ಜಿಂದಾಲ್‌ಗೆ 3,667 ಎಕರೆ ಭೂಮಿ ನೀಡಲು ಸಂಪುಟ ಅಸ್ತು: ಹಿಂದೆ ವಿರೋಧಿಸಿ ಇದೀಗ ಗ್ರೀನ್‌ ಸಿಗ್ನಲ್‌ ಕೊಟ್ಟ ಕಾಂಗ್ರೆಸ್..!

ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಂದಾಲ್ ಸಂಸ್ಥೆಗೆ ಈ ಜಮೀನು ಶುದ್ದಕ್ರಯ ಮಾಡಿಕೊಡಲು ಯತ್ನಿಸುವುದು ಹಾಗೂ ಇದಕ್ಕೆ ಆಗ ವಿರೋಧ ಸ್ಥಾನದಲ್ಲಿದ್ದ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದ ಚೋದ್ಯ ನಡೆದಿತ್ತು. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ತನ್ನ ಹಳೆ ನಿಲುವು ಬದಲಿಸಿ ಜಿಂದಾಲ್‌ಗೆ ಜಮೀನು ನೀಡುವ ನಿರ್ಧಾರ ಮಾಡಿದೆ. 
 

Cabinet agrees to give 3,667 acres of land to Jindal company in ballari gr

ಬೆಂಗಳೂರು(ಆ.23):  ಬಳ್ಳಾರಿ ಬಳಿ ಜೆಎಸ್‌ಡಬ್‌ಲ್ಯೂ ಸ್ಟೀಲ್ ಲಿಮಿಟೆಡ್ (ಜಿಂದಾಲ್) ಕಂಪನಿಗೆ 2006 -07ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮಂಜೂರು ಮಾಡಿದ್ದ 3,667.31 ಎಕರೆ ಜಮೀನನ್ನು ಜಿಂದಾಲ್ ಕಂಪೆನಿಗೆ ಶುದ್ದ ಕ್ರಯ ಮಾಡಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಂದಾಲ್ ಸಂಸ್ಥೆಗೆ ಈ ಜಮೀನು ಶುದ್ದಕ್ರಯ ಮಾಡಿಕೊಡಲು ಯತ್ನಿಸುವುದು ಹಾಗೂ ಇದಕ್ಕೆ ಆಗ ವಿರೋಧ ಸ್ಥಾನದಲ್ಲಿದ್ದ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದ ಚೋದ್ಯ ನಡೆದಿತ್ತು. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ತನ್ನ ಹಳೆ ನಿಲುವು ಬದಲಿಸಿ ಜಿಂದಾಲ್‌ಗೆ ಜಮೀನು ನೀಡುವ ನಿರ್ಧಾರ ಮಾಡಿದೆ. ಬಳ್ಳಾರಿ ಸಂಡೂರು ತಾಲೂಕಿನ ತೋರ ಣಗಲ್ಲು ಮತ್ತು ಕುರೇಕೊಪ್ಪ ಬಳಿಯ 2,000.58 ಎಕರೆ ಜಮೀನಿಗೆ ಪ್ರತಿ ಎಕರೆಗೆ 1,22,200 (1.22 ) 2. ಹಾಗೂ ತೋರಣಗಲ್ಲು, ಮುಸೇನಾಕನಹಳ್ಳಿ, ಯರಬನಹಳ್ಳಿ ಗ್ರಾಮಗಳ 1,666.73 ಎಕರೆ ಜಮೀನಿಗೆ ಪ್ರತಿ ಎಕರೆಗೆ 1,50,635 ರು.ಗಳಂತೆ ನಿಗದಿ ಮಾಡಿ ಶುದ್ದ ಕ್ರಯಕ್ಕೆ ನಿರ್ಧರಿಸಲಾಗಿದೆ.

