ಪರಿಶೀಲಿಸಿದ ನಂತರವೇ ಆದೇಶ ಮಾಡಿ' ಎಂದು ಕಾವೇರಿ ಜಲವಿವಾದ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಶಾಸಕ ದರ್ಶನ ಪುಟ್ಟಣ್ಣಯ್ಯ ಕಿಡಿಕಾರಿದ್ದಾರೆ.

ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಕಾವೇರಿ ನೀರು ಹರಿಸುತ್ತಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, CWMA ನಮಗೆ ಬಿಗ್ ಬ್ಲೋ. ಪ್ರಾಧಿಕಾರ ಯಾವ ಆಧಾರದ ಮೇಲೆ ಯಾವ ಅಂಕಿ-ಅಂಶ ಇಟ್ಟುಕೊಂಡು ಆದೇಶ ಮಾಡಿದೆಯೋ ನಮಗೆ ಗೊತ್ತಾಗುತ್ತಿಲ್ಲ ಎಂದರು.

ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳ್ತಿದೆ. ನಮಗೆ ಕುಡಿಯೋದಕ್ಕೇ ನೀರು ಇಲ್ಲ. ಇದು CWMAಗೆ ಯಾಕೆ ಅರ್ಥ ಆಗ್ತಿಲ್ಲ ಎಂದು ಪ್ರಶ್ನಿಸಿದ ಅವರು, ಇವರ ಆದೇಶ ಪಾಲಿಸಿದ್ರೆ ಕಾವೇರಿ ನೀರು ಖಾಲಿ ಆಗಿಬಿಡುತ್ತದೆ. ಆಗ ಅರ್ಧ ಉಳಿಯುವ ನೀರಲ್ಲಿ ಅರ್ಧ ಬೆಂಗಳೂರಿಗೂ ಸಾಲಲ್ಲ. ಎಲ್ಲಿಂದ ತರ್ತಿರಿ? ನೀರು ಉತ್ಪತ್ತಿ ಮಾಡೋಕೆ ಆಗುತ್ತಾ? ಹೀಗಾಗಿ ತಮಿಳುನಾಡಿಗೆ ನೀರು ಬಿಡದಂತೆ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

 

ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಅನಿವಾರ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

ಈಗಾಗಲೇ ಎಂದಿಗಿಂತ 700-800 ಕ್ಯೂಸೆಕ್ ಹೆಚ್ಚು ನೀರು ಬಿಡಲಾಗಿದೆ. ಅಷ್ಟು ನೀರನ್ನು ಬಿಡಬಾರದಿತ್ತು. ತಜ್ಞರ ತಂಡ ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಿ ನಂತರ ಆದೇಶ ಮಾಡಲಿ.
ದೆಹಲಿಯಲ್ಲಿ ಕುಳಿತು ಆದೇಶ ಮಾಡೋದು ನ್ಯಾಯ ಸಮ್ಮತವಲ್ಲ. ಸುಪ್ರೀಂ ಕೋರ್ಟ್ ಕೂಡ CWMA ಆದೇಶವನ್ನೇ ಎತ್ತಿ ಹಿಡಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾವು ಸುಪ್ರೀಂಗೆ ಹೇಗೆ ಮನವರಿಕೆ ಮಾಡಿಕೊಡಬೇಕು ಎನ್ನುವ ಸಿದ್ದತೆಯಲ್ಲಿದ್ದೇವೆ. ಸೋಷಿಯಲ್ ಮತ್ತು ಎಕಾನಾಮಿಕ್ ಇಂಪ್ಯಾಕ್ಟ್ ಅಂಶ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದೇವೆ. ಸಿಎಂ, ಡಿಸಿಎಂ ಇಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ದೆಹಲಿಗೆ ತೆರಳಿ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡುವ ಕೆಲಸ ಮಾಡಲಿದ್ದಾರೆ ಎಂದರು. 

ಮಂಡ್ಯ: ಸರ್ಕಾರಿ ಕಚೇರಿ ಸ್ವಚ್ಛಗೊಳಿಸಿದ ಶಾಸಕ ದರ್ಶನ್ ಪುಟ್ಟಣಯ್ಯ..!

Latest Videos
Follow Us:
Download App:
  • android
  • ios