ಬಳ್ಳಾರಿ: ಎರಡು ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 50 ಮೊರಬ ಕ್ರಾಸ್ ಬಳಿ ಎಸ್.ಆರ್.ಎಸ್ ಸ್ಲೀಪರ್ ಮತ್ತು ಎನ್ ಇ ಕೆ ಎಸ್ ಆರ್ ಟಿ ಸಿ ಯ ಕರೋನ ಸ್ಲೀಪರ್  ಮುಖಾಮುಖಿ ಡಿಕ್ಕಿಯಾಗಿವೆ. 

ಅಪಘಾತದ ವೇಳೆ  ಕರೋನ ಸ್ಲೀಪರ್ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 18 ಮಂದಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಕೂಡ್ಲಿಗಿ ಪೋಲಿಸರು ಸ್ಥಳಕ್ಕೆ‌ ಭೇಟಿ  ನೀಡಿ ಪರಿಶಿಲನೆ ನಡೆಸಿದ್ದು,  ಉಳಿದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.