ಬೆಂಗಳೂರು, [ಡಿ.31]: ಜಗತ್ತಿನಾದ್ಯಂತ ಜನರು 2020ನೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದು ಈಗಿಂದಲೇ ಸಂಭ್ರಮ ಶುರುವಾಗಿದೆ.

ಇನ್ನು ಕರ್ನಾಟದ ನಾನಾ ಭಾಗಗಳಲ್ಲಿ ಯುವಕರು ವಿಶೇಷವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿರುವ ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

2019 Flashback:1 ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೇನಾಯ್ತು?

 ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿರುವ ನಾಡಿನ ಸಮಸ್ತ ಜನತೆಯಲ್ಲಿ ಕಳಕಳಿಯ ಪ್ರಾರ್ಥನೆ. ಸಭ್ಯತೆ ಕಾಪಾಡಿಕೊಳ್ಳಿ, ಆಚರಣೆ ಹಿತಮಿತವಾಗಿರಲಿ. 

ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಿರಿ. ಸುರಕ್ಷಿತವಾಗಿ ಸಿಹಿ ನೆನಪುಗಳೊಂದಿಗೆ ಈ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ನಿಮ್ಮ ಸುವರ್ಣ ನ್ಯೂಸ್.ಕಾಂ ವಿನಂತಿ ಇಷ್ಟೇ, ನ್ಯೂ ಇಯರ್ ಅನ್ನು ಹೊಸತನದಿಂದ ಬರಮಾಡಿಕೊಳ್ಳಿ. ಸುರಕ್ಷಿತವಾಗಿ ಆಚರಿಸಿ. ಈ ಹೊಸ ವರ್ಷ ಎಲ್ಲರ ಬಾಳಲ್ಲೂ ಹರುಷ ತರಲಿ.