ಬೆಂಗಳೂರು (ಅ.16):  ಕೆನರಾ ಬ್ಯಾಂಕ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್‌)ಯಡಿ 250 ಕಡುಬಡ ಹೃದ್ರೋಗಿಗಳ ಚಿಕಿತ್ಸೆಗೆ 25.97 ಲಕ್ಷ ರು. ಆರ್ಥಿಕ ನೆರವು ಹಾಗೂ ಐದು ವ್ಹೀಲ್‌ ಚೇರ್‌ಗಳನ್ನು ನೀಡಿದೆ.

ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೈ ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಅವರಿಗೆ 25,97,500 ರು. ಮೊತ್ತದ ಡಿಡಿ ಮತ್ತು ಐದು ವ್ಹೀಲ್‌ ಚೇರ್‌ಗಳನ್ನು ಹಸ್ತಾಂತರಿಸಿದರು.

ಚಿನ್ನದ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ನೋಡಿ ಅ. 15ರ ಗೋಲ್ಡ್ ರೇಟ್! ..

ಈ ವೇಳೆ ಮಾತನಾಡಿದ ಅವರು, ಕೆನರಾ ಬ್ಯಾಂಕ್‌ ಸಾಮಾಜಿಕ ಹೊಣೆಗಾರಿ ನಿಧಿಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 64 ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ನಿರುದ್ಯೋಗಿ ಯುವಕ-ಯುವತಿಯರಿಗೆ ಅಗತ್ಯ ತರಬೇತಿ ನೀಡುತ್ತಿದೆ. ಅಂತೆಯ ದೇಶಾದ್ಯಂತ 115 ವಿತ್ತೀಯ ಸಾಕ್ಷರತಾ ಕೇಂದ್ರಗಳ ಮುಖಾಂತರ ಬ್ಯಾಂಕಿಂಗ್‌ ಸಾಕ್ಷರತಾ ತಿಳಿವಳಿಕೆ ನೀಡುತಾ ಬಂದಿದೆ ಎಂದು ಹೇಳಿದರು.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಮಾತನಾಡಿ, ನಮ್ಮ ಸಂಸ್ಥೆ ರೋಗಿಗಳ ಹಣಕಾಸಿನ ಸಾಮರ್ಥ್ಯ ಪರಿಗಣಿಸುವುದಿಲ್ಲ. ಬದಲಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಪ್ರಮುಖ ಧ್ಯೇಯವಾಗಿದೆ. ‘ಚಿಕಿತ್ಸೆ ಮೊದಲು, ಹಣ ಪಾವತಿ ನಂತರ’ ಇದು ಸಂಸ್ಥೆಯ ಧ್ಯೇಯವಾಗಿದೆ ಎಂದರು.