Asianet Suvarna News Asianet Suvarna News

ಹೋಟೆಲ್‌, ಮಾಲ್‌, ಥಿಯೇಟರ್‌ ಮಾಲಿಕರಿಗೆ ‘ಕೊರೋನಾ ದಂಡ’: ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಪ್ಲಾನ್!

ಹೋಟೆಲ್‌, ಮಾಲ್‌, ಥಿಯೇಟರ್‌ ಮಾಲಿಕರಿಗೆ ‘ಕೊರೋನಾ ದಂಡ’!| ಜನರು ಮಾಸ್ಕ್‌ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಪಾಡದಿದ್ದರೆ ಭಾರೀ ದಂಡ| 5000ದಿಂದ 1 ಲಕ್ಷವರೆಗೆ ಬರೆ| ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಪ್ಲಾನ್‌

Business owners to pay if clients do not mask up BBMP plan to Control Covid Situation pod
Author
Bangalore, First Published Dec 6, 2020, 7:14 AM IST

ಬೆಂಗಳೂರು(ಡಿ.06): ಕೊರೋನಾ ಸೋಂಕು ಹರಡುವಿಕೆ ತಡೆಗೆ ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯಗೊಳಿಸಿ, ನಿಯಮ ಉಲ್ಲಂಘಿಸಿದ ವ್ಯಕ್ತಿಗಳಿಗೆ ದಂಡ ವಿಧಿಸುತ್ತಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟು ನಿಟ್ಟಿನ ಪಾಲನೆ ಆಗದಿರುವುದು ಹಾಗೂ ಕೊರೋನಾ ಎರಡನೇ ಅಲೆ ಎದುರಿಸಲು ಬಿಬಿಎಂಪಿ ಈಗ ಹೊಟೇಲ್‌, ಮಾಲ್‌, ಚಿತ್ರಮಂದಿರ ಮತ್ತಿತರ ಮಾಲಿಕರಿಗೆ ಭಾರಿ ಮೊತ್ತದ ದಂಡ ವಿಧಿಸಲು ನಿರ್ಧರಿಸಿದೆ.

ಈವರೆಗೆ ಮಾಸ್ಕ್‌ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ ವ್ಯಕ್ತಿಗಳಿಗೆ ದಂಡ ವಿಧಿಸುತ್ತಿದ್ದ ಬಿಬಿಎಂಪಿ, ಇನ್ನು ಮುಂದೆ ಹೊಟೇಲ್‌, ಮಾಲ್‌, ಚಿತ್ರಮಂದಿರ ಮುಂತಾದ ಕಡೆ ಬರುವ ಸಾರ್ವಜನಿಕರು ಮಾಸ್ಕ್‌ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಸಂಬಂಧಪಟ್ಟಮಾಲೀಕರಿಗೆ ಕನಿಷ್ಠ ಐದು ಸಾವಿರ ರು.ನಿಂದ ಒಂದು ಲಕ್ಷ ರು. ವರೆಗೆ ದಂಡ ವಿಧಿಸುವ ಆದೇಶ ಹೊರಡಿಸಿದೆ.

ದಂಡ ಹೆಚ್ಚಳ; ಇಳಿಕೆ:

ಈ ಹಿಂದೆ ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ರಾಜ್ಯ ಸರ್ಕಾರ ನಗರ ಪ್ರದೇಶದಲ್ಲಿ ಉಲ್ಲಂಘನೆ 200 ರು. ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉಲ್ಲಂಘನೆಗೆ 100 ರು. ದಂಡ ಜಾರಿಗೆ ತಂದಿತ್ತು. ಇದಾಗ ಬಳಿಕವೂ ಕೋವಿಡ್‌ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾದ್ದರಿಂದ ಈ ದಂಡ ಪ್ರಮಾಣವನ್ನು ಕ್ರಮವಾಗಿ ನಗರ ಪ್ರದೇಶಕ್ಕೆ 1,000 ರು. ಹಾಗೂ ಗ್ರಾಮೀಣ ಪ್ರದೇಶಕ್ಕೆ 500 ರು. ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ದಂಡ ಮೊತ್ತ ಹೆಚ್ಚಳಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶಕ್ಕೆ 250 ರು. ಹಾಗೂ ಗ್ರಾಮೀಣ ಪ್ರದೇಶಕ್ಕೆ 100 ರು.ಗೆ ಇಳಿಕೆ ಮಾಡಿತ್ತು.

ನಿಯಮ ತಿದ್ದುಪಡಿ:

ಇದೀಗ ಕೋವಿಡ್‌ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಹಾಗೂ ಕೋವಿಡ್‌ ನಿಯಮ ಉಲ್ಲಂಘನೆ ಪ್ರಕರಣಗಳು ಮತ್ತಷ್ಟುಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020ರ ವಿಧಿ 04, 15 ಹಾಗೂ 17ರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಾಗೂ ಮಾಸ್ಕ್‌ ಧರಿಸುವ ಕುರಿತಂತೆ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.

ಬಿಬಿಎಂಪಿ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್‌ ಮಾಷಲ್‌ರ್‍ಗಳು ಬಿಬಿಎಂಪಿ ವ್ಯಾಪ್ತಿಯ ಹೋಟೆಲ್‌ಗಳು, ಕಲ್ಯಾಣ ಮಂಟಪಗಳು, ಚಿತ್ರಮಂದಿರ, ಮಾಲ್‌ಗಳು, ಸಭೆ ಸಮಾರಂಭಗಳು, ಅಂಗಡಿ ಮುಂಗಟ್ಟುಗಳ ಮಾಲೀಕರು ತಮ್ಮ ಆವರಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್‌ ಧರಿಸುವ ಕುರಿತು ಪರಿಶೀಲನೆ ಮಾಡಬೇಕು. ತಪ್ಪಿದಲ್ಲಿ ಮಾಲೀಕರಿಗೆ ಒಂದು ಲಕ್ಷ ರು. ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾರಿಗೆ, ಎಷ್ಟುದಂಡ?

5000 ಹೋಟೆಲ್‌, ದರ್ಶಿನಿ, ಅಂಗಡಿ, ಬೀದಿಬದಿ ವರ್ತಕರು

25000 ಸ್ಟೋರ್‌, ಖಾಸಗಿ ಬಸ್‌ ನಿಲ್ದಾಣ, ಇತರೆ ಸಾರ್ವಜನಿಕ ಸ್ಥಳ

50000 ಎಸಿ ರೆಸ್ಟೋರೆಂಟ್‌, ಪಾರ್ಟಿ ಹಾಲ್‌, ಥಿಯೇಟರ್‌, ಮಾಲ್‌

100000 ಸ್ಟಾರ್‌ ಹೋಟೆಲ್‌, 500 ಆಸನಕ್ಕಿಂತ ದೊಡ್ಡ ಕಲ್ಯಾಣಮಂಟಪ

50000 ಸಭೆ, ರಾರ‍ಯಲಿ ಮತ್ತಿತರೆ ಕಾರ್ಯಕ್ರಮಗಳ ಆಯೋಜಕರು

Follow Us:
Download App:
  • android
  • ios