ಕಾವೇರಿ ಹೋರಾಟ: ಮಂಗಳವಾರ ಬೆಂಗಳೂರು ಬಂದ್: ಶಾಲೆ ಕಾಲೇಜುಗಳಿಗೆ ರಜೆ
ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವುದನ್ನು ಖಂಡಿಸಿ ಸೆ.26 ಕ್ಕೆ ಬೆಂಗಳೂರು ನಗರ ಬಂದ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ.
ಬೆಂಗಳೂರು (ಸೆ.23): ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವುದನ್ನು ಖಂಡಿಸಿ ಸೆ.26 ಕ್ಕೆ ಬೆಂಗಳೂರು ನಗರ ಬಂದ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ. ಸೆ.26 ಕ್ಕೆ ಬೆಂಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಎಲ್ಲ ಸಂಘ ಸಂಸ್ಥೆಗಳ ನಿರ್ಧಾರದ ಮೇರೆಗೆ ಘೋಷಣೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಬಂದ್ ಮಾಡುವ ಮೂಲಕ ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ಮಾತ್ರನಾ? ರಾಜ್ಯ ಬಂದ್‌ಗೆ ಕರೆ ಕೊಡ್ತಾರಾ?: ಸೆ.26 ಕ್ಕೆ ಟೌನ್ ಹಾಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಶಾಲೆಗಳಿಗೆ ರಜೆ ಘೋಷಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಬೆಂಗಳೂರಿನ ಐಟಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಗೈರಾಗಿ ಬೆಂಬಲ ನೀಡಬೇಕು. ಇಂದು ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸ್ತಿದ್ದಾರೆ. ಈ ಕೂಡಲೇ ನೀರನ್ನ ಹರಿಸುವ ಕೆಲಸವನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಬೆಂಗಳೂರು ನಗರವನ್ನು ಕಾವೇರಿ ನೀರಿನ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಬಂದ್ ಮಾಡಿದ್ದಾರೆ. ಮಂಗಳವಾರ ಬೆಂಗಳೂರು ಬಂದ್ ನಿಶ್ಚಿತ ಎಂದು ಶಾಂತಕುಮಾರ್ ಹೇಳಿದರು.
ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನತಾ ದಂಗೆ ಖಚಿತ: ಮಾಜಿ ಸಿಎಂ ಬೊಮ್ಮಾಯಿ
ಬಂದ್‌ಗೆ ಬೆಂಬಲ ಸೂಚಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ: ಸಿನಿಮಾ ರಂಗದವರನ್ನ ಜನಸಾಮಾನ್ಯರು ಬೆಳೆಸಿದ್ದಾರೆ. ಸಿನಿಮಾ ನಟರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬರಬೇಕು. ಸಭೆಗೆ ಬಾರದೆ ಇರುವವರನ್ನ ಭೇಟಿಯಾಗಿ ಮಾತನಾಡುತ್ತೇವೆ. ಇಡೀ ಚಿತ್ರೋದ್ಯಮ ಒಂದು ದಿನ ಚಟುವಟಿಕೆ ನಿಲ್ಲಿಸಿ ಬೆಂಬಲ ನೀಡಬೇಕು ಎಂದು ಶಾಂತಕುಮಾರ್ ಹೇಳಿದ್ದಾರೆ.
ಬ್ರಿಟಿಷರ ಕಾಲದಿಂದಲೂ ರಾಜಕ್ಕೆ ಅನ್ಯಾಯ ಆಗ್ತಿದೆ: ನಾನು ದರ್ಶನ್ ಪುಟ್ಟಣ್ಣಯ್ಯ ಸಿಎಂ ಭೇಟಿ ಮಾಡಿದ್ವಿ. ಕಾವೇರಿ ನೀರಿನ ಸಮಸ್ಯೆ ಬಗೆಗೆ ವಿವರಿಸಿ ನೀರು ಬಿಡೋದು ಸರಿಯಲ್ಲ ಎಂದಿದ್ದೆವೆ. ನನಗೂ ನೀರಿನ ಸಮಸ್ಯೆ ಬಗೆ ಅರಿವಿದೆ. ಮುಂದೆ 26 ತಾರೀಖು ಮತ್ತೆ ವಿಚಾರಣೆ ಇದೆ. ಅಂದು ಸರ್ಕಾರದ ನೀರು ಬೀಡೋದಿಲ್ಲ ಎಂದು ಸಮರ್ಥವಾಗಿ ವಾದ ಮಂಡಿಸಲಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಬ್ರಿಟಿಷರ ಕಾಲದಿಂದಲೂ ರಾಜಕ್ಕೆ ಅನ್ಯಾಯ ಆಗ್ತಿದೆ ಎಂದು ಸಿಎಂ ಭೇಟಿ ಬಳಿಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ತಿಳಿಸಿದ್ದಾರೆ.