ಅಸ್ತ್ರಕ್ಕೆ ಪ್ರತ್ಯಸ್ತ್ರ: ಕುಮಾರಸ್ವಾಮಿ ಸೇರಿ ವಿಪಕ್ಷ ನಾಯಕರ ಪ್ರಾಸಿಕ್ಯೂಷನ್‌ಗೆ ಸಂಪುಟ ಒತ್ತಡ

ಈ ಸಂಬಂಧ 2006ರ ಫೆ.2 ರಂದು ಜೆಎಸ್‌ಡಬ್‌ಲ್ಯೂ ಸ್ಟೀಲ್ ಕಂಪನಿಗೆ ಜಮೀನು ಮಂಜೂರು ಮಾಡಿತ್ತು. ಈ ಸಂಬಂಧ ಫೆ.2 2006 ರಂದು 18.10 ಕೋಟಿ ರು., 2007ರಲ್ಲಿ 41 ಕೋಟಿ ರು.ಗಳನ್ನು ಕೆಐಎಡಿಬಿ ಹಾಗೂ ಕೆಪಿಸಿಎಲ್‌ಗೆ ಪಾವತಿಸಲಾಗಿತ್ತು. ಇದೀಗ ಈ ಸಂಬಂಧ ಜಮೀನು ಶುದ್ದ ಕ್ರಯಕ್ಕೆ ಮಂಜೂರಾತಿ ನೀಡಿದ್ದು, 2007ರ ಲೀಸ್ ಕಂಸೇಲ್ ಒಪ್ಪಂದದಂತೆ ಕೆಪಿಸಿಎಲ್ ಗೆ 944 ಎಕರೆ ಪರ್ಯಾಯ ಜಮೀನು ಸ್ವಾಧೀನ ಪ್ರಕ್ರಿಯೆಯಲ್ಲಿ ಹೆಚ್ಚುವರಿ ವೆಚ್ಚ (ಜಿಂದಾಲ್ ನೀಡಿದ್ದಕ್ಕಿಂತ ಹೆಚ್ಚಿನ ಮೊತ್ತ) ತಗುಲಿದರೆ ವ್ಯತ್ಯಾಸದ ಮೊತ್ತವನ್ನು ಜಿಂದಾಲ್ ಭರಿಸಬೇಕು ಎಂಬ ಷರತ್ತು ಹಾಕಿ ಅನುಮೋದಿಸಲಾಗಿದೆ. 

ಏನಿದು ಪ್ರಕರಣ?: 

ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ 2006ರ ಆ.3ರಂದು 2000.58 ಎಕರೆಯನ್ನು ಮಂಜೂರು ಮಾಡಲಾಗಿತ್ತು. ಈ ಒಪ್ಪಂದದ ಪ್ರಕಾರ 2019ರ ಮೇ 27ರಂದು ಅಬ್ಬಲ್ಯೂಟ್ ಸೇಲ್ ಡೀಡ್ ದಿನಾಂಕವಾಗಿತ್ತು. 20075 3.2400 1666.67 2 ಯನ್ನು 10 ವರ್ಷಗಳ ಗುತ್ತಿಗೆ ಅವಧಿಗೆ ಲೀಸ್ ಕಂ ಸೇಲ್ ಅಗ್ರಿಮೆಂಟ್ ಮಾಡಲಾಯಿತು. 2019ರ ಮೇ 27ರಂದು ಸೇಲ್ ಡೀಡ್ ದಿನಾಂಕವಿತ್ತು. ಇದರಂತೆ 2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಂದಿನ ಸಿಎಂ ಕುಮಾರ ಸ್ವಾಮಿ ಜಿಂದಾಲ್ ಕಂಪೆನಿಗೆ 3677 ಎಕರೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿದ್ದರು. ಈ ನಡೆಯನ್ನು ಖಂಡಿಸಿ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅಹೋರಾತ್ರಿ ಧರಣಿ ಆರಂಭಿಸಿದರು.

ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪ ಅಧಿಕಾರಕ್ಕೆ ಏರಿದ ತಕ್ಷಣ ಸದ್ದಿಲ್ಲದೆ ಜಿಂದಾಲ್‌ಗೆ ಭೂಮಿ ನೀಡಲು ಮುಂದಾಗಿದ್ದರು. ಇದನ್ನು ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ವಿರೋಧಿಸಿತ್ತು. ಜತೆಗೆ ನ್ಯಾಯಾಲಯದಲ್ಲೂ ಈ ಬಗ್ಗೆ ಖಾಸಗಿ ದೂರು ದಾಖಲಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಸಂಪುಟ ತೀರ್ಮಾನವನ್ನು ಹಿಂಪಡೆದಿತ್ತು.

Latest Videos
Follow Us:
Download App:
  • android
  • ios