Asianet Suvarna News Asianet Suvarna News

ಮೇಕೆಗಳನ್ನು ನುಂಗೋದು ಬಿಟ್ರೆ ಮೇಕೆದಾಟಲ್ಲಿ ಕಾಂಗ್ರೆಸ್‌ನವರದ್ದು ಏನೂ ಇಲ್ಲ: ಅಶ್ವತ್ಥ ನಾರಾಯಣ

ಮೇಕೆಗಳನ್ನು ನುಂಗುವುದನ್ನು ಬಿಟ್ಟರೆ ಇವರು ಮೇಕೆದಾಟದಲ್ಲಿ ಏನೂ ಇಟ್ಟಿಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು. ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನೀರು ಬಿಡಲ್ಲ ಎಂದು ಹೇಳಿ ನೀರು ಬಿಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ, ರೈತರ ಹಿತ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Cauvery dispute aswattha narayana criticizes Congress at mandya rav
Author
First Published Sep 28, 2023, 1:03 PM IST

ಮಂಡ್ಯ (ಸೆ.28): ಮೇಕೆಗಳನ್ನು ನುಂಗುವುದನ್ನು ಬಿಟ್ಟರೆ ಇವರು ಮೇಕೆದಾಟದಲ್ಲಿ ಏನೂ ಇಟ್ಟಿಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನೀರು ಬಿಡಲ್ಲ ಎಂದು ಹೇಳಿ ನೀರು ಬಿಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ, ರೈತರ ಹಿತ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಇಲಾಖೆಗೆ ಶೇ.50ರಷ್ಟು ಬಜೆಟ್ ಇಟ್ಟಿದ್ದಾರೆ. ಇವರು ಮನುಷ್ಯರಾ. ನಾವಿದ್ದಾಗ ಯಾವುದೇ ಸಂಕಷ್ಟ ಇರಲಿಲ್ಲ. ಲೂಟಿ ಮಾಡುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎನ್‌ಇಪಿಯಿಂದ ಬಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಸಾಧ್ಯ: ಶಾಸಕ ಅಶ್ವತ್ಥನಾರಾಯಣ

ಕಾಂಗ್ರೆಸ್ಸಿಗರಿಗೆ ನಿಜವಾಗಿ ಪ್ರಜ್ಞೆ ಇದೆಯಾ ಎಂದು ಪ್ರಶ್ನಿಸಿದ ಅವರು, ರೈತರ ಬದುಕಿಗೆ ಮಣ್ಣು ಹಾಕಿದ್ದಾರೆ. ಕುಡಿಯುವ ನೀರು ಕೊಡಿ ಅಂದರೆ ಹಳ್ಳಿ ಹಳ್ಳಿಗೆ ರಮ್ಮು, ವಿಸ್ಕಿ, ಬ್ರಾಂದಿ ಕೊಡುವುದಾಗಿ ಹೇಳುತ್ತಾರೆ. ಎಲ್ಲದರಲ್ಲೂ ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವಾಗ ಮುಖ್ಯಮಂತ್ರಿಯಾದರೋ ಆಗೆಲ್ಲಾ ನಡೆಯುತ್ತಿದೆ ಎಂದು ದೂರಿದರು.

ನಮ್ಮ ರೈತರ ಒಂದು ಬೆಳೆಗೆ ನೀರು ಕೊಡುತ್ತಿಲ್ಲ, ತಮಿಳುನಾಡಿನ ಮೂರನೇ ಬೆಳೆಗೆ ನೀರು ಕೊಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದಂತೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಿತ್ತು. ಅವರ ಮನವೊಲಿಸಿ ನಿಮ್ಮ ರೈತರೂ ನಮ್ಮವರೇ, ಅದೇ ರೀತಿ ನಮ್ಮ ರೈತರೂ ಸಹ ನಿಮ್ಮವರೇ. ಕನಿಷ್ಠ ಒಂದು ಬೆಳೆಗಾದರೂ ನೀರು ಉಳಿಸಿಕೊಡಿ ಎಂದು ಅವರ ಮನವೊಲಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕಿತ್ತು. ಅದು ಬಿಟ್ಟು ನ್ಯಾಯಾಲಯ, ಪ್ರಾಧಿಕಾರದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. 

ಕೋರ್ಟ್‌ ಹೊರಗೆ ಕಾವೇರಿ ಸಮಸ್ಯೆ ಪರಿಹಾರಕ್ಕೆ ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

ಒಂದು ವೇಳೆ ಕಾನೂನು ಹೋರಾಟದ ಮೂಲಕವೇ ಸಮಸ್ಯೆ ಬಗೆಹರಿಸುವುದಾದರೆ ತಜ್ಞರ ತಂಡವೊಂದನ್ನು ಕಳುಹಿಸಿ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ನೀಡುವ ಬಿಡುವ ನಿರ್ಧಾರವನ್ನು ಪ್ರಕಟಿಸಲು ಪ್ರಾಧಿಕಾರಕ್ಕೆ ಮನವಿ ಮಾಡಬೇಕಿತ್ತು ಎಂದರು.

Follow Us:
Download App:
  • android
  • ios