ನಮ್ಮ ಸಂಸದರಲ್ಲಿ ಒಗ್ಗಟ್ಟಿನ ಕೊರತೆಯಿದೆ. ತಮಿಳುನಾಡಿನ ಸಂದಸರು ಎಲ್ಲರೂ ಒಂದಾಗಿ ಹೋರಾಡುತ್ತಾರೆ. ಸುಪ್ರೀಂ ಆದೇಶಕ್ಕೆ ಸರ್ಕಾರ ಹೆದರುತ್ತದೆ. ವಿಶೇಷ ಅಧಿವೇಶನ ಕರೆದು ನಿರ್ಣಯ ತೆಗದುಕೊಳ್ಳಿ. ಆಗ ನ್ಯಾಯಾಂಗ ನಿಂದನೆಯಾಗಲ್ಲ. ಕೇಂದ್ರ ಸರ್ಕಾರ ದೊಡ್ಡಣ್ಣನ ಸ್ಥಾನ ತುಂಬಬೇಕು. ಸಂಕಷ್ಟ ಸೂತ್ರ ಸರಿಯಾಗಿಲ್ಲ. ಸ್ಪಷ್ಟವಾಗಿ ಸೂತ್ರ ಮಾಡಬೇಕು. ರೈತರ ಹಿತಾದೃಷ್ಠಿಯಿಂದ ನೀರು ಬಿಡಬಾರದು. ನಿನ್ನೆ ರೈತ ಸಂಘದ ಮುಖಂಡರು ಸಭೆ ಮಾಡಿದ್ದೇವೆ.
ಕಾವೇರಿ ವಿಚಾರದಲ್ಲಿ ನಾನು ಅಧಿವೇಶನದಲ್ಲೇ ಕಣ್ಣೀರು ಹಾಕಿದ್ದೆ: ಎಚ್.ಡಿ.ದೇವೇಗೌಡ
26 ರಂದು ಮತ್ತೆ ವಿಚಾರಣೆಯಲ್ಲಿ ಸರ್ಕಾರ ಯಾವ ನಿರ್ಧಾರ ತಗೆದುಕೊಳ್ಳಲಿದೆ ಎಂದು ನೋಡಿಕೊಂಡು ಸೆ.29 ರಂದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆಯುತ್ತೆವೆ. 15 ಸಾವಿರ ರೈತರೊಂದಿಗೆ ನಮ್ಮ ಜಾನುವಾರುಗಳನ್ನ ಕರೆದಿಕೊಂಡು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯನ್ನ ತಡೆಯುತ್ತೇವೆ ಎಂದರು. ಸಿನ್ಮಾ ನಟರು ಡೈಲಾಗ್ ಹೊಡೆಯೋದನ್ನ ಬಿಟ್ಟು ನಾಡು ನೆಲ ನುಡಿಗಾಗಿ ಹೋರಾಟ ಮಾಡಬೇಕು. ಕಾವೇರಿ ಹೋರಾಟದಲ್ಲಿ ಅವರೆಲ್ಲ ಭಾಗಿಯಾಗಬೇಕು. ಬೆಂಗಳೂರು ಜನ ಎಚ್ಚೆತ್ತುಕೊಳ್ಳಬೇಕು. ಐಟಿಬಿಟಿ ಉದ್ಯೋಗಿಗಳು,ಸಾಹಿತಿಗಳು, ಚಿತ್ರನಟರು ಸೇರಿ ಎಲ್ಲರೂ ಬೆಂಬಲಿಸಲು ಬಡಗಲಾಪುರ ನಾಗೇಂದ್ರ ಕರೆ ನೀಡಿದ್ದಾರೆ.