ಬೀದರ್: ಎಮ್ಮೆ ಕದ್ದು 57 ವರ್ಷ ತಲೆಮರೆಸಿಕೊಂಡಿದ್ದ ಕಳ್ಳ ಅರೆಸ್ಟ್!
ಎಮ್ಮೆ ಕಳವು ಮಾಡಿದ್ದ ಕಳ್ಳನೊಬ್ಬ ಸರಿಸುಮಾರು 57 ವರ್ಷದ ಬಳಿಕ ಸಿಕ್ಕಿಬಿದ್ದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.
ವರದಿ:- ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೀದರ್ (ಸೆ.12): ಎಮ್ಮೆ ಕಳವು ಮಾಡಿದ್ದ ಕಳ್ಳನೊಬ್ಬ ಸರಿಸುಮಾರು 57 ವರ್ಷದ ಬಳಿಕ ಸಿಕ್ಕಿಬಿದ್ದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.
ಎಮ್ಮೆ ಕದ್ದು ತಲೆ ಮರೆಸಿಕೊಂಡಿದ್ದ ಆರೋಪಿಯನ್ನ 57 ವರ್ಷದ ಬಳಿಕ ಬೀದರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಟಾಕಳಗಾಂವ್ ಗ್ರಾಮದ ನಿವಾಸಿ ಗಣಪತಿ ವಿಠ್ಠಲ ವಾಗ್ಮೋರೆ ಎಂಬುವರು 1965 ಎಪ್ರಿಲ್ 25 ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮುರಳಿಧರ್ ಮಾಣಿಕರಾವ್ ಮಾಣಿಕರಾವ್ ಕುಲಕರ್ಣಿ ಎಂಬುವರ ಎರಡು ಎಮ್ಮೆ ಮತ್ತು ಒಂದು ಎಮ್ಮೆ ಕರುವನ್ನ ಕದ್ದುಕೊಂಡು ಪರಾರಿಯಾಗಿದ್ದ.
Dharwad Crime: 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿ ಬಂಧನ
ಸುಮಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ ಗೆ ಹಾಜರಾಗದೆ ಇರುವ LPR ಪ್ರಕರಣ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷದ ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್.ಎಸ್. ತಿಳಿಸಿದ್ದಾರೆ.
ವಿಠ್ಠಲ ವಾಗ್ಮೋರೆ ಕಳ್ಳತನ ಮಾಡಿದಾಗ ಈತನಿಗೆ ವಯಸ್ಸು ಕೇವಲ 20 ವರ್ಷ. ಈಗ 80ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಾನೆ! ಇನ್ನು ಎಮ್ಮೆ ಕದ್ದ ವಾರದಲ್ಲಿಯೇ ಈತ ಭಾಲ್ಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪೊಲೀಸರು ಈತನನ್ನ ಬಂಧಿಸಿದ್ದರು.
ಬೆಂಗಳೂರು: ತಲೆಮರೆಸಿಕೊಂಡಿದ್ದ ರೌಡಿ ಕಡಲೆಕಾಯಿ ಪರಿಷೆಗೆ ಬಂದು ಸಿಕ್ಕಿಬಿದ್ದ..!
ಆಗ ಜಾಮೀನಿನ ಮೇಲೆ ಹೊರ ಬಂದಿದ್ದ ಗಣಪತಿ ವಿಠ್ಠಲ ವಾಗ್ಮೋರೆ, ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 57 ವರ್ಷದಿಂದ ಪೊಲೀಸರು ಈತನನ್ನ ಹುಡುಕುತ್ತಲೇ ಇದ್ದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕದ್ದುಮುಚ್ಚಿ ಓಡಾಡುತ್ತಿದ್ದ. ಆದರೆ ಪೊಲೀಸರು ಈತನನ್ನು ಬಂಧಿಸಿ, ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.